ಅಪ್ಪ- ಮಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರಾ? ರಾಜಣ್ಣ ಎದೆ ಮುಟ್ಕೊಂಡು ಹೇಳಲಿ; ಬೇಕಿದ್ರೆ ಪಕ್ಷ ಬಿಟ್ಟು ಹೋಗ್ಲಿ; ಬಾಲಕೃಷ್ಣ ಆಕ್ರೋಶ

ಇತ್ತ ಚುನಾವಣೆ ಮುಗಿಯುವುದರೊಳಗೆ ಅತ್ತ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ತಾವು ಕಾಂಗ್ರೆಸ್ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
HC Balakrishna
ಎಚ್.ಸಿ ಬಾಲಕೃಷ್ಣ
Updated on: 

ಚಿತ್ರದುರ್ಗ: ಪಕ್ಷದಲ್ಲೇ ಇದ್ದು ಅನ್ನ ತಿಂದು ದ್ರೋಹ ಬಗೆಯುವುದಾದರೆ ಪಕ್ಷ ಬಿಟ್ಟು ಹೋಗಲಿ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ವಿರುದ್ಧ ಸಚಿವ ಹೆಚ್.ಸಿ. ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನಡೆದ ಸ್ಟಿಂಗ್ ಆಪರೇಷನ್‌ನಿಂದಾಗಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಬೇಕಾಯಿತು ಎಂದು ಕೆ.ಎನ್. ರಾಜಣ್ಣ ಹೇಳಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರ ಸ್ಟಿಂಗ್ ವಿಚಾರ ಮಾತನಾಡುವ ಮುನ್ನ, ರಾಜಣ್ಣ ಅವರ ಪುತ್ರ ರಾಜೇಂದ್ರ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರಾ ಎಂದು ಮೊದಲು ಕೇಳಿ ಕಿಡಿ ಕಾರಿದ್ದಾರೆ.

ಇತ್ತ ಚುನಾವಣೆ ಮುಗಿಯುವುದರೊಳಗೆ ಅತ್ತ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ತಾವು ಕಾಂಗ್ರೆಸ್ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ರಾಜಣ್ಣ ಕುಟುಂಬದ ಪಕ್ಷವಿರೋಧಿ ಚಟುವಟಿಕೆಗಳ ವಿರುದ್ಧ ಸಿಡಿದೆದ್ದ ಸಚಿವರು, ಪಕ್ಷದೊಳಗೆ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು. ತಾಕತ್ತಿದ್ದರೆ ಅವರು ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ಬಿಟ್ಟು ಹೊರಗೆ ಹೋಗಲಿ. ಪಕ್ಷದ ಅನ್ನ ತಿಂದು ಪಕ್ಷಕ್ಕೇ ದ್ರೋಹ ಬಗೆಯುವುದು ಸರಿಯಲ್ಲ. ಅವರು ಯಾವ ದೇವಸ್ಥಾನಕ್ಕೆ ಕರೆಯುತ್ತಾರೋ ಅಲ್ಲಿಗೆ ನಾನು ಬರಲು ಸಿದ್ಧ, ಪ್ರಮಾಣ ಮಾಡಿ ಸತ್ಯ ಹೇಳುತ್ತೇನೆ. ರಾಜಣ್ಣನವರೂ ಅಲ್ಲಿಗೆ ಬಂದು ಪ್ರಮಾಣ ಮಾಡಲಿ ಎಂದು ಗುಡುಗಿದರು.

HC Balakrishna
ಅಭಿವೃದ್ಧಿಗೆ ಗುಜರಾತ್, Sting ಗೆ ಕರ್ನಾಟಕ ಮಾಡೆಲ್: ರಾಹುಲ್- ಸಿದ್ದರಾಮಯ್ಯ ಭೇಟಿ ಬಗ್ಗೆ ಕೆ.ಎನ್.ರಾಜಣ್ಣ ಮಾಹಿತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X