ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಗೆಲುವು ಕಷ್ಟ?: ಸ್ವತಂತ್ರ ಅಭ್ಯರ್ಥಿಗಳಿಂದ ಟಫ್ ಫೈಟ್!

ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, ಎಸ್‌ಸಿ ಎಡ (ಮಾದಿಗ) ಸಮುದಾಯದ ಕೆಲ ನಾಯಕರು ಆಂತರಿಕ ಮೀಸಲಾತಿ ಜಾರಿಗೆ ತರದಿರುವುದರಿಂದ ಅಸಮಾಧಾನಗೊಂಡಿದ್ದಾರೆ.
Congress candidate Samarth Shamanur campaigns in Davanagere on Tuesday
ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರ್
Updated on

ಬೆಂಗಳೂರು: ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸ್ವತಂತ್ರ ಅಭ್ಯರ್ಥಿಗಳು, ವಿಶೇಷವಾಗಿ ಮುಸ್ಲಿಂ ಸಮುದಾಯದವರು, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರಿಗೆ ಸವಾಲಾಗಿದ್ದಾರೆ. ಸಮರ್ಥ್ ಅವರು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಮತ್ತು ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಾಗಿದ್ದಾರೆ.

ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, ಎಸ್‌ಸಿ ಎಡ (ಮಾದಿಗ) ಸಮುದಾಯದ ಕೆಲ ನಾಯಕರು ಆಂತರಿಕ ಮೀಸಲಾತಿ ಜಾರಿಗೆ ತರದಿರುವುದರಿಂದ ಅಸಮಾಧಾನಗೊಂಡಿದ್ದಾರೆ. ಇದರಿಂದ ಸಮರ್ಥ್ ಅವರಿಗೆ ಸ್ಪರ್ಧೆ ಕಠಿಣವಾಗಬಹುದು ಎಂದು ಪಕ್ಷದ ಸ್ಥಳೀಯ ನಾಯಕರು ಒಪ್ಪಿಕೊಂಡಿದ್ದಾರೆ. ಗೆಲುವಿನ ಅಂತರ ಕಡಿಮೆಯಾಗಬಹುದು ಎಂದು ಒಬ್ಬ ನಾಯಕ ತಿಳಿಸಿದ್ದಾರೆ.

ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ 14 ಮುಸ್ಲಿಂ ಅಭ್ಯರ್ಥಿಗಳಲ್ಲಿ ಖಾದರ್ ಆದಿಲ್ ಭಾಷಾ ಪ್ರಚಾರವನ್ನು ತೀವ್ರಗೊಳಿಸಿ ಯುವಕರ ಬೆಂಬಲ ಗಳಿಸಿದ್ದಾರೆ. ಕಾಂಗ್ರೆಸ್ ಬಂಡಾಯ ನಾಯಕ ಸಾದಿಕ್ ಪೈಲ್ವಾನ್ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಸಲು ಯಶಸ್ವಿಯಾದರೂ, ಆದಿಲ್ ಭಾಷಾ ಅವರನ್ನು ಮನವೊಲಿಸುವಲ್ಲಿ ವಿಫಲವಾಗಿದೆ. ಶುಕ್ರವಾರ ಮಧ್ಯವರ್ತಿಯಾಗಿ ಹೋದ ಕಾರವಾರ ಶಾಸಕ ಸತೀಶ್ ಸೈಲ್ ಕೂಡ ಅವರನ್ನು ಒಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಕೇರಳ ಚುನಾವಣೆಯಲ್ಲಿ ನಿರತರಾಗಿರುವ ಕಾರಣ, ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಅವರು ಭಾಷಾ ಪರ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ.

Congress candidate Samarth Shamanur campaigns in Davanagere on Tuesday
ರಂಗೇರಿದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಣ; ಬಿಜೆಪಿ-ಕಾಂಗ್ರೆಸ್ ಟೀಕೆ-ವಾಗ್ವಾದ ಬಿಸಿಲಿನಷ್ಟೇ ತೀಕ್ಷ್ಣ!

