ಸರ್ಕಾರ ಕುಸಿದಿದೆ, ಕಾಂಗ್ರೆಸ್ ಪಕ್ಷವು ಈಗಾಗಲೇ ಐಸಿಯುನಲ್ಲಿದೆ: ನಿಖಿಲ್ ಕುಮಾರಸ್ವಾಮಿ

ಕರ್ನಾಟಕದ ಜನರು ಕಾಂಗ್ರೆಸ್‌ಗೆ ಬಲವಾದ ಜನಾದೇಶವನ್ನು ನೀಡಿದರು ಕೂಡ ತಮ್ಮದೇ ಆದ ಮುಖ್ಯಮಂತ್ರಿಯನ್ನು ನಂಬಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದು ನಿಂತಿದೆ.
Nikhil Kumaraswamy
ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ಶಾಸಕರು ವಿಶ್ವಾಸ ಕಳೆದುಕೊಂಡರೆ ಸಿಎಂ ವಿಫಲರಾಗಿದ್ದಾರೆ, ಸರ್ಕಾರ ಕುಸಿದಿದೆ ಮತ್ತು ಪಕ್ಷವು ಈಗಾಗಲೇ ಐಸಿಯುನಲ್ಲಿದೆ ಎಂದರ್ಥ ಎಂದು ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನರು ಕಾಂಗ್ರೆಸ್‌ಗೆ ಬಲವಾದ ಜನಾದೇಶವನ್ನು ನೀಡಿದರು ಕೂಡ ತಮ್ಮದೇ ಆದ ಮುಖ್ಯಮಂತ್ರಿಯನ್ನು ನಂಬಲು ಸಾಧ್ಯವಾಗದ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದು ನಿಂತಿದೆ. ಮುಖ್ಯಮಂತ್ರಿ ಬದಲಾವಣೆಯ ಮಾತುಕತೆ ಪ್ರೀತಿಯಿಂದ ನಡೆಯುವುದಿಲ್ಲ; ಶಾಸಕರು ವಿಶ್ವಾಸ ಕಳೆದುಕೊಂಡಾಗ ಅದು ನೆಡೆಯುತ್ತದೆ. ಶಾಸಕರು ವಿಶ್ವಾಸ ಕಳೆದುಕೊಂಡರೆ, ಸಿಎಂ ವಿಫಲರಾಗಿದ್ದಾರೆ, ಸರ್ಕಾರ ಕುಸಿದಿದೆ ಮತ್ತು ಪಕ್ಷವು ಈಗಾಗಲೇ ಐಸಿಯುನಲ್ಲಿದೆ ಎಂದರ್ಥ ಎಂದು ಹೇಳಿದರು.

ತಮ್ಮದೇ ಮುಖ್ಯಮಂತ್ರಿಯನ್ನು ಬದಲಾಯಿಸಲು ಕಾಂಗ್ರೆಸ್ ಶಾಸಕರು ದೆಹಲಿಯ ಹೋಟೆಲ್‌ಗಳಲ್ಲಿ ಸಾಲುಗಟ್ಟಿ ನಿಂತಿರುವುದು ಯಾವುದೇ ಸರ್ಕಾರ ಪಡೆಯಬಹುದಾದ ದೊಡ್ಡ ವೈಫಲ್ಯದ ಪ್ರಮಾಣ ಪತ್ರವಾಗಿದೆ. ಮುಖ್ಯಮಂತ್ರಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಸರ್ಕಾರ ದಿಕ್ಕನ್ನು ಕಳೆದುಕೊಂಡಿದೆ ಮತ್ತು ಕರ್ನಾಟಕವು 2.5 ವರ್ಷಗಳನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.

Nikhil Kumaraswamy
ರಾಜ್ಯದಲ್ಲಿ ಯಾರೂ ನಿರೀಕ್ಷಿಸದಂತಹ "ಸ್ಫೋಟಕ" ರಾಜಕೀಯ ಬೆಳವಣಿಗೆ: ಕುಮಾರಸ್ವಾಮಿ ಭವಿಷ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com