

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಕಲಾಪವು ರಾಜಕೀಯ ಕಾಲೆಳೆಯುವಿಕೆ, ಹಾಸ್ಯ ಮತ್ತು ಭವಿಷ್ಯದ ಮುಖ್ಯಮಂತ್ರಿ ಕುರಿತಾದ ಚರ್ಚೆಗಳಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಕಾಲೆಳೆದರು.
ಬುಧವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಮ್ಮ ಬಗ್ಗೆ, ಸಿಎಂ ಸಿದ್ದರಾಮಯ್ಯ ಬಗ್ಗೆ ಮತ್ತು ಅವರ ಅಧಿಕಾರ ಸಮೀಕರಣದ ಬಗ್ಗೆ ಮಾತನಾಡದೆ ಪ್ರತಿಪಕ್ಷಗಳು 'ನಿದ್ರೆ ಮಾಡುತ್ತಿಲ್ಲ' ಎಂದು ಟೀಕಿಸಿದರು.
ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ಹಿಂದೆ ಬಿಬಿಎಂಪಿ ಸಚಿವರಾಗಿ ಸೇವೆ ಸಲ್ಲಿಸಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಶೋಕ್ ಬೆಂಗಳೂರು ಜನ್ಮಸ್ಥಳ ಎಂದು ಹೇಳಿದರು. "ಓಹ್, ನೀವು ಇಲ್ಲಿ ಹುಟ್ಟಿದ್ದೀರಿ, ಮತ್ತು ಇಲ್ಲಿಯೇ ಶಾಸಕರಾಗಿದ್ದೀರಿ. ಮೊದಲು ಉತ್ತರಹಳ್ಳಿ, ಈಗ ಅದು ಪದ್ಮನಾಭನಗರ ಎಂದು ಸಿದ್ದರಾಮಯ್ಯ ಹೇಳಿದರು.
2023 ರ ವಿಧಾನಸಭಾ ಚುನಾವಣೆಯಲ್ಲಿ ಕನಕಪುರದಿಂದ ಸ್ಪರ್ಧಿಸಿದ್ದ ಅಶೋಕ್ ಮಾಡಿದ್ದ ಪ್ರಯತ್ನದ ಬಗ್ಗೆಯೂ ಸಿದ್ದರಾಮಯ್ಯ ಟೀಕಿಸಿದರು, ಆಗ ಶಿವಕುಮಾರ್ ವಿರುದ್ಧ 1,22,392 ಮತಗಳ ಅಂತರದಿಂದ ಸೋತರು. ಆದರೆ ಅಶೋಕ್ ಆ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದರು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಡಿ.ಕೆ ಶಿವಕುಮಾರ್ ಪದ್ಮನಾಭನಗರದಿಂದ ಸ್ಪರ್ಧಿಸಿದ್ದರೆ, ಅವರು ಸೋಲುತ್ತಿದ್ದರು ಎಂದು ಆಶೋಕ್ ಹೇಳಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಿದ್ದರಾಮಯ್ಯ ಶಿವಕುಮಾರ್ ಪದ್ಮನಾಭ ನಗರದಲ್ಲಿ ಸ್ಪರ್ಧಿಸಿದ್ದರೆ ಖಂಡಿತವಾಗಿಯೂ ಗೆಲ್ಲುತ್ತಿದ್ದರು ಎಂದು ವಾದಿಸಿದರು. ಈ ವೇಳೆ ಮಾತನಾಡಿದ ಅಶೋಕ್, ಶಿವಕುಮಾರ್ ಅಲ್ಲಿ ಗೆದ್ದರು, ಆದರೆ ನಿಮ್ಮ (ಸಿದ್ದರಾಮಯ್ಯ) ವಿರುದ್ಧ ಸೋತರು" ಎಂದು ವ್ಯಂಗ್ಯವಾಡಿದರು.
ನಾಯಕತ್ವ ಬದಲಾವಣೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಆದೇಶವೇ ಅಂತಿಮ ಎಂದು ಸಿಎಂ ಉತ್ತರಿಸಿದರು. ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ, "ನೀವು ನಮ್ಮಿಬ್ಬರ ಬಗ್ಗೆ ಮಾತನಾಡದಿದ್ದರೆ, ನಿಮಗೆ ನಿದ್ರೆ ಬರುವುದಿಲ್ಲ" ಎಂದು ಹೇಳಿದರು. ಹೌದು ಸಿಎಂ ಆಗುವ ಬಯಕೆಯಲ್ಲಿ ತಾವು ನಿದ್ದೆ ಮಾಡುತ್ತಿಲ್ಲ ಎಂದು ಅಶೋಕ್ ಡಿಕೆಶಿ ಕಾಲೆಳೆದರು.
ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಹೌದು,ನಾನು ನಿದ್ರೆ ಮಾಡದ ಕಾರಣ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ" ಎಂದು ಉತ್ತರಿಸಿದರು. ಬಿಜೆಪಿ ಕೂಡ ಕೇಸರಿ ಪಕ್ಷದ ಕೇಂದ್ರ ನಾಯಕತ್ವ ತೆಗೆದುಕೊಂಡ ನಿರ್ಧಾರಗಳಿಗೆ ಬದ್ಧವಾಗಿರುತ್ತಾರೆ ಎಂದು ಸಿದ್ದರಾಮಯ್ಯ ಗಮನಸೆಳೆದರು.
ಒಂದು ವೇಳೆ ಅಶೋಕ ಅವರು ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ಕೇಳಿದರೆ, ಅವರು ಏನಾದರೂ ಉತ್ತರ ಹೇಳುತ್ತಾರೆಯೇ? ಪಕ್ಷದ ಹೈ ಕೈಮಾಂಡ್ ನಿರ್ಧರಿಸುತ್ತದೆ ಎಂದು ಅಶೋಕ್ ಹೇಳ್ತಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
Advertisement