
ಮದ್ದೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲ ಮುಸಲ್ಮಾನರ ಕಡೆಗೆ ಹೆಚ್ಚಾಗಿರುವುದರಿಂದ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಕರ್ನಾಟಕವನ್ನ ಇಟಲಿ ಸರ್ಕಾರ, ತಾಲಿಬಾನ್ ಸರ್ಕಾರ, ಮುಲ್ಲಾ ಸರ್ಕಾರ ಆಗಲು ಬಿಡಲ್ಲ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್ ಅಶೋಕ್ ಅವರು ಬುಧವಾರ ಗುಡುಗಿದ್ದಾರೆ.
ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ರಾಜ್ಯ ಸರ್ಕಾರ ಧರ್ಮಸ್ಥಳ ಮತ್ತು ಚಾಮುಂಡೇಶ್ವರಿ ದೇಗುಲಕ್ಕೆ ಕಳಂಕ ತರಲು ಯತ್ನಿಸಿತು. ಇದೀಗ ಗಣೇಶ ಉತ್ಸವದ ವೇಳೆ ದಾಳಿ ನಡೆಸಿದವರನ್ನು ರಕ್ಷಿಸಲು ಹೊರಟಿದೆ. ಮುಸ್ಲಿಮರ ಓಲೈಸುತ್ತಿರುವ, ಮುಸಲ್ಮಾನರಿಗೆ ಹೆಚ್ಚು ಬೆಂಬಲ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಇದೀಗ ಡಿಜೆ ಬ್ಯಾನ್ ಮಾಡಿದ್ದಾರೆ, ಮುಂದೆ ಮಸೀದಿ ಎದುರು ಗಣೇಶ ಮೂರ್ತಿ ಮೆರವಣಿಗೆಯನ್ನೂ ಬ್ಯಾನ್ ಮಾಡಿ ಕೊನೆಗೆ ಗಣಪತಿ ಹಬ್ಬವನ್ನೇ ನಿಷೇಧಿಸುತ್ತಾರೆ. ಹಿಂದೂ ಸಂಘಟನೆಗಳ ಹೋರಾಟ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುತ್ತಿದೆ. ಇದಕ್ಕೇ ಮಂಡ್ಯ ಅಂದ್ರೆ ಇಂಡಿಯಾ ಅನ್ನೋದು ಎಂದು ತಿಳಿಸಿದರು.
ಮದ್ದೂರು ಜನರು ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಬೆಂಬಲ ನೀಡುತ್ತಿದ್ದರೆ ಅವರು ನಿಮ್ಮ ತಲೆ ಮೇಲೆ ವಡೆ ತಟ್ಟುತ್ತಾರೆ. ಡಿಕೆಶಿ ಮಂಡ್ಯದವರನ್ನ್ನು ಛತ್ರಿಗಳು ಎಂದಿದ್ದರು. ಈಗ ತಮ್ಮ ಛತ್ರಿ ಕೆಲಸ ತೋರಿಸಿದ್ದಾರೆ. ಇದು ಹಿಂದೂಗಳ ದೇಶ, ಹಿಂದೂಗಳ ಭೂಮಿ. ನೀವು ಪಾಕಿಸ್ತಾನಕ್ಕೆ ಜೈ ಎಂದರೆ, ನಿಮ್ಮ ಹೆಡೆಮುರಿ ಕಟ್ಟಿ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ. ಸಿದ್ದರಾಮಯ್ಯ ಮುಲ್ಲಾಗಳ ಟೋಪಿ ಹಾಕಿಕೊಂಡು ಹಿಂದೂಗಳಿಗೆ ಟೋಪಿ ಹಾಕುತ್ತಾರೆ.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದರು. ಬುರುಡೆ, ಬುರುಡೆ ಅಂತ ಬುರುಡೆ ಬಿಟ್ಟರು. ಆಮೇಲೆ ಅಯ್ಯಪ್ಪಸ್ವಾಮಿಗೆ ಅಪಮಾನ ಮಾಡಿದ್ದಾಯ್ತು. ಈಗ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎನ್ನುತ್ತಿದ್ದಾರೆ. ಹಿಂದೂ ವಿರೋಧಿ ಭಾವನೆ ಹೊಂದಿರುವ ನಿಮಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು.
