'ಗಾಂಧಿಯ ಅಹಿಂಸಾ ತತ್ವಕ್ಕೆ ಬಿಜೆಪಿ ಅವಮಾನ; 'ಗೋದಿ ಮಾಧ್ಯಮ' ಈ ಜಾಹೀರಾತು ಪ್ರಕಟಿಸಬಾರದಿತ್ತು'

ಬಿಜೆಪಿ ಜಾಹೀರಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರು, ಸತ್ಯ, ಅಹಿಂಸೆ, ಸಹಿಷ್ಣುತೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧಿ ಅವರನ್ನು ಕೊಂದ ಸಂಸ್ಕೃತಿಯವರ ಮಾನಸಿಕ ಕ್ರೌರ್ಯ ಮುಂದುವರೆಯುತ್ತಲೇ ಇದೆ.
BK Hariprasad slams BJP over Media advertisement
ಮಾಧ್ಯಮ ಜಾಹೀರಾತು
Updated on

ಬೆಂಗಳೂರು: ಮನರೇಗಾ ಮತ್ತು ವಿಬಿ ಜಿರಾಮ್ ಜಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಕಾಂಗ್ರೆಸ್ ಸಂಘಪ್ಪ ಎಂದು ಉಲ್ಲೇಖಿಸಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ಬಳಕೆ ಮಾಡಿ ಜಾಹೀರಾತು ನೀಡಿತ್ತು. ಇದೀಗ ಬಿಜೆಪಿ ನುಂಗಪ್ಪ ಎಂಬ ಜಾಹೀರಾತು ಮೂಲಕ ತಿರುಗೇಟು ನೀಡಿದೆ.

ಬಿಜೆಪಿ ಜಾಹೀರಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಅವರು, ಸತ್ಯ, ಅಹಿಂಸೆ, ಸಹಿಷ್ಣುತೆಯನ್ನೇ ಉಸಿರಾಡಿದ ಮಹಾತ್ಮಾ ಗಾಂಧಿ ಅವರನ್ನು ಕೊಂದ ಸಂಸ್ಕೃತಿಯವರ ಮಾನಸಿಕ ಕ್ರೌರ್ಯ ಮುಂದುವರೆಯುತ್ತಲೇ ಇದೆ. ಮಹಾತ್ಮ ಗಾಂಧಿಯನ್ನು ಅವಮಾನಿಸುವ, ಹೀಯಾಳಿಸುವ ಹೀನ ಮನಸ್ಥಿಯನ್ನೇ ಇಂದು ಪತ್ರಿಕೆಗಳ ಮೂಲಕ ಜಾಹೀರಾತುಗಳಲ್ಲಿ ಬಿಜೆಪಿ ಪ್ರಕಟಿಸಿದೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಕ್ರೌರ್ಯ, ಕೊಲೆ, ಹಿಂಸೆ, ದೌರ್ಜನ್ಯ, ಗೂಂಡಾಗಿರಿಯನ್ನೇ ಬದುಕನ್ನಾಗಿಸಿಕೊಂಡಿರುವ ಸಂಘ ಪರಿವಾರ ಹಾಗೂ ಬಿಜೆಪಿ ಪಕ್ಷ ಗಾಂಧಿ ಅವರ ಊರುಗೋಲನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಡೆಯಲು ಹೋಗುವಂತೆ ಚಿತ್ರಿಸುವ ಜಾಹೀರಾತು ನೀಡುವ ಮೂಲಕ ಗಾಂಧಿಯವರ ಅಹಿಂಸಾ ತತ್ವವನ್ನೇ ಅವಮಾನಿಸಿದೆ ಎಂದಿದ್ದಾರೆ.

BK Hariprasad slams BJP over Media advertisement
ನಾನು ಗಾಂಧಿ-ಅಂಬೇಡ್ಕರ್-ನೆಹರೂ ಅನುಯಾಯಿ ಆದ್ರೆ, ಸುರೇಶ್​ ಕುಮಾರ್ ಗಾಂಧಿ ಕೊಲೆಗಾರರ ಅನುಯಾಯಿ ಆದ್ರು: ಬಿ.ಕೆ ಹರಿಪ್ರಸಾದ್

ಆರ್ ಎಸ್ ಎಸ್ ಬಳಸುವ ಲಾಠಿ ಹಿಂಸೆಯ ಸೂಚಕ, ಗಾಂಧಿ ಬಳಸಿದ ಊರುಗೋಲು ಕೇವಲ ಆಸರೆಯಲ್ಲ, ಬದಲಾಗಿ ಬಲ, ಪರಿಶ್ರಮ ಮತ್ತು ಛಲದ ಸಂಕೇತವಾಗಿತ್ತು. ಗಾಂಧಿಯವರ ತತ್ವಾದರ್ಶಗಳ ಮೇಲೆ ಬಿಜೆಪಿ ಮತ್ತು ಸಂಘಪರಿವಾರ ನಿರಂತರ ದಾಳಿ ಮಾಡುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದರು.

ದೇಶದ ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಜಾಹೀರಾತು ಪ್ರಕಟಿಸಿರುವ ಬಹುತೇಕ ಮಾಧ್ಯಮಗಳು ಈ ಜಾಹೀರಾತನ್ನು ಪ್ರಕಟಿಸದೆ ಪತ್ರಿಕಾಧರ್ಮ ಪಾಲಿಸಬೇಕಿತ್ತು. ರಾಜ್ಯದ ಪತ್ರಿಕೆಗಳು ಕೂಡ "ಗೋದಿ ಮಾಧ್ಯಮದ" ಭಾಗವಾಗಬಾರದು. ಯಾಕಂದರೆ "ಬಾಪೂ" ಈ ದೇಶ ಕಂಡ ಅತ್ಯಂತ ಆದರ್ಶ ಪತ್ರಕರ್ತರೂ ಆಗಿದ್ದರು ಎಂಬ ಇತಿಹಾಸವನ್ನು ಮರೆಯಬಾರದು ಎಂದು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com