11 ವರ್ಷಗಳಿಂದ ನೀವೆ ಅಧಿಕಾರದಲ್ಲಿ‌ ಮೊಳೆ ಹೊಡೆದು ಕುಳಿತುಕೊಂಡಿದ್ದೀರಿ, ನೀವೇನು ಕಡಿದು ಕಟ್ಟೆ ಹಾಕಿದ್ದೀರಿ?

ನಕ್ಸಲ್ ಸಮಸ್ಯೆಗೆ ಕಾಂಗ್ರೆಸ್ ನೀತಿ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ‌. ಪ್ರಧಾನಿ ಮೋದಿಯವರಿಗೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಒಂದು ಕಾಂಗ್ರೆಸ್ ಇರಬೇಕು ಇಲ್ಲವೆ ನೆಹರು ಇರಬೇಕು. ಇವರೆಡನ್ನು ಕನವರಿಸದೆ ಪ್ರಧಾನಿ ಜೀವಿಸಲಾರರು‌.
Dinesh Gundu Rao
ದಿನೇಶ್ ಗುಂಡೂರಾವ್
Updated on

ಬೆಂಗಳೂರು: ಕಳೆದ 11 ವರ್ಷಗಳಿಂದ ನೀವೆ ಅಧಿಕಾರದಲ್ಲಿ‌ ಮೊಳೆ ಹೊಡೆದು ಕುಳಿತುಕೊಂಡಿದ್ದೀರಿ. ಇಷ್ಟು ದಿನ ನೀವು ಕಡಿದು ಕಟ್ಟೆ ಹಾಕಿರುವುದು ಏನು.? ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಹಾಗೂ ನೆಹರು ಮೇಲೆ ಗೂಬೆ ಕೂರಿಸುವುದೆ ನಿಮ್ಮ ಕೆಲಸವೆ..? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನೀತಿಗಳಿಂದಾಗಿ ದಶಕಗಳಿಂದ ನಕ್ಸಲಿಸಂಗೆ ಪ್ರೋತ್ಸಾಹ ಸಿಕ್ಕಿದೆ ಎಂಬ ಮೋದಿಯವರ ಹೇಳಿಕೆ ವಿರುದ್ಧ ದಿನೇಶ್ ಗುಂಡೂರಾವ್ ಅವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಕ್ಸಲ್ ಸಮಸ್ಯೆಗೆ ಕಾಂಗ್ರೆಸ್ ನೀತಿ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ‌. ಪ್ರಧಾನಿ ಮೋದಿಯವರಿಗೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಒಂದು ಕಾಂಗ್ರೆಸ್ ಇರಬೇಕು ಇಲ್ಲವೆ ನೆಹರು ಇರಬೇಕು. ಇವರೆಡನ್ನು ಕನವರಿಸದೆ ಪ್ರಧಾನಿ ಜೀವಿಸಲಾರರು‌ ಎಂದು ವ್ಯಂಗ್ಯವಾಡಿದ್ದಾರೆ.

ಮೋದಿಯವರ ವರಸೆ ಹೇಗಿದೆ ಎಂದರೆ, ದೇಶದ GDP ಕುಸಿದರೆ ಅದಕ್ಕೆ ಕಾಂಗ್ರೆಸ್ ಕಾರಣ ಎನ್ನುತ್ತಾರೆ ಇಲ್ಲವೆ ನೆಹರು ಕಾರಣ ಎನ್ನುತ್ತಾರೆ. ನಿರುದ್ಯೋಗ, ರೂಪಾಯಿ ಅಪಮೌಲ್ಯಕ್ಕೂ ಇದೆ ಕಾರಣ ಕೊಡುತ್ತಾರೆ. ಕೊನೆಗೆ‌ ಮಳೆ ಜಾಸ್ತಿ ಬಂದರೂ ನೆಹೆರು ಕಾರಣ, ಮಳೆ ಬಾರದೆ ಇದ್ದರೂ ನೆಹರು ಕಾರಣ ಎನ್ನುತ್ತಾರೆ. ಇಂತಹವರಿಗೆ ಏನನ್ನಬೇಕು.

ಅಲ್ಲಾ ಸ್ವಾಮಿ ಮೋದಿಯವರೆ, ಕಳೆದ 11 ವರ್ಷಗಳಿಂದ ನೀವೆ ಅಧಿಕಾರದಲ್ಲಿ‌ ಮೊಳೆ ಹೊಡೆದು ಕುಳಿತುಕೊಂಡಿದ್ದೀರಿ. ಇಷ್ಟು ನೀವು ಕಡಿದು ಕಟ್ಟೆ ಹಾಕಿರುವುದು ಏನು.? ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ಹಾಗೂ ನೆಹರು ಮೇಲೆ ಗೂಬೆ ಕೂರಿಸುವುದೆ ನಿಮ್ಮ ಕೆಲಸವೆ..? ತಮ್ಮನ್ನು ತಾವು ಜೇಮ್ಸ್‌ ಬಾಂಡ್ ಎಂದು ಭಾವಿಸಿರುವ ನಿಮಗೆ ಕಳೆದ 11 ವರ್ಷಗಳಿಂದ ನಕ್ಸಲ್ ಸಮಸ್ಯೆ ಪರಿಹಾರ ಮಾಡಲು ಸಾಧ್ಯವಾಗಲಿಲ್ಲವೆ.? ಎಂದು ಪ್ರಶ್ನಿಸಿದ್ದಾರೆ.

Dinesh Gundu Rao
ಸೌಗತ್-ಎ-ಮೋದಿ ಹೆಸರಲ್ಲಿ ಈದ್ ಕಿಟ್ ಕೊಡುತ್ತಿದ್ದೀರಿ, ಇದು ತುಷ್ಠೀಕರಣವಲ್ಲವೆ?: ದಿನೇಶ್ ಗುಂಡೂರಾವ್ ಪ್ರಶ್ನೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com