ಬಿಜೆಪಿಯಿಂದ ಡಿಸಿಎಂ, ಕಾಂಗ್ರೆಸ್‌ನಿಂದ ಮಂತ್ರಿ ಸ್ಥಾನದ ಆಫರ್ ಇದ್ದರೂ ಜೆಡಿಎಸ್‌ ಬಿಡಲಿಲ್ಲ: ಈಗ ಪಕ್ಷದಲ್ಲೇ ಮುಂದುವರಿಯುವುದು ಕುಮಾರಸ್ವಾಮಿ ಕೈಯಲ್ಲಿದೆ ಎಂದ ಜಿ.ಟಿ.ದೇವೇಗೌಡ

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ತಮ್ಮ ರಾಜಕೀಯ ನಡೆ ಹಾಗೂ ಜೆಡಿಎಸ್ ಪಕ್ಷದಲ್ಲಿನ ತಮ್ಮ ಸ್ಥಾನಮಾನದ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
JDS MLA GT Devegowda Says Future In Party Depends On HD Kumaraswamy Amid Political Rumours
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ - ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡOnline Desk
Updated on: 

ಹಾಸನ: ಒಂದು ಕಾಲು ಜೆಡಿಎಸ್ ಪಕ್ಷದಿಂದ ಹೊರಗಿಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು, "ಈ ಹಿಂದೆ ತಮಗೆ ಬಿಜೆಪಿಯಿಂದ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನದ ಆಫರ್ ಇತ್ತು ಮತ್ತು ಕಾಂಗ್ರೆಸ್‌ನಿಂದಲೂ ಮಂತ್ರಿ ಸ್ಥಾನದ ಅವಕಾಶವಿತ್ತು. ಆದರೆ, ಮಧ್ಯಂತರದಲ್ಲಿ ತಾವು ಜೆಡಿಎಸ್ ಪಕ್ಷ ಬಿಟ್ಟು ಬೇರೆ ಕಡೆ ಹೋಗಲಿಲ್ಲ, ಈಗಲೂ ಜೆಡಿಎಸ್‌ನಲ್ಲೇ ಇದ್ದೇನೆ, ಅದೇ ಪಾರ್ಟಿಯ ಚಿಹ್ನೆಯಿಂದ ಗೆದ್ದು ಬಂದಿದ್ದೇನೆ. ಕರೆದರೆ ಹೋಗಲು ಸಿದ್ದ ಎಂದು ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಜೆಡಿಎಸ್‌ನಲ್ಲಿ ಮುಂದುವರಿಯುವುದು HDK ಕೈಯಲ್ಲಿದೆ

ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಿರಿಯ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ತಾವು ಜೆಡಿಎಸ್ ಟಿಕೆಟ್‌ನಿಂದಲೇ ಗೆದ್ದು ಬಂದಿದ್ದು, ಸದ್ಯ ಜೆಡಿಎಸ್‌ನಲ್ಲೇ ಇದ್ದೇನೆ. ಆದರೆ ಪಕ್ಷದ ಕಡೆಯಿಂದ ಆಹ್ವಾನ, ಕರೆ ಅಥವಾ ಯಾವುದೇ ಮಾತುಕತೆಗಳು ಇಲ್ಲದಿರುವುದರಿಂದ ತಾವು ಸಂಪೂರ್ಣವಾಗಿ ಚಾಮುಂಡೇಶ್ವರಿ ಕ್ಷೇತ್ರದ ಜನರ ಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ, ತಾವು ಜೆಡಿಎಸ್‌ನಲ್ಲಿ ಮುಂದುವರಿಯುವುದು ಹಾಗೂ ಮುಂದಿನ ರಾಜಕೀಯ ನಡೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

JDS MLA GT Devegowda Says Future In Party Depends On HD Kumaraswamy Amid Political Rumours
JDSಗೆ ಮರುಜೀವ ನೀಡಲು ಮಾಸ್ಟರ್ ಪ್ಲಾನ್: ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಎಚ್.ಡಿ ಕುಮಾರಸ್ವಾಮಿ!

ಮುಂದುವರೆದು, ಈ ಹಿಂದೆ ಮೈತ್ರಿಕೂಟ ಅಥವಾ ಸರ್ಕಾರಿ ಬದಲಾವಣೆಗಳ ಸಂದರ್ಭದಲ್ಲಿ ಬಿಜೆಪಿಯಿಂದ ತಮಗೆ ಡಿಸಿಎಂ ಆಫರ್ ಬಂದಿತ್ತು ಹಾಗೂ ಕಾಂಗ್ರೆಸ್‌ನವರೂ ಮಂತ್ರಿ ಸ್ಥಾನದ ಆಫರ್ ನೀಡಿದ್ದರು. ಆ ಆಮಿಷಗಳಿಗೆ ಒಳಗಾಗದೆ ತಳಮಟ್ಟದಲ್ಲಿ ಪಕ್ಷದಲ್ಲೇ ಉಳಿದುಕೊಂಡಿದ್ದನ್ನು ನೆನಪಿಸಿಕೊಂಡ ಜಿಟಿಡಿ, ಪಕ್ಷದಲ್ಲಿ ಸದ್ಯ ಕಡೆಗಣನೆಗೆ ಒಳಗಾಗಿದ್ದರೂ, ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿ ಇರಲಿ, ಅವರ ವಿಶ್ವಾಸ ಪಡೆದು ಕ್ಷೇತ್ರದ ಅಭಿವೃದ್ಧಿ ಮಾಡುವುದಷ್ಟೇ ತಮ್ಮ ಸದ್ಯದ ಪ್ರಮುಖ ಗುರಿ ಎಂದು ಹೇಳಿದ್ದಾರೆ. ಇದೆ ವೇಳೆ, ರಾಜ್ಯದಲ್ಲಿ ಸದ್ದು ಮಾಡಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಪ್ರತಿಕ್ರಿಯಿಸಿದ ಜಿ.ಟಿ.ಡಿ. "ನನಗೆ ಸ್ಟಿಂಗ್ ಅಂದರೆ ಗೊತ್ತಿಲ್ಲ. ಕಲ್ಲಲ್ಲಿ ಹೊಡೆದವರಿಗೆ ಬೆಣ್ಣೆಯಲ್ಲಿ ಹೊಡಿ ಎಂದು ಸರ್ವಜ್ಞರು ಹೇಳಿದ್ದಾರೆ. ಅಭಿವೃದ್ಧಿಯ ಬಗ್ಗೆ ಚರ್ಚೆ ಆಗಬೇಕು, ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಯನ್ನು ಹಾಸನಾಂಬೆ ತಾಯಿ ಕರುಣಿಸಲಿ ಎಂದು ಹಾರೈಸಿದ್ದರು.

ಏತನ್ಮಧ್ಯೆ, ಕಳೆದ ಕೆಲವು ತಿಂಗಳುಗಳಿಂದ ಜಿ.ಟಿ. ದೇವೇಗೌಡರು ಜೆಡಿಎಸ್ ನಾಯಕರ ವರ್ತನೆಯಿಂದ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳಿದ್ದವು. ಇತ್ತೀಚೆಗಷ್ಟೇ ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಕಾಂಗ್ರೆಸ್ ಸೇರಲಿದ್ದಾರೆ ಎಂಬ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ, ಪ್ರಸ್ತುತ ದೀಪಾವಳಿ ಹಾಗೂ ಹಾಸನಾಂಬೆ ದರ್ಶನದ ಬಳಿಕ ನೀಡಿರುವ ಈ ಹೇಳಿಕೆಯು ಕರ್ನಾಟಕ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X