ಅರ್ಧಹಾದಿ ಸವೆದುಬಂದ ಕಾಂಗ್ರೆಸ್ ಸರ್ಕಾರ: ಆಡಳಿತ, ರಾಜಕೀಯ ಒಳನೋಟ

ಇದೇ ನವೆಂಬರ್ 20ಕ್ಕೆ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರಾವಧಿಯ ಮೊದಲಾರ್ಧವನ್ನು ಪೂರ್ಣಗೊಳಿಸುತ್ತಿದೆ.
CM and DCM
ಸಿಎಂ ಮತ್ತು ಡಿಸಿಎಂ
Updated on

ಮೇ 2023 ರಲ್ಲಿ, ಕರ್ನಾಟಕದಲ್ಲಿ ಐದು ಖಾತರಿ ಯೋಜನೆಗಳ ಮೂಲಕ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಬಗ್ಗೆ ಜನರು ಆಶಾದಾಯಕವಾಗಿದ್ದರು. ಇದೇ ನವೆಂಬರ್ 20ಕ್ಕೆ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರಾವಧಿಯ ಮೊದಲಾರ್ಧವನ್ನು ಪೂರ್ಣಗೊಳಿಸುತ್ತಿದೆ. ಇಂದು ನೋಡಿದರೆ ಕಾಂಗ್ರೆಸ್ ಪಕ್ಷ ರಾಜಕೀಯ ಅನಿಶ್ಚಿತತೆ ಮತ್ತು ವಿವಾದಗಳಿಂದ ಬಳಲುತ್ತಿರುವಂತೆ ಕಂಡುಬರುತ್ತಿದ್ದು, ಅದರ ವರ್ಚಸ್ಸಿಗೆ ಧಕ್ಕೆ ತಂದಿದೆ.

ಐದು ಪ್ರಮುಖ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವುದು ಕಳೆದ ಎರಡೂವರೆ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತದ ಗುರಿಯಾಗಿದ್ದರೆ, ನಾಯಕತ್ವದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸೋತಿತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದವು ಸರ್ಕಾರದ ಸಾಧನೆಗಳಿಗಿಂತ ಹೆಚ್ಚು ಸುದ್ದಿಯಲ್ಲಿದೆ. ಅಧಿಕಾರ ಹಂಚಿಕೆ ಒಪ್ಪಂದವಾಗಿತ್ತೇ ಎಂಬ ಬಗ್ಗೆ ಪಕ್ಷದ ಕೇಂದ್ರ ನಾಯಕತ್ವ ಇನ್ನೂ ಅದನ್ನು ತಳ್ಳಿಹಾಕಿಲ್ಲ. ಆರಂಭದಿಂದಲೂ ಇದ್ದ ಅನಿಶ್ಚಿತತೆಯ ಅಂಶವು ಮತ್ತಷ್ಟು ಹೆಚ್ಚಾಗಿದೆ.

ಸರ್ಕಾರದ ವರ್ಚಸ್ಸಿಗೆ ಆಗುತ್ತಿರುವ ಹಾನಿಯನ್ನು ಅರಿತುಕೊಂಡ ಸಿದ್ದರಾಮಯ್ಯ, ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಪ್ರತಿಪಾದಿಸುವ ಮೂಲಕ ಅದಕ್ಕೆ ಇತಿಶ್ರೀ ಹಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪಕ್ಷದ ಸಹೋದ್ಯೋಗಿಗಳು ಈ ವಿಷಯವನ್ನು ಜೀವಂತವಾಗಿಟ್ಟುಕೊಂಡು ಬಂದಿದ್ದಾರೆ.

CM and DCM
ಸಿದ್ದರಾಮಯ್ಯ ಕೆಳಗಿಳಿಸುವುದು ಅಷ್ಟು ಸುಲಭವಲ್ಲ, ಅವರ ಸಾಮರ್ಥ್ಯದ ಬಗ್ಗೆ ನಮಗಷ್ಟೇ ಗೊತ್ತು: HDK

