‘ನಿಖಿಲ್​​ ಕುಮಾರಸ್ವಾಮಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ? ದಲಿತರಿಗೆ ನಿತ್ಯ ದೇಗುಲ ಪ್ರವೇಶ ನಿರಾಕರಿಸುವುದು ಕಾಣುತ್ತಿಲವೇ?’

ನಿಖಿಲ್​​ ಕುಮಾರಸ್ವಾಮಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ? ಪ್ರತಿನಿತ್ಯ ದಲಿತರಿಗೆ ದೇಗುಲ ಪ್ರವೇಶಿಸಲು ಬಿಡೋದೇ ಇಲ್ಲ. ದಲಿತರಿಗೆ ನಿತ್ಯ ದೇಗುಲ ಪ್ರವೇಶ ನಿರಾಕರಿಸುವುದು ನಿಮಗೆ ಕಾಣುತ್ತಿಲವೇ? ಇದರ ಬಗ್ಗೆ ಯಾರೂ ಕೂಡ ಮಾತನಾಡಲ್ಲ.
Will investigate if complaint is filed: Priyank Kharge on Nikhil Kumaraswamy temple entry row
ಪ್ರಿಯಾಂಕ್ ಖರ್ಗೆ - ನಿಖಿಲ್
Updated on: 

ಬೆಂಗಳೂರು: ರಾಮನಗರ ತಾಲ್ಲೂಕಿನ ದೊಡ್ಡ ಕುರುಬರಹಳ್ಳಿ ಗ್ರಾಮದಲ್ಲಿ ಕಳೆದ ಶುಕ್ರವಾರ ಜೆಡಿಎಸ್ ಯುವ ನಾಯಕ ನಿಖಿಲ್​​ ಕುಮಾರಸ್ವಾಮಿಗೆ ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಒಂದು ದೊಡ್ಡ ಸುದ್ದಿನಾ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಪ್ರಶ್ನಿಸಿದ್ದಾರೆ.

ಇಂದು ನಗರದಲ್ಲಿ ನಿಖಿಲ್​​ ಕುಮಾರಸ್ವಾಮಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ಈ ವಿಚಾರದ ಬಗ್ಗೆ ನಮಗೆ ಪೂರ್ಣವಾದ ಮಾಹಿತಿ ಇಲ್ಲ. ಯಾರು ಬೀಗ ಹಾಕಿಸ್ತಾರೆ ಅಂತ ನಾವೇ ಕಾವಲು ಕಾಯಲು ಆಗಲ್ಲ. ನಿಖಿಲ್ ಇದ್ದಾರೆ ಎಂಬ ಮಾತ್ರಕ್ಕೆ ಪೊಲೀಸರು ಯಾಕೆ ಹೋಗಬೇಕು? ಎಂದು ಪ್ರಶ್ನಿಸಿದರು.

ನಿಖಿಲ್​​ ಕುಮಾರಸ್ವಾಮಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ? ಪ್ರತಿನಿತ್ಯ ದಲಿತರಿಗೆ ದೇಗುಲ ಪ್ರವೇಶಿಸಲು ಬಿಡೋದೇ ಇಲ್ಲ. ದಲಿತರಿಗೆ ನಿತ್ಯ ದೇಗುಲ ಪ್ರವೇಶ ನಿರಾಕರಿಸುವುದು ನಿಮಗೆ ಕಾಣುತ್ತಿಲವೇ? ಇದರ ಬಗ್ಗೆ ಯಾರೂ ಕೂಡ ಮಾತನಾಡಲ್ಲ ಎಂದು ಗೃಹ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

Will investigate if complaint is filed: Priyank Kharge on Nikhil Kumaraswamy temple entry row
ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ದೇಗುಲಕ್ಕೆ ನಿರ್ಬಂಧ: JDS ಬೆಂಬಲಿಗರ ಆಕ್ರೋಶ

ಯಾರೋ ಒಬ್ಬರು ಹೋಗಿ ಆಚೆ ಇದ್ದರೆ ಇಷ್ಟು ದೊಡ್ಡ ಸುದ್ದಿನಾ? ಎಂದು ಪ್ರಶ್ನಿಸಿರುವ ಅವರು, ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿದ್ದರೆ ಅದು ಸರಿಯಲ್ಲ. ಇದು ದೊಡ್ಡದು ಮಾಡುವ ವಿಷಯ ಅಲ್ಲ. ಈ ಬಗ್ಗೆ ದೂರು ಕೊಟ್ಟರೆ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ಖರ್ಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X