ಶಾಸಕಾಂಗ ಸಭೆಯಲ್ಲಿ 'ಕೈ' ಮುಖಂಡರ ರಣತಂತ್ರ: ಉಪಚುನಾವಣೆ ಗೆಲ್ಲುವುದು ಅನಿವಾರ್ಯ; ನಾಯಕರಿಗೆ ಸುರ್ಜೇವಾಲಾ ಟಾರ್ಗೆಟ್!

ನಾವು ಹಿಂದಿನ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಈ ಎರಡೂ ಉಪಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ
Congress Legislature Party
ಕಾಂಗ್ರೆಸ್ ಶಾಸಕಾಂಗ ಸಭೆ
Updated on

ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಾಮಾನ್ಯವಾಗಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು, ಆದರೆ ಬುಧವಾರ ನಡೆದ ಶಾಸಕಾಂಗ ಸಭೆ ವಿಭಿನ್ನವಾಗಿತ್ತು.

ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಉಪ ಚುನಾವಣೆ ಬಗ್ಗೆ ಚರ್ಚಿಸಲಾಯಿತು, ಕಾಂಗ್ರೆಸ್ ನಾಯಕರ ಚರ್ಚೆ ಹೋಟೆಲ್ ಕೊಠಡಿಯನ್ನು ವಾರ್ ರೂಂ ಆಗಿ ಬದಲಾಯಿಸಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಭೆಯನ್ನು ಉಪ ಚುನಾವಣೆಯಲ್ಲಿ ಹೇಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಪ್ರಾರಂಭಿಸಿದರು. ಎನ್‌ಡಿಎ (ಬಿಜೆಪಿ-ಜೆಡಿಎಸ್) ವಿರುದ್ಧ "ಒಗ್ಗಟ್ಟಾಗಿ" ಹೋರಾಡಬೇಕು ಇಲ್ಲದಿದ್ದರೇ ಕ್ಷೇತ್ರಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದರು.

ನಾವು ಹಿಂದಿನ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಈ ಎರಡೂ ಉಪಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಎಲ್ಲವನ್ನೂ ಬಿಟ್ಟು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಹೋಗಲು ಯಾರು ಸಿದ್ಧರಿದ್ದಾರೆ ಎಂದು ಸುರ್ಜೇವಾಲಾ ಶಾಸಕರ ಬಳಿ ಕೇಳಿದಾಗ ಬಹುತೇಕ ಎಲ್ಲರೂ ಕೈ ಎತ್ತಿದರು. ಸರಿ ಹಾಗಾದರೆ ನೀವೆಲ್ಲರೂ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಿ ಎಂದು ಕರೆ ನೀಡಿದ್ದಾರೆ.

Congress Legislature Party
ರಂಗೇರಿದ ಬಾಗಲಕೋಟೆ ಉಪಚುನಾವಣೆ ಅಖಾಡ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ!

ದಾವಣಗೆರೆ ದಕ್ಷಿಣದಲ್ಲಿ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಬಾಗಲಕೋಟೆಯಲ್ಲಿ ಎಚ್‌ವೈ ಮೇಟಿ ಅವರ ನಿಧನದಿಂದಾಗಿ ಉಪಚುನಾವಣೆಗಳು ಎದುರಾಗಿದ್ದು, ಕಾಂಗ್ರೆಸ್ ನಾಯಕರಿಗೆ ಉಪ ಚುನಾವಣೆ ನಿದ್ದೆಯಿಲ್ಲದಂತೆ ಮಾಡಿದೆ ಎಂದು ಒಪ್ಪಿಕೊಳ್ಳುತ್ತಾರೆ.