ಹಿಂದೂಗಳ ಮೇಲಿನ ಕೇಸ್ ವಾಪಸ್ಸು ಪಡೆಯಲು ನಿಮಗೆ ಆಗುವುದಿಲ್ಲ. ಮುಸಲ್ಮಾನರ ಮೇಲಿನ ಕೇಸ್ ವಾಪಸ್ ಪಡೆಯುತ್ತೀರಿ. ಮುಸ್ಲಿಂ ಮತಗಳಿಂದ ಕಾಂಗ್ರೆಸ್ ಗೆದ್ದಿದೆ ಅಂತ ಅವನ್ಯಾರೋ ಹೇಳಿದ್ದಾನೆ. ಹಾಗಿದ್ದರೆ ಹಿಂದೂಗಳು ನಿಮಗೆ ಮತ ಹಾಕಿಲ್ಲವೇ. ಇನ್ನೂ ಎರಡೇ ವರ್ಷ ನಿಮ್ಮ ಅಧಿಕಾರ, ಮುಂದೆ ಬಿಜೆಪಿ ಸರ್ಕಾರ ಬರುತ್ತೆ. ಇನ್ಮುಂದೆ ರಾಜ್ಯದಲ್ಲಿ ಬಿಜೆಪಿ ಹವಾ ಶುರುವಾಗಲಿದೆ ಎಂದು ಭವಿಷ್ಯ ನುಡಿದರು.
ಸಿಟಿ ರವಿ ಅವರು ಮಾತನಾಡಿ, ಹಿಂದೂ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಮತ್ತು ಇನ್ನು ಮುಂದೆ ಹಿಂದೂಗಳು ಇದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
'ನಮ್ಮ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಅಣ್ಣ ಅಂದ್ರೆ ನಾವು ಅವ್ರನ್ನ ಅಣ್ಣ ಅಂತೀವಿ. ನೀವು ಏನ್ಲ ಅಂದ್ರೆ ನಿಮ್ ತಲೆ ತೆಗಯುತ್ತೇವೆ. ನಮ್ಮಲ್ಲಿ ಉರೀಗೌಡ, ನಂಜೇಗೌಡರು ಇದ್ದಾರೆ. ಇಲ್ಲಿ ನಡೆದಿರುವ ಘಟನೆಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಕಿಡಿಕಾರಿದರು.
ಯಾರೂ ಇಲ್ಲಿ ರಾಜಕಾರಣ ಮಾಡೋಕೆ ಬಂದಿಲ್ಲ. ವಿಷ್ಣು ವಾಮನ ಅವತಾರ ಎತ್ತಿ ಮೂರು ಲೋಕಗಳನ್ನ ಎತ್ತಿದ್ದಾನೆ. ಇಡೀ ಭೂ ಮಂಡಲವೇ ಹಿಂದುಗಳು ಅನ್ನೋದಾ? ಎಂದು ಗುಡುಗಿದರು.
ಭದ್ರಾವತಿಯ ಕಾಂಗ್ರೆಸ್ ಶಾಸಕ ಮುಂದಿನ ಜನ್ಮಕ್ಕೆ ಮುಸ್ಲಿಂ ಆಗಿ ಹುಟ್ಬೇಕು ಅಂತಾರೆ. ಮುಂದಿನ ಜನ್ಮ ಯಾಕೆ ಈಗಲೇ ಕನ್ವರ್ಟ್ ಆಗು. ಮುಂದಿನ ಜನ್ಮದಲ್ಲಿ ಹಾವಾಗ್ತಿಯೋ, ಕಪ್ಪೆ ಆಗ್ತಿಯೋ ಗೊತ್ತಿಲ್ಲ. ಈಗಲೇ ಹೋಗಿ ಕಟ್ ಮಾಡಿಸಿಕೋ ಎಂದು ಕಿಡಿಕಾರಿದರು.
ಯೋಗಿ ನಾಡಲ್ಲಿ ಗಣೇಶ ಮೂರ್ತಿ ಮೇಲೆ ಕಲ್ಲು ಹೊಡೆರದವರ ಮೇಲೆ ಜೆಸಿಬಿ ಹತ್ತಿಸಿದ್ದಾರೆ. ನಿಮಗೆ ತಾಕತ್ತಿದ್ರೆ ಆ ಕೆಲಸ ಮಾಡಿ. ಇಲ್ಲಾಂದ್ರೆ ಇಲ್ಲೂ ಯೋಗಿ ಬರ್ತಾರೆ. ಧರ್ಮ, ದೇಶಕ್ಕಾಗಿ ನಮ್ಮ ಜನ ತಲೆಕೊಡೋದಕ್ಕೂ ಹಿಂಜರಿಯಲ್ಲ ಎಂದರು.
Advertisement