ಇದೇ ವೇಳೆ ರೈತ ಸಂಘದ ನಾಯಕ ಕೊಡಿಹಳ್ಳಿ ಚಂದ್ರಶೇಖರ್ ಮತ್ತು ದಲಿತ ನಾಯಕ ಮಾರೆಸಂದ್ರ ಮುನಿಯಪ್ಪ (ಎಸ್‌ಸಿ ಎಡ) ಕೂಡ ಪ್ರಚಾರದಲ್ಲಿ ಸೇರಿಕೊಂಡಿದ್ದಾರೆ. ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ ಪಟೇಲ್ ಅವರು ಭಾಷಾ ಅವರನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಿದ್ದಾರೆ. ಎಸ್‌ಡಿಪಿಐನ ಅಫ್ಸರ್ ಕೊಡ್ಲಿಪೇಟೆ ಹಾಗೂ ಟಿ. ಜಬೀನಾ ಆಪಾ ಸೇರಿದಂತೆ ಇತರ ಮುಸ್ಲಿಂ ನಾಯಕರು ಸಮರ್ಥ್ ಅವರನ್ನು ಸೋಲಿಸಲು ಸಂಕಲ್ಪ ಮಾಡಿದ್ದಾರೆ.

ಇದಕ್ಕೆ ಸೇರ್ಪಡೆಯಾಗಿ, ಮುಸ್ಲಿಂ ಯುವಕರ ಒಂದು ವಿಭಾಗ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಟಿ ದಾಸಕಾರಿಯಪ್ಪ ಅವರಿಗೆ ಅನುಕೂಲಕರವಾಗಿದೆ. ಜಮೀರ್ ಇಲ್ಲಿ ಪ್ರಚಾರ ಮಾಡಿದರೂ ನಾವು ಕೇಳುವುದಿಲ್ಲ. ನಾವು ನಮ್ಮ ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಆಟೋ ಚಾಲಕ ಮುಬಾರಕ್ ಹೇಳಿದ್ದಾರೆ.

Congress candidate Samarth Shamanur campaigns in Davanagere on Tuesday
ದಾವಣಗೆರೆ-ಬಾಗಲಕೋಟೆ ಉಪಚುನಾವಣೆ: ಹೈಕಮಾಂಡ್ ಸೂಚನೆಗೆ ತಲೆಬಾಗಿದ ಜಮೀರ್; ಅಸಮಾಧಾನ ಮರೆತು ಪ್ರಚಾರಕ್ಕಿಳಿಯಲು ಮುಂದು..!

ಆದರೆ ಕಾಂಗ್ರೆಸ್ ಮನವಿ ಮೇರೆಗೆ ಕಲಬುರಗಿಯಿಂದ ಮುಸ್ಲಿಂ ಧರ್ಮಗುರುಗಳು ಸಮುದಾಯ ವಿಭಜನೆಯಾಗದಂತೆ ಕರೆ ನೀಡಿದ್ದಾರೆ. ಮತದಾನದ ದಿನ ಸಮೀಪಿಸುತ್ತಿರುವಂತೆ ಪರಿಸ್ಥಿತಿ ಕಾಂಗ್ರೆಸ್ ಪರ ತಿರುಗುತ್ತಿದೆ. ನಮ್ಮ ಪಕ್ಷವೇ ಸಮುದಾಯದ ಹಿತವನ್ನು ಕಾಪಾಡಬಲ್ಲದು ಎಂದು ಮುಸ್ಲಿಮರು ಅರಿಯುತ್ತಿದ್ದಾರೆ ಎಂದು ಪಕ್ಷದ ನಾಯಕ ಎಚ್.ಕೆ. ಬಸವರಾಜ್ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಕಾರ್ಯಕರ್ತರನ್ನು ಸಕ್ರಿಯಗೊಳಿಸಿ ದಿನನಿತ್ಯದ ಮಾಹಿತಿ ಸಂಗ್ರಹಿಸಲು ಕ್ಯಾಂಪ್ ಕಚೇರಿ ಸ್ಥಾಪಿಸಿದೆ. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಯಾವುದೇ ಗೊಂದಲ ಉಂಟಾಗದಂತೆ ಸೂಚಿಸಿದ್ದಾರೆ. ಡಾ. ಜಿ. ಪರಮೇಶ್ವರ್ ಮತ್ತು ಡಾ. ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಸಚಿವರು ಹಾಗೂ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com