ಡಾಕ್ಟರ್ 'ಹೃದಯವಂತ' ಅಂತ ಗೆಲ್ಲಿಸಿದ್ರೆ, ಕರ್ನಾಟಕದ ಬುಡಕ್ಕೆ ತಂದಿಟ್ರು: ಡಾ. ಸಿ.ಎನ್ ಮಂಜುನಾಥ್ ವಿರುದ್ಧ ಆಕ್ರೋಶ

ಲೋಕಸಭೆಯಲ್ಲಿ ನಿನ್ನೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಗೆ ಸೋಲಾಗಿದೆ. ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಏರಿಸುವ ಸಂವಿಧಾನ ತಿದ್ದುಪಡಿ ಮಸೂದೆ ಇದಾಗಿತ್ತು.ಈ ಮಸೂದೆ ಪಾಸಾಗಲು ಎರಡನೇ ಮೂರರಷ್ಟು ಮತಗಳು ಸಿಗಬೇಕಿತ್ತು.
HD Kumaraswamy-CN Manjunath
ಎಚ್ ಡಿ ಕುಮಾರಸ್ವಾಮಿ-ಸಿಎನ್ ಮಂಜುನಾಥ್
Updated on

ಬೆಂಗಳೂರು: ಲೋಕಸಭೆಯಲ್ಲಿ ನಿನ್ನೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಗೆ ಸೋಲಾಗಿದೆ. ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಏರಿಸುವ ಸಂವಿಧಾನ ತಿದ್ದುಪಡಿ ಮಸೂದೆ ಇದಾಗಿತ್ತು. ಈ ಮಸೂದೆ ಪಾಸಾಗಲು ಮೂರನೇ ಎರಡರಷ್ಟು ಮತಗಳು ಸಿಗಬೇಕಿತ್ತು. ಆದರೆ ವಿಪಕ್ಷಗಳ ವಿಶ್ವಾಸ ಗಳಿಸುವಲ್ಲಿ ಮೋದಿ ಸರ್ಕಾರ ಎಡವಿತು. ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿಯ ಮಸೂದೆಗಳನ್ನು ಇಂಡಿಯಾ ಕೂಟ ಸೋಲಿಸಿದೆ.

ಚಲಾವಣೆಯಾದ 489 ಮತಗಳ ಪೈಕಿ ಪರವಾಗಿ 278 ಮತಗಳು, ವಿರುದ್ಧವಾಗಿ 211 ಚಲಾವಣೆಯಾಗಿದ್ದು 71 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಯಿತು. ಇದನ್ನು ದಕ್ಷಿಣ ರಾಜ್ಯದ ಪ್ರಾದೇಶಿಕ ಪಕ್ಷಗಳು ಸಂಭ್ರಮಿಸಿದ್ದವು. ಇದಕ್ಕೆ ಕಾರಣ ಈ ಮಸೂದೆ ಅಂಗೀಕಾರವಾದರೆ ದಕ್ಷಿಣ ರಾಜ್ಯಗಳು ಕೇಂದ್ರ ಸರ್ಕಾರ ರಚನೆಯಲ್ಲಿ ಬಲ ಕಳೆದುಕೊಳ್ಳುತ್ತವೆ ಅಂತ. ಆದರೆ ಕೇಂದ್ರದಲ್ಲಿ ಎನ್‌ಡಿಎಗೆ ಬೆಂಬಲ ಕೊಟ್ಟಿರುವ ಜೆಡಿಎಸ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿ ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಈ ಮಸೂದೆ ಪರ ಬ್ಯಾಟ್ ಬೀಸಿವೆ.

HD Kumaraswamy-CN Manjunath
ಮಹಿಳಾ ಮೀಸಲಾತಿ ಬಗ್ಗೆ DMK ವಾದ ಭಯ ಹುಟ್ಟಿಸುವಂತಿದೆ; ಸ್ಟಾಲಿನ್ ನಿಲುವು ದಕ್ಷಿಣ ರಾಜ್ಯಗಳ ಅಭಿಪ್ರಾಯವಲ್ಲ: ಎಚ್.ಡಿ ಕುಮಾರಸ್ವಾಮಿ

ಇನ್ನು ಬಿಜೆಪಿ ಸಂಸದರು ಸಾಮಾನ್ಯವಾಗಿ ಈ ಮಸೂದೆ ಪರವಾಗಿಯೇ ಮತ ಹಾಕಿರುತ್ತಾರೆ. ಅದರಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ. ಮಂಜುನಾಥ್ ಸಹ ಈ ಮಸೂದೆ ಪರ ಮತ ಹಾಕಿದ್ದಾರೆ. ಇದನ್ನು ಕನ್ನಡಿಗರು ಖಂಡಿಸಿದ್ದು, ಹೃದಯವಂತ ಡಾಕ್ಟರ್ ಎಂದು ಮತ ಹಾಕಿ ಗೆಲ್ಲಿಸಿದ್ದಕ್ಕೆ ಈಗ ಕರ್ನಾಟಕದ ಬುಡಕ್ಕೆ ತಂದಿಡುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com