ಎರಡೂ ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್ ಮತ ಹಂಚಿಕೆ ಅದ್ಭುತವಾಗಿದೆ, ವಿಶೇಷವಾಗಿ ಬಾಗಲಕೋಟೆಯಲ್ಲಿ ವಿರೋಧ ಪಕ್ಷಗಳ ರಣತಂತ್ರ ಕಾಂಗ್ರೆಸ್ ನ ಲೆಕ್ಕಾಚಾರವನ್ನು ಉಲ್ಟಾ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸತತ ಮೂರು ಉಪಚುನಾವಣೆಗಳಲ್ಲಿ ಜಯಗಳಿಸಿದ ನಂತರ ಕಾಂಗ್ರೆಸ್ ಪಕ್ಷ ಈ ಉಪಚುನಾವಣೆಯನ್ನು ಗೆಲ್ಲುವ ಉಮೇದಿನಲ್ಲಿದೆ. ಎನ್‌ಡಿಎ ಬಲವಂತದ ಒಗ್ಗಟ್ಟು ಸ್ನೇಹಪರ ಸ್ಪರ್ಧೆಗಳನ್ನು ಬೀದಿ ಜಗಳಗಳಾಗಿ ಪರಿವರ್ತಿಸಿದೆ. ಬಾಗಲಕೋಟೆ ಸಾಂಪ್ರದಾಯಿಕ ಕಾಂಗ್ರೆಸ್ ಪಾಕೆಟ್ ಆಗಿದ್ದರೂ, ಅಲ್ಲಿ ಕಾಂಗ್ರೆಸ್ ವಿರೋಧಿ ಮತಗಳ ಕ್ರೋಢೀಕರಣವು ಸಹ ಗೆಲುವಿಗೆ ಅಡಚಣೆಯನ್ನುಂಟುಮಾಡಬಹುದು. ಪ್ರತಿಯೊಬ್ಬ ನಾಯಕರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಉಪ ಚುನಾವಣೆಯನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂಬುದನ್ನು ಸೂಚಿಸುತ್ತಿದೆ.

ಮೈತ್ರಿ ಕಾರಣದಿಂದಾಗಿ 'ಸುರಕ್ಷಿತ' ಸ್ಥಾನವನ್ನು ಸಹ ಕಳೆದುಕೊಳ್ಳಬಹುದು ಎಂಬ ಆತಂಕ ಬಿಜೆಪಿಗೆ ಎದುರಾಗಿದೆ. ದಾವಣಗೆರೆಯಲ್ಲಿ ಮುಸ್ಲಿಂ ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸುವ ವಿಶ್ವಾಸ ಕಾಂಗ್ರೆಸ್‌ಗೆ ಇದೆ ಎಂದು ರಾಜಕೀಯ ವಿಶ್ಲೇಷಕ ಮೂರ್ತಿ ಬಿಎಸ್ ಹೇಳಿದ್ದಾರೆ.

Congress Legislature Party
ದಾವಣಗೆರೆ-ಬಾಗಲಕೋಟೆ ಉಪಚುನಾವಣೆ: 2 ಕ್ಷೇತ್ರದಲ್ಲೂ ವಂಶವಾಹಿ ರಾಜಕೀಯಕ್ಕೆ ಮಣೆ; ಕಾಂಗ್ರೆಸ್‌ಗೆ ಪ್ರತಿಷ್ಠೆ ವಿಷಯ, ಗೆಲುವಿನಿಂದ ಬಿಜೆಪಿಗೆ ನೈತಿಕ ಸ್ಥೈರ್ಯ!

ಬಾಗಲಕೋಟೆಯಲ್ಲಿ ಬಿಜೆಪಿ ಪ್ರಬಲ ಪ್ರದರ್ಶನ ನೀಡುತ್ತಿರುವಂತೆ ತೋರುತ್ತಿದೆ .ಏಕೆಂದರೆ ಅಲ್ಲಿ ಕಾಂಗ್ರೆಸ್ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವ ಹೋರಾಟದ ಅವಕಾಶವಿದೆ.

2018 ರಲ್ಲಿ ಚಾಮುಂಡೇಶ್ವರಿ ಸೋಲಿನ ನಂತರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸಿಎಂ ಗೆಲ್ಲಲು ಸಹಾಯ ಮಾಡಿದ್ದರಿಂದ, ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿ ಪಣತೊಟ್ಟಿದೆ. ಎಚ್‌ವೈ ಮೇಟಿ ಗೌರವಾನ್ವಿತ ಕುರುಬ ನಾಯಕರಾಗಿದ್ದರು ಮತ್ತು ಈ ಸ್ಥಾನವನ್ನು ಕಳೆದುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗುವುದು ಖಚಿತ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com