
ಬೆಂಗಳೂರು: ಸದ್ಗುರು ಜಗದೀಶ್ ವಾಸುದೇವ್ ಅವರ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರ ಕುರಿತು ಸಚಿವ ರಾಜಣ್ಣ ಅವರು ತೀವ್ರವಾಗಿ ಕಿಡಿಕಾರಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಯಾರೆಂದು ನನಗೆ ತಿಳಿದಿಲ್ಲ ಎಂದು ಒಮ್ಮೆ ಸದ್ಗುರು ಹೇಳಿದ್ದರು. ಅವರೊಂದಿಗೆ ಡಿಕೆ.ಶಿವಕುಮಾರ್ ಹೇಗೆ ವೇದಿಕೆ ಹಂಚಿಕೊಂಡರು. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಹೇಳಿದರು.
ನಮ್ಮ ಹಿರಿಯ ನಾಯಕ ರಾಹುಲ್ ಗಾಂಧಿಯವರನ್ನು ಸದ್ಗುರುಗಳು ಅವಮಾನಿಸಿದ್ದಾರೆಂದು ಡಿಕೆ.ಶಿವಕುಮಾರ್ ಅವರಿಗೆ ತಿಳಿದಿಲ್ಲವೇ? ರಾಜಕಾರಣದಲ್ಲಿ ಯಾರ್ಯಾರು, ಏನೇನು ಮಾತನಾಡುತ್ತಾರೆ ಎಂಬುದು ನನಗಿಂತಲೂ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ ಎಂದು ತಿಳಿಸಿದರು.
ಮತ್ತೊಬ್ಬ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಈ ವಿಷಯ ಪಕ್ಷದ ಕೇಂದ್ರ ನಾಯಕತ್ವದ ನಿರ್ಧಾರಕ್ಕೆ ಬಿಟ್ಟದ್ದು ಎಂದು ಹೇಳಿದರು.
ಎಂ.ಬಿ. ಪಾಟೀಲ್ ಅವರು ಮಾತನಾಡಿ, ಶಿವಕುಮಾರ್ ಹಿಂದೂ ಧರ್ಮವನ್ನು ಅನುಸರಿಸುವವರು. ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗುವುದರಲ್ಲಿ ತಪ್ಪೇನಿದೆ? ಎಂದು ವಾದಿಸಿದರು,
ಹಿಂದುತ್ವ ಬಿಜೆಪಿಯ ಆಸ್ತಿಯಲ್ಲ. ಶಿವಕುಮಾರ್ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಲು ಶ್ರಮಿಸುತ್ತಿದ್ದಾರೆಂದು ಹೇಳಿದರು.
Advertisement