ಕೇಂದ್ರ ನಾಯಕರು ಸಿದ್ದರಾಮಯ್ಯ ಐದು ವರ್ಷಗಳ ಅವಧಿಗೆ ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯುವ ಬಗ್ಗೆ ನಿರ್ಣಾಯಕವಾಗಿ ಇದುವರೆಗೆ ಮಾತನಾಡಿಲ್ಲ. ನಾಯಕತ್ವ ಬದಲಾವಣೆಯ ಸುತ್ತಲಿನ ಅನಿಶ್ಚಿತತೆಗೆ ಅವರ ಅಸ್ಪಷ್ಟತೆಯು ಇಂಧನ ತುಂಬಿಸಿದೆ ಎನ್ನಬಹುದು. ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರದ ನೆರಳಿನಲ್ಲಿ ಅದು ಇನ್ನೂ ಅಡಗಿಕೊಂಡಿದೆ. ಹಾಗೆ ನೋಡಿದರೆ ಅಂತಹ ರಾಜಕೀಯ ಅನಿಶ್ಚಿತತೆಗಳನ್ನು ತಪ್ಪಿಸಲು ಪಕ್ಷವು ಉತ್ತಮ ತಂತ್ರವನ್ನು ಅಳವಡಿಸಿಕೊಳ್ಳಬಹುದಿತ್ತು.

ಭ್ರಷ್ಟಾಚಾರ ಆಪಾದನೆ

ನಾಯಕತ್ವದ ಸಮಸ್ಯೆಯ ಹೊರತಾಗಿ, ಹಲವಾರು ಇತರ ಅಂಶಗಳು ಸರ್ಕಾರದ ಖ್ಯಾತಿಗೆ ಧಕ್ಕೆ ತಂದಿವೆ. 2023 ರ ವಿಧಾನಸಭಾ ಚುನಾವಣೆಗೆ ಮುನ್ನ ಭ್ರಷ್ಟಾಚಾರವನ್ನು ಚುನಾವಣಾ ವೇದಿಕೆಯನ್ನಾಗಿ ಮಾಡಿಕೊಂಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಗಂಭೀರ ಆರೋಪಗಳನ್ನು ಎದುರಿಸಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸಚಿವರ ರಾಜೀನಾಮೆಗೆ ಕಾರಣವಾದ ಆರ್ಥಿಕ ಅಕ್ರಮಗಳು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಮತ್ತು ಅವರ ಕುಟುಂಬದ ವಿರುದ್ಧದ ಆರೋಪಗಳು; ಗುತ್ತಿಗೆದಾರರಿಂದ ಕಮಿಷನ್ ಬೇಡಿಕೆ ಮತ್ತು ಬಿಲ್‌ಗಳನ್ನು ಪಾವತಿಸುವಲ್ಲಿ ವಿಳಂಬದ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಗಳು ಕಳೆದ ಎರಡೂವರೆ ವರ್ಷಗಳಲ್ಲಿ ಕೇಳಿಬಂದಿವೆ.

ಅಭಿವೃದ್ಧಿಯ ದೃಷ್ಟಿಯಿಂದ, ಕೆಲವು ಸಚಿವರು ತಮ್ಮ ಇಲಾಖೆಗಳಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ತರಲು ಪ್ರಯತ್ನಿಸಿದರು, ಇನ್ನು ಕೆಲವು ಸಚಿವರ ಕಾರ್ಯವೈಖರಿ ಜನತೆಗೆ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಸರ್ಕಾರವು ಜಡ ಸ್ಥಿತಿಯಲ್ಲಿದೆ ಎಂಬ ಭಾವನೆ ಇದೆ.

CM and DCM
ಮೂಲಸೌಕರ್ಯ ಸಮಸ್ಯೆ ಸರಿಪಡಿಸಲಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ: ಡಿಕೆ.ಶಿವಕುಮಾರ್'ಗೆ ಆರ್.ಅಶೋಕ್

ರೈತ ಆತ್ಮಹತ್ಯೆ

ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ರೈತರೊಬ್ಬರು ಆತ್ಮಾಹುತಿಗೆ ಯತ್ನಿಸಿದರು. ಶೇ. 60 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ರೈತ, ಭೂಮಿಗೆ ಸಂಬಂಧಿಸಿದ ವಿಷಯದ ಬಗ್ಗೆ ಅಧಿಕಾರಿಗಳ ನಿರಾಸಕ್ತಿ ಮತ್ತು ಅವರ ಮನವಿಗೆ ಸ್ಪಂದಿಸಲಿಲ್ಲ ಎಂದು ಆರೋಪಿಸುವುದನ್ನು ನೋಡುವುದು ಹೃದಯ ವಿದ್ರಾವಕವಾಗಿತ್ತು. ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾದರು. ಸರ್ಕಾರದ ವ್ಯವಸ್ಥೆಯು ರೈತರೊಬ್ಬರ ಜೀವವನ್ನು ಬಲಿತೆಗೆದುಕೊಂಡಿರುವುದು ಇಲ್ಲಿ ಎದ್ದುಕಾಣುತ್ತಿತ್ತು.

