ನಮ್ಮ ಕ್ಷಿಪಣಿಗಳು ಪಾಕಿಸ್ತಾನಕ್ಕಿಂತ ಕಾಂಗ್ರೆಸ್‌ ಪಕ್ಷವನ್ನೇ ಹೆಚ್ಚು ನೋಯಿಸಿದಂತಿದೆ: BJP

ಪ್ರಧಾನಿ ಮೋದಿ ವಿರುದ್ಧದ ತಮ್ಮ ನಿರಂತರ ಪ್ರಚಾರದಲ್ಲಿ, ನಮ್ಮ ಪಡೆಗಳು ಪ್ರದರ್ಶಿಸಿದ ಅಪ್ರತಿಮ ಶೌರ್ಯ ಮತ್ತು ಕಾರ್ಯತಂತ್ರದ ಪ್ರತಿಭೆಯನ್ನು ಕಾಂಗ್ರೆಸ್ ನಿರ್ಲಕ್ಷಿಸಿದಂತೆ ತೋರುತ್ತದೆ.
BJP (file pic)
ಬಿಜೆಪಿ (ಸಂಗ್ರಹ ಚಿತ್ರ)online desk
Updated on

ಬೆಂಗಳೂರು: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ಪಾಕಿಸ್ತಾನಿಗಳಿಗಿಂತ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಹೆಚ್ಚು ನೋವು ಮಾಡಿರುವಂತೆ ಕಾಣಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಈ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಇದು ತುಂಬಾ ವಿಪರ್ಯಾಸ. ಕೆಲವು ಕಾಂಗ್ರೆಸ್ ನಾಯಕರು ಮಾಡಿದ ಹೇಳಿಕೆಗಳು ಪಾಕಿಸ್ತಾನ ಮಿಲಿಟರಿಯ ಅಧಿಕೃತ ಮಾಹಿತಿಗಳಲ್ಲಿ ಕಾಣಿಸಿಕೊಂಡಿವೆ. ಇದನ್ನು ಅದರ ನಿರೂಪಣೆಯನ್ನು ದೃಢೀಕರಿಸಲು ಮತ್ತು ಪುಷ್ಟೀಕರಿಸಲು ಬಳಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಕೂಡ ಭಾರತದ ಮಿಲಿಟರಿ ಕ್ರಮಗಳನ್ನು ವಿರೋಧಿಸಿದ್ದಕ್ಕಾಗಿ ಪಾಕಿಸ್ತಾನಿ ಮಾಧ್ಯಮಗಳಿಂದ ಪ್ರಶಂಸೆಯನ್ನು ಪಡೆದರು. ಆದರೆ, ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪಾಕಿಸ್ತಾನವು ಬಿಜೆಪಿಯ ಶತ್ರು, ಕಾಂಗ್ರೆಸ್‌ನದ್ದಲ್ಲ ಎಂದು ತೋರಿಸುವಷ್ಟು ದೂರ ಹೋಗಿದ್ದಾರೆಂದು ಹೇಳಿದ್ದಾರೆ.

ಪಾಕಿಸ್ತಾನದ ಬಗ್ಗೆ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಮೃದು ನಿಲುವನ್ನು ಗಮನಿಸಿದರೆ, ನಮ್ಮ ಸಶಸ್ತ್ರ ಪಡೆಗಳ ನಿಸ್ಸಂದಿಗ್ಧ ವಿಜಯವನ್ನು ದುರ್ಬಲಗೊಳಿಸುವ ಮೂಲಕ ಅವರು ನಿಖರವಾಗಿ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ? ಪ್ರಧಾನಿ ಮೋದಿ ವಿರುದ್ಧದ ತಮ್ಮ ನಿರಂತರ ಪ್ರಚಾರದಲ್ಲಿ, ನಮ್ಮ ಪಡೆಗಳು ಪ್ರದರ್ಶಿಸಿದ ಅಪ್ರತಿಮ ಶೌರ್ಯ ಮತ್ತು ಕಾರ್ಯತಂತ್ರದ ಪ್ರತಿಭೆಯನ್ನು ಕಾಂಗ್ರೆಸ್ ನಿರ್ಲಕ್ಷಿಸಿದಂತೆ ತೋರುತ್ತದೆ. ನಮ್ಮ ಸಾಧನೆಗಳ ಪ್ರಮಾಣವನ್ನು ಅವರು ಅರಿತುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ಆಪರೇಷನ್ ಸಿಂಧೂರ್ ಅದ್ಭುತ ಯಶಸ್ಸನ್ನು ಕಂಡಿದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದೊಳಗಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಆಳವಾಗಿ ದಾಳಿ ಮಾಡಿ, ಹೆಚ್ಚಿನ ಮೌಲ್ಯದ ಗುರಿಗಳನ್ನು ನಿರ್ಮೂಲನೆ ಮಾಡಿದೆ. ಅವುಗಳೆಂದರೆ...

