ಮುಂದಿನ CM ಡಿ.ಕೆ ಶಿವಕುಮಾರ್: ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ; ಅಂದು-ಇಂದು-ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ- ಕಾಂಗ್ರೆಸ್

ಸುಮಾರು 2 ಗಂಟೆಗಳ ಕಾಲ ನಡೆದ ಈ ಬ್ರೇಕ್ ಫಾಸ್ಟ್ ಮೀಟಿಂಗ್ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಉಪಹಾರ ಸಭೆಗೆ ಬಂದ ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಆಪ್ತತೆಯಿಂದ ಆಲಿಂಗನ ಮಾಡಿದರು.
Siddaramaiah and DK Shivkumar
ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್
Updated on

ಬೆಂಗಳೂರು: ರಾಜ್ಯದಲ್ಲಿ ಹಲವು ತಿಂಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ಇತಿಶ್ರೀ ಹಾಡಲಾಗಿದೆ. ಸಚಿವರೊಂದಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಾವು ರಾಜೀನಾಮೆ ನೀಡುತ್ತಿರುವುದಾಗಿ ಹಾಗೂ ಮುಂದಿನ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಎಂದು ಮಾಹಿತಿ ನೀಡಿದ್ದಾರೆ.

ಸುಮಾರು 2 ಗಂಟೆಗಳ ಕಾಲ ನಡೆದ ಈ ಬ್ರೇಕ್ ಫಾಸ್ಟ್ ಮೀಟಿಂಗ್ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಉಪಹಾರ ಸಭೆಗೆ ಬಂದ ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಆಪ್ತತೆಯಿಂದ ಆಲಿಂಗನ ಮಾಡಿದರು.

ಬಳಿಕ ಸಚಿವರೊಂದಿಗೆ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು, ಇಂದು ಮಧ್ಯಾಹ್ನ 3 ಗಂಟೆಗೆ ರಾಜೀನಾಮೆ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ. ರಾಜ್ಯಪಾಲರು ಇಲ್ಲದೇ ಇದ್ದರೆ ಅವರ ಕಾರ್ಯದರ್ಶಿಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಭಾವುಕರಾದ ಸಿದ್ದರಾಮಯ್ಯ ಅವರು, ನಾನು ಮಾಡಿರುವ ಕೆಲಸಗಳ ಬಗ್ಗೆ ನನಗೆ ಸಮಾಧಾನ ಇದೆ, ಎಲ್ಲಾ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಮುಂದೆ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗಿ. ಜನರಿಗೆ ಒಳ್ಳೇ ಯೋಜನೆಗಳನ್ನು ನೀಡಿ. ಬಿಜೆಪಿಯಿಂದ ಅಲರ್ಟ್ ಆಗಿ ಇರಿ ಎಂದು ಸಲಹೆ ನೀಡಿದ್ದಾರೆ. ಬಳಿಕ ಮುಂದಿನ ಸಿಎಂ ಡಿಕೆ.ಶಿವಕುಮಾರ್ ಎಂದೂ ಸಚಿವರಿಗೆ ಮಾಹಿತಿ ನೀಡಿದ್ದಾರೆ.

Siddaramaiah and DK Shivkumar
Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ಬಳಿಕ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ನಾನು ಅಧ್ಯಕ್ಷನಾಗಿ ಇಲ್ಲಿವರೆಗೆ ಬಂದಿದ್ದೇನೆ. ಇದುವರೆಗೆ ನೀವೆಲ್ಲರೂ ಉತ್ತಮವಾಗಿ ಸಹಕರಿಸಿದ್ದೀರಿ. ಮುಂದೆಯೂ ಇದೇ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಬೇರೆ ಯಾವ ವಿಚಾರವೂ ಪ್ರಸ್ತಾಪಿಸದ ಡಿಕೆ.ಶಿವಕುಮಾರ್ ಅವರು, ಎಲ್ಲರ ಸಹಕಾರ ಮುಂದೆಯು ಹೀಗೆ ಇರಲಿ ವಿನಂತಿಸಿಕೊಂಡರು. ಈ ವೇಳೆ ಡಿಕೆಶಿ ಸಿದ್ದರಾಮಯ್ಯನವರ ಆಡಳಿತವನ್ನು ಕೊಂಡಾಡಿದರು ಎಂದು ತಿಳಿದುಬಂದಿದೆ.

ಉಪಾಹಾರ ಸಭೆಯ ಬಳಿಕ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್​ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಮಧ್ಯಾಹ್ನ 3 ಗಂಟೆಗೆ ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆಲಿಂಗನ ಮಾಡುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಹಂಚಿಕೊಂಡಿದ್ದು, ಅಂದು, ಇಂದು, ಎಂದೆಂದು... ಒಗ್ಗಟ್ಟೇ ನಮ್ಮ ಶಕ್ತಿ! ಎಂದೆಂದಿಗೂ ಜನಸೇವೆಯೇ ನಮ್ಮ ಬದ್ಧತೆ’ ಎಂದು ಬರೆದುಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com