ಕಬ್ಬು ಬೆಳೆಗಾರರ ಹೋರಾಟ

ಇತ್ತೀಚೆಗೆ ನಡೆದದ್ದು ಕಬ್ಬು ಬೆಳೆಗಾರರ ​​ಮುಷ್ಕರ. ಇಲ್ಲಿ ಅಧಿಕಾರಿಗಳ ಮಟ್ಟದಲ್ಲಿಯೇ ಮಾತುಕತೆ ನಡೆದು ಸಮಸ್ಯೆ ಬಗೆಹರಿಸಬಹುದಿತ್ತು. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯು ರಾಜ್ಯದ ಇತರ ಭಾಗಗಳಿಗೆ ಹರಡುವ ಬೆದರಿಕೆ ಹಾಕಿದ ನಂತರ, ಪ್ರತಿಭಟನೆಗಳನ್ನು ಕೊನೆಗೊಳಿಸಲು ಸಿಎಂ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ಮ್ಯಾರಥಾನ್ ಸಭೆಗಳನ್ನು ನಡೆಸಿದರು. ಈ ಪ್ರದೇಶದ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾದರು, ಕೆಲವು ತಿಂಗಳುಗಳ ಹಿಂದೆ, ರಾಜ್ಯದಲ್ಲಿ ಅಸಮರ್ಪಕ ತಿರುಳು ಸಂಸ್ಕರಣಾ ಘಟಕಗಳಿಂದಾಗಿ ಮಾವು ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದರು.

ಇಂತಹ ನಿದರ್ಶನಗಳು ಸರ್ಕಾರವು ನಿರಂತರವಾಗಿ ಕ್ರಿಯಾಶೀಲತೆಯ ಬದಲು ಪ್ರತಿಕ್ರಿಯಾತ್ಮಕವಾಗಿದೆ ಎಂದು ಸೂಚಿಸುತ್ತದೆ, ಭರವಸೆ ಸ್ವೀಕರಿಸುವ ತುದಿಯಲ್ಲಿರುವವರಿಗೆ ಹತಾಶೆಯಾಗಿ ಬದಲಾಗುತ್ತದೆ.

ಕಳೆದ ಎರಡೂವರೆ ವರ್ಷಗಳಲ್ಲಿ, ಸರ್ಕಾರವು ಸರ್ಕಾರಿ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಕಾಂಗ್ರೆಸ್ ಕಾರ್ಯಕರ್ತರನ್ನು ಒಳಗೊಂಡ ಸಮಿತಿಗಳನ್ನು ರಚಿಸುವ ಮೂಲಕ ಆಡಳಿತ ಮತ್ತು ಪಕ್ಷ ರಾಜಕೀಯದ ನಡುವಿನ ಗೆರೆಗಳನ್ನು ಮಸುಕುಗೊಳಿಸುತ್ತಿದೆ ಎಂದು ಆರೋಪಿಸಲಾಗಿದೆ. ಸಂಪೂರ್ಣವಾಗಿ ರಾಜಕೀಯ ದೃಷ್ಟಿಕೋನದಿಂದ, ಪಕ್ಷದ ಕಾರ್ಯಕರ್ತರನ್ನು ಸರ್ಕಾರದೊಂದಿಗೆ ಸಂಯೋಜಿಸಲಾಗಿದೆ ಎಂದು ಭಾವಿಸುವ ಮೂಲಕ ಸಂಘಟನೆಗಳನ್ನು ಬಲಪಡಿಸುವುದು ಉತ್ತಮ ಕ್ರಮವಾಗಿರಬಹುದು. ಖಾತರಿ ಯೋಜನೆಗಳು ಸೇರಿದಂತೆ ಸರ್ಕಾರಿ ಯೋಜನೆಗಳ ಅನುಷ್ಠಾನವು ಪಕ್ಷದ ಕಾರ್ಯಕರ್ತರಲ್ಲದ್ದಲ್ಲ, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿಯಾಗಿದೆ.

ಮಹಿಳಾ ಸಬಲೀಕರಣವಾಗಿದೆಯೇ?

