ಹಿಂಬಾಗಿಲ ಮೂಲಕ BJP ಅಧಿಕಾರಕ್ಕೆ ಬರುತ್ತಿದೆ: ಸಚಿವ ಕೆ.ಜೆ ಜಾರ್ಜ್ ಆರೋಪ

ಕಾಂಗ್ರೆಸ್ ಅಥವಾ ಯಾವುದೇ ಇತರ ಪಕ್ಷವು ಜನರಿಂದ ನ್ಯಾಯಯುತವಾಗಿ ಮತಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬರಲಿ. ನಾವು ಯಾವಾಗಲೂ ಜನರ ಅಭಿಪ್ರಾಯಕ್ಕೆ ತಲೆಬಾಗುತ್ತೇವೆ.
 KJ George
ಕೆ.ಜೆ.ಜಾರ್ಜ್
Updated on

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಕ್ಷೇತ್ರದಲ್ಲಿ ನಡೆದಿರುವ ಮತ ಕಳವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೇ ಮಾರಕ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಗೆ, ಕರ್ನಾಟಕದಲ್ಲಿ ಎಂದೂ ಜನಾದೇಶ ಸಿಕ್ಕಿಲ್ಲ. ಮತ ಕಳವು ಮೂಲಕವೇ ಅಧಿಕಾರಕ್ಕೆ ಬಂದಿದೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಶನಿವಾರ ಆರೋಪಿಸಿದ್ದಾರೆ.

ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯಲ್ಲಿ ಕೆಪಿಸಿಸಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಮತ ಕಳವು’ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಕೆಜೆ,ಜಾರ್ಜ್ ಅವರು ಮಾತನಾಡಿದರು.

ಇಂದು ನಾವು ಪ್ರತಿಭಟನಾ ಸಭೆ ನಡೆಸುತ್ತಿದ್ದೇವೆ. ಮಹಾತ್ಮ ಗಾಂಧಿ ಮತ್ತು ನೆಹರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿ ಸ್ವಾತಂತ್ರ್ಯವನ್ನು ತಂದರು. ದೇಶದಲ್ಲಿ ಎಲ್ಲರೂ ಸಮಾನರು ಎಂದು ಘೋಷಿಸುವ ಸಂವಿಧಾನವಿದೆ. ಆದರೆ ಬಿಜೆಪಿ ಮತ ಕಳ್ಳತನದ ಮೂಲಕ ಅಕ್ರಮವಾಗಿ ಅಧಿಕಾರವನ್ನು ಪಡೆಯುತ್ತಿದ್ದಾರೆಂದು ಆರೋಪಿಸಿದರು.

ಕಾಂಗ್ರೆಸ್ ಅಥವಾ ಯಾವುದೇ ಇತರ ಪಕ್ಷವು ಜನರಿಂದ ನ್ಯಾಯಯುತವಾಗಿ ಮತಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಬರಲಿ. ನಾವು ಯಾವಾಗಲೂ ಜನರ ಅಭಿಪ್ರಾಯಕ್ಕೆ ತಲೆಬಾಗುತ್ತೇವೆ. 70ರ ದಶಕದಲ್ಲಿ, ಇಂದಿರಾ ಗಾಂಧಿ ಅನೇಕ ಸ್ಥಾನಗಳನ್ನು ಕಳೆದುಕೊಂಡರೂ, ಜನರಿಗಾಗಿ ಉತ್ತಮ ಕೆಲಸ ಮಾಡಿದರು. ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದರು. ಆದರೆ, ಮೊರಾರ್ಜಿ ದೇಸಾಯಿ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಅಧಿಕಾರಕ್ಕೆ ಬಂದರು. ಆದಾಗ್ಯೂ, ಇಂದಿರಾ ಗಾಂಧಿ ತಮ್ಮ ಸೋಲನ್ನು ಒಪ್ಪಿಕೊಂಡು ಜನಾದೇಶಕ್ಕೆ ತಲೆಬಾಗಿದರು ಎಂದು ಹೇಳಿದರು.

 KJ George
'ಮತಗಳ್ಳತನ' ಪ್ರಕರಣ: ಆಳಂದ ಮಾಜಿ ಬಿಜೆಪಿ ಶಾಸಕ ಗುತ್ತೇದಾರ್ ಮನೆ ಬಳಿ ಸುಟ್ಟ ದಾಖಲೆಗಳು ಪತ್ತೆ!

ಇದೇ ವೇಳೆ ಕಳೆದ 11 ವರ್ಷಗಳ ಮೋದಿ ಸರ್ಕಾರದ ಕಾರ್ಯಕ್ಷಮತೆಯನ್ನು ಟೀಕಿಸಿದ ಅವರು, "ಜನರು ನಮಗೆ ಅಧಿಕಾರ ನೀಡಿದರೆ ಮಾತ್ರ ನಾವು ಅಧಿಕಾರವನ್ನು ಪಡೆಯುತ್ತೇವೆ. 11 ವರ್ಷಗಳಲ್ಲಿ ಮೋದಿ ಸರ್ಕಾರ ಏನು ಮಾಡಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅವರು ಏನನ್ನೂ ಮಾಡಿಲ್ಲ. ಕೆಲವು ಕ್ಷೇತ್ರಗಳಲ್ಲಿ ಮತಗಳ್ಳತನ ನಡೆಸಿ ಗೆಲುವು ಸಾಧಿಸಿದ್ದಾರೆ. ಏಜೆಂಟರ ಮೂಲಕ ಸರ್ಕಾರವನ್ನು ರಚಿಸಿದ್ದಾರೆಂದು ಆರೋಪಿಸಿದರು.

ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಗೆ, ಕರ್ನಾಟಕದಲ್ಲಿ ಎಂದೂ ಜನಾದೇಶ ಸಿಕ್ಕಿಲ್ಲ. ಮತ ಕಳವು ಮೂಲಕವೇ ಅಧಿಕಾರಕ್ಕೆ ಬಂದಿದೆ. ಹೀಗಾಗಿ, ಚುನಾವಣಾ ಆಯೋಗ ಮತ್ತು ಬಿಜೆಪಿಯ ಈ ಮತ ಕಳವು ವಿರುದ್ಧ ನಾವು ನಿರಂತರವಾಗಿ ಹೋರಾಟ ಹಮ್ಮಿಕೊಳ್ಳುತ್ತೇವೆಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com