ಬಿಹಾರ ಚುನಾವಣೆ ನಂತರ ರಾಜ್ಯದ ರಾಜಕೀಯ ಬೆಳವಣಿಗೆಗಳಿಗೆ ತಾರ್ಕಿಕ ಅಂತ್ಯ ಸಿಗಲಿದೆ: ಬಿ.ವೈ ವಿಜಯೇಂದ್ರ

ಇತ್ತೀಚಿನ ಬೆಳವಣಿಗೆಗಳು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ 'ಎಲ್ಲವೂ ಸರಿಯಿಲ್ಲ' ಎಂಬುದನ್ನು ಸೂಚಿಸುತ್ತವೆ. ಆಡಳಿತ ಪಕ್ಷದ ಸದಸ್ಯರೇ ಈ ಬಗ್ಗೆ ಸುಳಿವು ನೀಡುತ್ತಿದ್ದಾರೆ ಎಂದರು.
Karnataka BJP President BY Vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
Updated on

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿನ ಹಲವಾರು ರಾಜಕೀಯ ಬೆಳವಣಿಗೆಗಳು ತಾರ್ಕಿಕ ಅಂತ್ಯವನ್ನು ತಲುಪುವ ನಿರೀಕ್ಷೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ.

ಇತ್ತೀಚಿನ ಬೆಳವಣಿಗೆಗಳು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ 'ಎಲ್ಲವೂ ಸರಿಯಿಲ್ಲ' ಎಂಬುದನ್ನು ಸೂಚಿಸುತ್ತವೆ. ಆಡಳಿತ ಪಕ್ಷದ ಸದಸ್ಯರೇ ಈ ಬಗ್ಗೆ ಸುಳಿವು ನೀಡುತ್ತಿದ್ದಾರೆ ಎಂದರು.

ನವೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ತಲುಪಿದಾಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಬಗ್ಗೆ ವ್ಯಾಪಕ ಊಹಾಪೋಹಗಳು ಹರಡಿವೆ. ಕೆಲವರು ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂದಿದ್ದಾರೆ.

'ಆಡಳಿತ ಪಕ್ಷದ ಸಚಿವರು ಮತ್ತು ಶಾಸಕರ ಪ್ರತಿಕ್ರಿಯೆಗಳು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಬಿಹಾರ ಚುನಾವಣೆಯ ನಂತರ, ರಾಜ್ಯದಲ್ಲಿ ಈಗಾಗಲೇ ಪ್ರಾರಂಭವಾಗಿರುವ ಅನೇಕ ರಾಜಕೀಯ ಬೆಳವಣಿಗೆಗಳು ತಾರ್ಕಿಕ ಅಂತ್ಯವನ್ನು ತಲುಪುತ್ತವೆ. ಆಡಳಿತ ಪಕ್ಷದಲ್ಲಿರುವವರೇ ಇದರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ವಿಜಯೇಂದ್ರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನವೆಂಬರ್‌ನಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆಯುವ ಸೂಚನೆಗಳಿವೆಯೇ ಎಂದು ಕೇಳಿದಾಗ, 'ಆಡಳಿತ ಪಕ್ಷದ ಸದಸ್ಯರೇ ಸುಳಿವು ನೀಡುತ್ತಿದ್ದಾರೆ. ನಾವು ಆರು ತಿಂಗಳಿನಿಂದ ಅದನ್ನು ಹೇಳುತ್ತಿದ್ದೇವೆ. ಮುಖ್ಯಮಂತ್ರಿ ಕುರ್ಚಿಗೆ ಅಪಾಯವಿದೆಯೇ ಅಥವಾ ಬೇರೆಯವರಿಗೆ ಅದೃಷ್ಟವಾಗುತ್ತದೆಯೇ, ಎಂಬುದನ್ನು ಕಾದು ನೋಡೋಣ' ಎಂದು ಹೇಳಿದರು.

Karnataka BJP President BY Vijayendra
'ಕ್ರಾಂತಿ ಎಲ್ಲಿದೆ? ನಾವೆಲ್ಲರೂ ಶಾಂತಿ ಪ್ರಿಯರು'; ಸಿಎಂ ಬದಲಾವಣೆ ವಿಚಾರ 'ಅಪ್ರಸ್ತುತ': ಬಸವರಾಜ ರಾಯರೆಡ್ಡಿ

ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ, ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಪುನರುಚ್ಚರಿಸಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಕುಣಿಗಲ್‌ನ ಕಾಂಗ್ರೆಸ್ ಶಾಸಕ ಎಚ್‌ಡಿ ರಂಗನಾಥ್ ಮತ್ತು ಮಂಡ್ಯದ ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಬುಧವಾರ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

Karnataka BJP President BY Vijayendra
ನಾಯಕತ್ವ ಗೊಂದಲ: ಹೈಕಮಾಂಡೇ ತೆರೆ ಎಳೆಯಬೇಕಿದೆ (ನೇರ ನೋಟ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com