ಖಾತರಿ ಯೋಜನೆಗಳು ಮಹಿಳಾ ಸಬಲೀಕರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ ಎಂದು ಅಧ್ಯಯನಗಳು ತೋರಿಸಿವೆ. ಸರ್ಕಾರವು ಕಲ್ಯಾಣ ಯೋಜನೆಗಳು ಮತ್ತು ದೀರ್ಘಕಾಲೀನ ಅಭಿವೃದ್ಧಿಯ ನಡುವೆ ಸಮತೋಲನವನ್ನು ಸಾಧಿಸಿದೆ ಎಂದು ಹೇಳಿಕೊಳ್ಳುತ್ತದೆ. ಆದಾಗ್ಯೂ, ಅಭಿವೃದ್ಧಿ ಕಾರ್ಯಗಳಿಗೆ ಸರಿಯಾಗಿ ಹಣ ವಿನಿಯೋಗವಾಗುತ್ತಿಲ್ಲ. ಸರ್ಕಾರ ಅನೇಕ ಸರಕು ಮತ್ತು ಸೇವೆಗಳ ಬೆಲೆಗಳನ್ನು ಹೆಚ್ಚಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ನಗರ ಮೂಲಭೂತ ಸೌಕರ್ಯ ಸಮಸ್ಯೆ

ಕರ್ನಾಟಕದ ಅಂತರ್ಗತ ಶಕ್ತಿಗಳು ಅದರ ಉನ್ನತ ದರ್ಜೆಯ ಐಟಿ/ಬಿಟಿ, ನವೋದ್ಯಮ ಮತ್ತು ಕೈಗಾರಿಕಾ ಪರಿಸರ ವ್ಯವಸ್ಥೆಗಳಲ್ಲಿವೆ, ಇವು ಗಮನಾರ್ಹ ಹೂಡಿಕೆಗಳನ್ನು ಆಕರ್ಷಿಸುತ್ತವೆ, ಆದರೆ ಕಾಂಗ್ರೆಸ್ ಸರ್ಕಾರದ ಆಡಳಿತವು ರಾಜ್ಯ ರಾಜಧಾನಿಯಲ್ಲಿ ಗುಂಡಿ ಬಿದ್ದ ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಕಳಪೆ ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲಭೂತ ನಗರ ಸಮಸ್ಯೆಗಳ ಬಗ್ಗೆ ಟೀಕೆಗಳನ್ನು ಎದುರಿಸಿದೆ. ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನ್ನು ಸಿಎಂ ನೇತೃತ್ವದ ಹೆಚ್ಚು ವಿಲಕ್ಷಣವಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಗಿ ಪರಿವರ್ತಿಸಿದರೂ, ಅದೇ ಹಳೆಯ ಸಮಸ್ಯೆಗಳು ನಾಗರಿಕರನ್ನು ಕಾಡುತ್ತಲೇ ಇವೆ.

ಜನಗಣತಿ ಬಗ್ಗೆ ಸಂಶಯ

ಜಾತಿ ಜನಗಣತಿ ಎಂದೂ ಕರೆಯಲ್ಪಡುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡ ಮತ್ತೊಂದು ಪ್ರಮುಖ ನಿರ್ಧಾರವಾಗಿತ್ತು. ಡಿಸೆಂಬರ್‌ನಲ್ಲಿ ಸಲ್ಲಿಸಲಾಗುವ ನಿರೀಕ್ಷೆಯಿರುವ ಅದರ ವರದಿಯು ಬಿರುಗಾಳಿಯನ್ನು ಎಬ್ಬಿಸುವ ಸಾಧ್ಯತೆಯಿದೆ ಏಕೆಂದರೆ ವಿರೋಧ ಪಕ್ಷಗಳು ಮತ್ತು ಕೆಲವು ಪ್ರಬಲ ಸಮುದಾಯಗಳು ಅದರ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.

ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ತಮ್ಮ ಸರ್ಕಾರದ ಅಧಿಕಾರಾವಧಿಯ ದ್ವಿತೀಯಾರ್ಧದಲ್ಲಿ ಬಲಗೊಳ್ಳಬಹುದಾದ ರಾಜಕೀಯ ಬಿರುಗಾಳಿಗಳನ್ನು ಹೇಗೆ ಎದುರಿಸುತ್ತಾರೆ ಎಂಬ ಕುತೂಹಲ ಸದ್ಯಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com