ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳುವಷ್ಟು ದಾರಿದ್ರ್ಯಬಂದಿಲ್ಲ; ನನಗೆ ಬೇಕು ಅಂದ್ರೆ ಜನರೇ ಕೊಡಿಸ್ತಾರೆ: DKS ಗೆ HDK ತಿರುಗೇಟು

ಪಾಪದ ಹಣದಿಂದ ಬಟ್ಟೆ ತೆಗೆದುಕೊಳ್ಳೋ ದರಿದ್ರ ಪರಿಸ್ಥಿತಿ ನನಗೆ ಬಂದಿಲ್ಲ, ನನಗೆ ಬಟ್ಟೆ ಬೇಕು ಅಂದ್ರೆ ನನ್ನ ಜನರೇ ಕೊಡಿಸ್ತಾರೆ ಅಂತಾ ಡಿಕೆ ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.
Union Minister HD Kumaraswamy
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
Updated on

ಬೆಂಗಳೂರು: ಪಾಪದ ದುಡ್ಡಲ್ಲಿ ಬಟ್ಟೆ ತೆಗೆಸಿಕೊಳ್ಳವಷ್ಟು ದಾರಿದ್ರ್ಯ ಇನ್ನೂ ನನಗೆ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಜೆಪಿನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ನನಗೆ ಅವರಿಂದ ಬಟ್ಟೆ ತೆಗೆದುಕೊಳ್ಳೋ‌ ದರಿದ್ರ ಬಂದಿಲ್ಲ. ಅದು ಜನರ ದುಡ್ಡನ್ನ ಲೂಟಿ ಮಾಡಿ ಸಂಪಾದನೆ ಮಾಡ್ತಿರೋ ಪಾಪದ ಹಣ. ಪಾಪದ ಹಣದಿಂದ ಬಟ್ಟೆ ತೆಗೆದುಕೊಳ್ಳೋ ದರಿದ್ರ ಪರಿಸ್ಥಿತಿ ನನಗೆ ಬಂದಿಲ್ಲ, ನನಗೆ ಬಟ್ಟೆ ಬೇಕು ಅಂದ್ರೆ ನನ್ನ ಜನರೇ ಕೊಡಿಸ್ತಾರೆ ಅಂತಾ ಡಿಕೆ ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

2028ಕ್ಕೆ ಜೆಡಿಎಸ್-ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್‌ ಕುಮಾರಸ್ವಾಮಿಗೆ ಹೊಸ ಜುಬ್ಬಾ ಪಂಚೆ ಕೊಡಿಸುತ್ತೇನೆ ಎಂದು ಹೇಳಿದ್ದರು.

Union Minister HD Kumaraswamy
ಕುಮಾರಸ್ವಾಮಿಗೆ ಅಂಗಿ, ಪಂಚೆ, ಜುಬ್ಬಾ ಕಳುಹಿಸೋಣ; ಇಡಿ ತನಿಖೆಗೆ ನಮ್ಮ ಸಹಕಾರ: ಡಿ.ಕೆ ಶಿವಕುಮಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com