ಕರಾವಳಿಯಲ್ಲಿ ವಿಷ ಬಿತ್ತಿದರೆ ಪರಿಣಾಮ ನೆಟ್ಟಗಿರಲ್ಲ, ಅರಬ್ಬಿ ಸಮುದ್ರದ ಮೀನುಗಳಿಗೆ ಆಹಾರವಾಗ್ತೀರಿ: ಪ್ರಕಾಶ್ ರಾಜ್‌ಗೆ ಉಡುಪಿ BJP ಶಾಸಕ ಎಚ್ಚರಿಕೆ..!

ಕರಾವಳಿ ಭಾಗದ ಕಲಾವಿದರ ಮನಸ್ಸಿನಲ್ಲಿ "ವಿಷದ ಬೀಜ ಬಿತ್ತುವುದನ್ನು" ನಿಲ್ಲಿಸದಿದ್ದರೆ, "ಅರಬ್ಬಿ ಸಮುದ್ರದ ಮೀನುಗಳಿಗೆ ಆಹಾರವಾಗುವ ಪರಿಸ್ಥಿತಿ ಬರುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
Prakash raj
ಪ್ರಕಾಶ್‌ ರಾಜ್‌
Updated on

ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.

ಕರಾವಳಿ ಭಾಗದ ಕಲಾವಿದರ ಮನಸ್ಸಿನಲ್ಲಿ "ವಿಷದ ಬೀಜ ಬಿತ್ತುವುದನ್ನು" ನಿಲ್ಲಿಸದಿದ್ದರೆ, "ಅರಬ್ಬಿ ಸಮುದ್ರದ ಮೀನುಗಳಿಗೆ ಆಹಾರವಾಗುವ ಪರಿಸ್ಥಿತಿ ಬರುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ನೀಟ್ (NEET) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರಕಾಶ್ ರಾಜ್, ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳನ್ನು ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಸಿಜೆಪಿ ಹಾಗೂ ಕಾಂಗ್ರೆಸ್ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಯಶ್‌ಪಾಲ್ ಸುವರ್ಣ, ವಿದೇಶಿ ನಿಧಿಯ ನೆರವಿನಿಂದ ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಸಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ನಿಜವಾದ ವಿದ್ಯಾರ್ಥಿಗಳಲ್ಲ. ಪ್ರತಿಭಟನಾಕಾರರ ಹಿನ್ನೆಲೆ ಪರಿಶೀಲಿಸಿದರೆ ಸತ್ಯ ಹೊರಬರುತ್ತದೆ. ಇದೇ ರೀತಿಯ ರಾಜಕೀಯ ಮುಂದುವರಿದರೆ ಬಿಜೆಪಿ ಕಾರ್ಯಕರ್ತರು "ತಕ್ಕ ಉತ್ತರ" ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Prakash raj
ನನ್ನನ್ನು ಏಕೆ 'ಹಿಂದೂ ವಿರೋಧಿ' ಎಂದು ಬಿಂಬಿಸುತ್ತಿದ್ದೀರಿ? ಹಿಂದುತ್ವಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ನಟ ಪ್ರಕಾಶ್ ರಾಜ್

ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಹಲವು ಬಿಜೆಪಿ ಶಾಸಕರು, ಅದರಲ್ಲೂ ವಿ. ಸುನಿಲ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಅವರ ಮುಖಚಿತ್ರಗಳನ್ನು ಜೋಡಿಸಿದ್ದ ಜಿರಳೆ (Cockroach) ಆಕೃತಿಯ ಭಿತ್ತಿಪತ್ರಗಳ ಮೇಲೆ ಕೀಟನಾಶಕ ಸಿಂಪಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ಬಿಜೆಪಿ ಶಾಸಕರ ಈ ಬಹಿರಂಗ ಜೀವ ಬೆದರಿಕೆ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ) ಸೇರಿದಂತೆ ಹಲವು ವಿರೋಧ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ಶಾಸಕರ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಶಾಂತಿ ಭಂಗ ಉಂಟುಮಾಡುತ್ತಿರುವ ಯಶ್‌ಪಾಲ್ ಸುವರ್ಣ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಒತ್ತಾಯಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com