ಸಿದ್ದರಾಮಯ್ಯಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: CM ಆಪ್ತ ಸತೀಶ್ ಜಾರಕಿಹೊಳಿ ಶಾಕಿಂಗ್ ಹೇಳಿಕೆ

ದಾವಣಗೆರೆ ಉಪಚುನಾವಣಾ ಫಲಿತಾಂಶದ ನಂತರ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್ ಪಡೆಯಬಹುದು ಎಂದರು.
Satish Jarakiholi
ಸತೀಶ್ ಜಾರಕಿಹೊಳಿ
Updated on

ಮೈಸೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ ಎಂದು ಸಿಎಂ ಆಪ್ತರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಿಹೊಳಿ ಅವರು ಮಂಗಳವಾರ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಈಗ ಕಾಂಪ್ರಾಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಈಗ ಅವರಿಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯವಾಗಿದೆ. ಎಲ್ಲಾ ಸಮಯದಲ್ಲೂ ಒಂದೇ ರೀತಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಕಾಂಪ್ರಾಮೈಸ್ ಅನಿವಾರ್ಯ ಎಂದಿದ್ದಾರೆ.

Satish Jarakiholi
ಈಗ ಸೈಲೆಂಟ್ ಆಗಿರಬಹುದು, ಸಮಯ ಬಂದಾಗ ಸಿದ್ದರಾಮಯ್ಯ ಮಾತಾಡ್ತಾರೆ: ಜಮೀರ್ ಅಹ್ಮದ್ ಖಾನ್

ಇದೇ ವೇಳೆ ದಾವಣಗೆರೆ ದಕ್ಷಿಣದಲ್ಲಿ ಪಕ್ಷ ವಿರೋಧಿ ಚಟುವಟಿಕೆಗೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡರ ವಿರುದ್ಧ ಕ್ರಮ ತೆಗೆದುಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅಬ್ದುಲ್‌ ಜಬ್ಬಾರ್ ಸೇರಿದಂತೆ ಅಲ್ಪಸಂಖ್ಯಾತ ನಾಯಕರ ಮೇಲಿನ ಕ್ರಮ ಮುಸ್ಲಿಂ‌ ಮತಗಳ ಮೇಲೆ ಪರಿಣಾಮ‌ ಬೀರಲಿದೆ. ಹಾಗಾಗಿ ದಾವಣಗೆರೆ ಉಪಚುನಾವಣಾ ಫಲಿತಾಂಶದ ನಂತರ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್ ಪಡೆಯಬಹುದು ಎಂದರು.

ಮುಸ್ಲಿಂ‌ ನಾಯಕರ ಮೇಲಿನ ಕ್ರಮ ಪಕ್ಷಕ್ಕೆ ಹಿನ್ನಡೆಯಾಗಬಹುದು. ಹಾಗಾಗಿ ನಾವೆಲ್ಲ ಮಧ್ಯಸ್ಥಿಕೆ ವಹಿಸಿದ್ದೇವೆ. ಈ ಹಿಂದೆ ಅಮಾನತು ಆಗಿದ್ದವರು ಮರಳಿ ಪಕ್ಷಕ್ಕೆ ಬಂದಿದ್ದಾರೆ.‌ ಜಬ್ಬಾರ್ ಕೂಡ ಮರಳಬಹುದು, ಸದ್ಯ ಅವರನ್ನು ಹೊರತುಪಡಿಸಿ ಬೇರೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com