'ಕುಮಾರಸ್ವಾಮಿ ತ್ಯಾಪೆ ಗಿರಾಕಿ, ಇವರಿಗೆ ಅಧಿಕಾರ ಬಿಟ್ಟುಕೊಡಲು ಬಿಜೆಪಿಯಲ್ಲಿ CM ಆಗುವಂತಹ ಗಂಡಸರು ಇಲ್ವಾ'?

ಇಂದು ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ ಅವರು, ಕುಮಾರಸ್ವಾಮಿ ಕೇಳಿದ ತಕ್ಷಣ ಜನ 5 ವರ್ಷ ಅಧಿಕಾರ ಕೊಟ್ಟುಬಿಡ್ತಾರಾ? ಅವರ ಪಕ್ಷವೇನಾದರೂ 125 ಸ್ಥಾನ ಗೆದ್ದುಬಿಡುತ್ತಾ? ಎಂದು ಪ್ರಶ್ನಿಸಿದರು.
HC Balakrishna
ಎಚ್. ಸಿ. ಬಾಲಕೃಷ್ಣ
Updated on: 

ರಾಮನಗರ: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಸಚಿವ ಸಚಿವ ಎಚ್.ಸಿ.ಬಾಲಕೃಷ್ಣ, ಅವರು ತ್ಯಾಪೆ ಗಿರಾಕಿ ಎಂದು ಶನಿವಾರ ಕಿಡಿ ಕಾರಿದ್ದಾರೆ.

ಇಂದು ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ ಅವರು, ಕುಮಾರಸ್ವಾಮಿ ಕೇಳಿದ ತಕ್ಷಣ ಜನ 5 ವರ್ಷ ಅಧಿಕಾರ ಕೊಟ್ಟುಬಿಡ್ತಾರಾ? ಅವರ ಪಕ್ಷವೇನಾದರೂ 125 ಸ್ಥಾನ ಗೆದ್ದುಬಿಡುತ್ತಾ? ಎಂದು ಪ್ರಶ್ನಿಸಿದರು.

ಇವರು ಕಾಂಗ್ರೆಸ್ ಹತ್ತಿರ ಬಂದ್ರೂ ತ್ಯಾಪೆ, ಬಿಜೆಪಿ ಹತ್ತಿರ ಹೋದ್ರೂ ತ್ಯಾಪೆ ಗಿರಾಕಿ. ಇವರಿಗೆ ಅಧಿಕಾರ ಬಿಟ್ಟುಕೊಟ್ಟು ಸುಮ್ಮನಿರಲು ಬಿಜೆಪಿಯಲ್ಲಿ ಸಿಎಂ ಆಗುವಂತಹ ಗಂಡಸರು ಇಲ್ವಾ ಎಂದು ಪ್ರಶ್ನಿಸಿದರು.

HC Balakrishna
ಮೂರನೇ ಮುಖ್ಯಮಂತ್ರಿಯ ಪ್ರಶ್ನೆಯೇ ಇಲ್ಲ, ಡಿಕೆಶಿ CM ಆಗಿ ಮುಂದುವರೆಯುತ್ತಾರೆ: ಕುತೂಹಲ ಮೂಡಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ!

ಇದೇ ವೇಳೆ ರಾಜ್ಯ ಸರ್ಕಾರ ಕಾಟಾಚಾರಕ್ಕೆ ಕೇಂದ್ರದಿಂದ ಬರ ಪರಿಹಾರ ಕೇಳಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ ಅವರು, ನಾವು ದೆಹಲಿಗೆ ಹೋಗಿ ಉಲ್ಟಾಪಲ್ಟಾ ನಿಂತುಕೊಳ್ಳಬೇಕಾ? ರಾಜ್ಯದಿಂದ ಪೈಲ್ವಾನ್‌ಗಳನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿದ್ದೀರಲ್ಲ. ಮಾಧ್ಯಮದವರು ಅವರನ್ನೂ ಪ್ರಶ್ನೆ ಮಾಡಬೇಕು. ಕೇಂದ್ರ ಸಚಿವರು ಬರೀ ಮನರಂಜನೆಗೆ ಇದ್ದಾರಾ? ಪ್ರತಿದಿನ ಬೆಳಗ್ಗೆ ಎದ್ದು ಮಾಧ್ಯಮಗಳಿಗೆ ಮನರಂಜನೆ ಕೊಡದಿದ್ದರೆ ಅವರಿಗೆ ನಿದ್ದೆಯೇ ಬರುವುದಿಲ್ಲ. ಇಷ್ಟೆಲ್ಲಾ ಮಾತನಾಡುವವರು ರೈತರ ಬಗ್ಗೆ, ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X