  • ಮುದಾಸರ್ ಖಾದಿಯಾನ್ ಖಾಸ್ (ಅಕಾ ಅಬು ಜುಂದಾಲ್) – ಜೆ & ಕೆ ಭಯೋತ್ಪಾದಕ ಕಾರ್ಯಾಚರಣೆಗಳು ಮತ್ತು 2008 ರ ಮುಂಬೈ ದಾಳಿಗಳಲ್ಲಿ ಪ್ರಮುಖ ವ್ಯಕ್ತಿ; ಆತ ಭಾರತ, ಯುಎಸ್ ಮತ್ತು ಯುಎನ್ ನಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದ.

  • ಹಫೀಜ್ ಮುಹಮ್ಮದ್ ಜಮೀಲ್ – ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಭಯೋತ್ಪಾದಕ.

  • ಮೊಹಮ್ಮದ್ ಯೂಸುಫ್ ಅಜರ್ (ಅಕಾ ಮೊಹಮ್ಮದ್ ಸಲೀಂ ಘೋಸಿ ಸಹಾಬ್) – ಐಸಿ 814 ಅಪಹರಣ, ಡೇನಿಯಲ್ ಪರ್ಲ್ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಮತ್ತು ಮುಂಬೈ ಮತ್ತು ಪಠಾಣ್ಕೋಟ್-ಪುಲ್ವಾಮಾ ದಾಳಿಗಳಿಗೆ ಸಂಬಂಧಿಸಿದ್ದ.

  • ಖಾಲಿದ್ (ಅಬು ಆಕಾಶ) – ಜೆ & ಕೆ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದಾನೆ.

  • ಮೊಹಮ್ಮದ್ ಹಸನ್ ಖಾನ್ – ನಗ್ರೋಟಾ ದಾಳಿಯ ಹಿಂದಿನ ಮಾಸ್ಟರ್ ಮೈಂಡ್.

  • ಅಬ್ದುಲ್ ಮಲಿಕ್ ರೌಫ್ – ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳಿಗೆ ಕಾರಣ.

  • ಮುದಾಸೀರ್ ಅಹ್ಮದ್ – ಸೋನ್‌ಮಾರ್ಗ್ ದಾಳಿಗೆ ಸಂಬಂಧಿಸಿದೆ.

  • ಮೌಲಾನಾ ಅಬ್ದುಲ್ ರೌಫ್ ಅಸ್ಗರ್ (ರೌಫ್ ಅಜರ್) – ಮಸೂದ್ ಅಜರ್ ಅವರ ಸಹೋದರ ಮತ್ತು ಭಾರತೀಯ ಸಂಸತ್ತು ಮತ್ತು ಪಠಾಣ್‌ಕೋಟ್ ದಾಳಿಯ ಮಾಸ್ಟರ್‌ ಮೈಂಡ್.

  • ಈ ವ್ಯಕ್ತಿಗಳಲ್ಲಿ ಪ್ರತಿಯೊಬ್ಬರೂ ಗೊತ್ತುಪಡಿಸಿದ ಭಯೋತ್ಪಾದಕರಾಗಿದ್ದರು. ಅವರಲ್ಲಿ ಅನೇಕರನ್ನು ಭಾರತ, ಅಮೆರಿಕಾ ಮತ್ತು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಿದೆ. ಇದಲ್ಲದೆ, ಭಾರತೀಯ ಪಡೆಗಳು 11 ಪಾಕಿಸ್ತಾನಿ ವಾಯುಪಡೆಯ ನೆಲೆಗಳನ್ನು ನಿಷ್ಕ್ರಿಯಗೊಳಿಸಿದೆ. ಇದರಿಂದ ಪಾಕಿಸ್ತಾನ ಕದನ ವಿರಾಮವನ್ನು ಬಯಸುವಂತೆ ಒತ್ತಾಯಿಸಿತು ಎಂದು ತಿಳಿಸಿದ್ದಾರೆ.

