2018 ರಲ್ಲಿ ಕಾಂಗ್ರೆಸ್ '90 ಸೀಟು' ಗೆಲ್ಲೋಕೆ ಮಹಾದೇವಪ್ಪ ತನು-ಮನ-ಧನ ಅರ್ಪಿಸಿದ್ದಾರೆ: MLC ರವಿ ವ್ಯಂಗ್ಯ

ಮಹದೇವಪ್ಪ ಅವರದ್ದು ಬಹು ದೊಡ್ಡ ವ್ಯಕ್ತಿತ್ವ, ಬಹಳ ದೊಡ್ಡ ಲೀಡರ್, ನಾವು ಕಾಂಗ್ರೆಸ್ಸಿರು ಅವರನ್ನು ನೆನಪಿಸಿಕೊಳ್ಳಬೇಕು.
ravi
ರವಿ
Updated on

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಅವರ ಬೀದಿ ನಾಯಿಗಳು ಹೇಳಿಕೆಗೆ ಎಂಎಲ್ ಸಿ ಹಾಗೂ ಡಿಕೆ ಶಿವಕುಮಾರ್ ಸಂಬಂಧಿ ರವಿ ತಿರುಗೇಟು ನೀಡಿದ್ದಾರೆ.

ಮಹಾದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ನಾನು ದೊಡ್ಡವನಲ್ಲ, ಆದರೆ 2018 ರಲ್ಲಿ ಕಾಂಗ್ರೆಸ್ ಪಕ್ಷ 90 ಸೀಟುಗಳನ್ನು ಗೆಲ್ಲಲು ಮಹಾದೇವಪ್ಪ ಅವರು ತನು, ಮನ ಧನ ಸೇರಿ ಎಲ್ಲವನ್ನೂ ಧಾರೆ ಎರೆದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಮಹದೇವಪ್ಪ ಅವರದ್ದು ಬಹು ದೊಡ್ಡ ವ್ಯಕ್ತಿತ್ವ, ಬಹಳ ದೊಡ್ಡ ಲೀಡರ್, ನಾವು ಕಾಂಗ್ರೆಸ್ಸಿರು ಅವರನ್ನು ನೆನಪಿಸಿಕೊಳ್ಳಬೇಕು. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಮಹಾದೇವಪ್ಪ ಅವರು ತ್ಯಾಗದಿಂದ ಅಷ್ಟು ಸೀಟು ಬಂತು, ಇಲ್ಲದಿದ್ದರೇ ನಮಗೆ ಅಷ್ಟು ಸೀಟು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ravi
ಕಟ್ಟಾ ಕಾಂಗ್ರೆಸ್ಸಿಗರೆಲ್ಲರೂ ನಿಯತ್ತಿನ ನಾಯಿಗಳು, ಬೀದಿ ನಾಯಿಗಳಲ್ಲ: ಮಹಾದೇವಪ್ಪಗೆ ಡಿ.ಕೆ ಸುರೇಶ್ ತಿರುಗೇಟು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com