BJP (file pic)
ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಆಗಿದೆ ಎನ್ನುವುದು ತಪ್ಪು; ಮೋದಿ-ಸೇನಾಪಡೆ ಶಕ್ತಿ ಮುಂದೆ ಪಾಕ್ ಮಂಡಿಯೂರಿದೆ: HDK

ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅವರು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರು ಇಂದಿರಾ ಗಾಂಧಿ ಅವರ ನಿಜವಾದ ಉತ್ತರಾಧಿಕಾರಿ ಅಂತ ಭಾವಿಸಿದ್ದಾರೆಯೇ ಇಲ್ಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (INC) ತನ್ನ ರಾಷ್ಟ್ರೀಯವು ತನ್ನ ಸಂವಹನವನ್ನು ಜೂನಿಯರ್ ಖರ್ಗೆ ಅವರಿಗೆ ಹೊರಗುತ್ತಿಗೆ ನೀಡಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಮಾನ್ಯ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕಾ ಖರ್ಗೆ ಅವರೇ ಕಲಬುರಗಿಯ ಜನರು SSLC/ 10 ನೇ ತರಗತಿಯ ಬೋರ್ಡ್ ಪರೀಕ್ಷೆಯ ಕಾರ್ಯಕ್ಷಮತೆಯಲ್ಲಿ ಕಳಪೆ ಪ್ರದರ್ಶನ ತೋರಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಲಬುರಗಿ ಏಕೆ ಕೆಳ ಮಟ್ಟದಲ್ಲಿದೆ ಎಂದು ಅಲ್ಲಿನ ಜನ ಕೇಳುತ್ತಿದ್ದಾರೆ. ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕತೆಯ ಬಗ್ಗೆ ಕಾಮೆಂಟ್ ಮಾಡುವ ಮೊದಲು, ನೀವು ಕಲಬುರಗಿಯ ಮಾನವ ಅಭಿವೃದ್ಧಿಯ ಬಗ್ಗೆ ನಿಮ್ಮ ಜ್ಞಾನ ದರ್ಶನವನ್ನು ದಯವಿಟ್ಟು ಸ್ವಲ್ಪ ವಿಸ್ತರಿಸಬಹುದೇ ಎಂದು ಕಾಲೆಳೆದಿದ್ದಾರೆ.

ಮುಂದುವರಿದು ಹಿರಿಯ ಸಹೋದರನಾಗಿ ನಿಮಗೆ ನನ್ನ ಸಣ್ಣ ಸಲಹೆ. ನಿಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರು ರಾಹುಲ್‌ ಗಾಂಧಿ ಅವರ ಮೇಲಿನ ವಿಶ್ವಾಸವನ್ನು ಕಳೆದುಕೊಂಡು ಇದ್ದಕ್ಕಿದ್ದಂತೆ ಇಂದಿರಾ ಗಾಂಧಿಯನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಒಂದು ದಿನ ನೀವು ಇಂದಿರಾ ಗಾಂಧಿಯವರ ಉತ್ತರಾಧಿಕಾರಿಯಾಗಬಹುದು ಎಂಬ ಭ್ರಮೆಯಲ್ಲಿರಬೇಡಿ. ನಿಮ್ಮ ತಂದೆ ಪಕ್ಷಕ್ಕೆ 50 ವರ್ಷಗಳ ಸೇವೆ ಸಲ್ಲಿಸಿದ ನಂತರ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಲು ಸಹ ಸಾಧ್ಯವಾಗಲಿಲ್ಲ. ಇಂದಿರಾ ಗಾಂಧಿ ಅವರ ಉತ್ತರಾಧಿಕಾರಿಯಾಗುವ ಕನಸು ಕಾಣಲು ನಿಮಗೆ ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೇ ಪಾಕಿಸ್ತಾನವು ತನ್ನ ಪತ್ರಿಕಾಗೋಷ್ಠಿಗಳಲ್ಲಿ ಭಾರತದ ಮೇಲೆ ದಾಳಿ ಮಾಡಲು ಮತ್ತು ಅವಮಾನಿಸಲು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೀಡಿಯೊ ಹೇಳಿಕೆಗಳನ್ನು ಬಳಸುತ್ತಿದೆ. ಅಲ್ಲದೇ ತನ್ನನ್ನು ತಾನು ಮುಗ್ಧ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನವು ತನ್ನ ಸಂವಹನವನ್ನು / ಕಮ್ಯುನಿಕೇಷನ್ ಅನ್ನು ಭಾರತೀಯ ಕಾಂಗ್ರೆಸ್‌ಗೆ ಹೊರುಗುತ್ತಿಗೆ ನೀಡಿದೆಯೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com