

ಮೈಸೂರು: ಮಾಜಿ ಸಚಿವ ಮುರುಗೇಶ್ ನಿರಾಣಿ ಮೈಸೂರು ರಾಜಮನೆತನದ ಬಗ್ಗೆ ಲಘುವಾಗಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವ ಯತೀಂದ್ರ ಸಿದ್ದರಾಮಯ್ಯ ಮೈಸೂರು ಮಹಾರಾಜರ ಬಗ್ಗೆ ಮಾತನಾಡುತ್ತಾರೆ. 100 ವರ್ಷಗಳ ಹಿಂದೆಯೇ ದೇಶದ ರಾಜಮನೆತನಗಳ ಟಾಪ್ 10 ಪಟ್ಟಿಯಲ್ಲಿ ಮೈಸೂರು ಇತ್ತು. ಅಂತಹ ಅಭಿವೃದ್ಧಿ ಕೆಲಸ ಮಾಡಿದ್ದು ಮೈಸೂರು ರಾಜಮನೆತನ. ಇದನ್ನು ಯತೀಂದ್ರ ತಿಳಿದುಕೊಳ್ಳಬೇಕು ಎಂದು ಅವರು ಕಿಡಿಕಾರಿದರು.
151 ಕೈಗಾರಿಕೆಗಳನ್ನು ಸ್ಥಾಪಿಸಿದ್ದು ಮೈಸೂರು ರಾಜಮನೆತನ. ಸಿಮೆಂಟ್ ಸ್ಟಿಲ್ ಪೇಪರ್ ಗೋಲ್ಡ್ ಎಲ್ಲವನ್ನೂ ಸ್ಥಾಪನೆ ಮಾಡಿದ್ದು ಯಾರು ಎಂಬುದನ್ನು ನೆನಪಿಸಿಕೊಳ್ಳಬೇಕು. ಕೆ.ಆರ್.ಎಸ್, ಬ್ಯಾಂಕ್ ಗಳು, ಶಿಕ್ಷಣ ಸಂಸ್ಥೆಗಳು ಎಲ್ಲವನ್ನೂ ಮಾಡಿದ್ದು ಮೈಸೂರು ರಾಜರು. ಅಂತ ಮನೆತನಕ್ಕೆ ಅಗೌರವ ತೋರಿಸಿದು ಸರಿಯಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯಾನಂತರ, ಹೊಸ ಸರ್ಕಾರಗಳಿಗೆ ಜನರಿಗೆ (1947ರಲ್ಲಿ 33 ಕೋಟಿ ಜನಸಂಖ್ಯೆ) ಆಹಾರ ಒದಗಿಸುವುದೇ ಕಷ್ಟಕರವಾಗಿದ್ದರಿಂದ, ಇಂತಹ ನವೀನ ಆಲೋಚನೆಗಳನ್ನು ಕೈಬಿಡಲಾಯಿತು. ಆದರೆ ಇಂದು, ನಮ್ಮ ಒಂದು ವರ್ಷದ ಆಹಾರ ಉತ್ಪಾದನೆಯು 140 ಕೋಟಿ ಜನರಿಗೆ ಎರಡು ವರ್ಷಗಳ ಕಾಲ ಊಟ ನೀಡಲು ಸಾಕಾಗುತ್ತದೆ.
ಒಂದು ವೇಳೆ ಒಂದು ವರ್ಷ ತೀವ್ರ ಬರಗಾಲ ಬಂದರೂ, ನಮ್ಮ ಜನರಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಆಹಾರ ಒದಗಿಸಲು ಬೇಕಾದಷ್ಟು ದಾಸ್ತಾನು ನಮ್ಮಲ್ಲಿದೆ. ಹೀಗಾಗಿ, ಬ್ರೆಜಿಲ್‌ನಂತಹ ರಾಷ್ಟ್ರಗಳ ಮಾದರಿಯಲ್ಲಿ—ಅಲ್ಲಿ ವಾಹನಗಳು ಶೇ. 100ರಷ್ಟು ಎಥೆನಾಲ್‌ನಿಂದ ಚಲಿಸುತ್ತವೆ.
ನಮ್ಮಲ್ಲೂ ಎಥೆನಾಲ್ ಬಳಕೆಯನ್ನು ಉತ್ತೇಜಿಸಲು ಮತ್ತು ರೈತರಿಗೆ ಸಹಾಯ ಮಾಡಲು, 2001ರಲ್ಲಿ ಪ್ರಾಯೋಗಿಕವಾಗಿ ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಎಥೆನಾಲ್ ಉತ್ಪಾದನೆಗೆ ಜೋಳವನ್ನು ಬಳಸಲು ಪ್ರಾರಂಭಿಸಿದ ನಂತರ, ಕೇವಲ ಐದು ವರ್ಷಗಳಲ್ಲಿ ಜೋಳದ ಬೆಲೆಯು ಪ್ರತಿ ಕ್ವಿಂಟಲ್‌ಗೆ 1,400 ರೂ.ನಿಂದ 3,200 ರೂ.ಗೆ ಏರಿಕೆಯಾಗಿದೆ," ಎಂದು ನಿರಾಣಿ ಹೇಳಿದರು.
ನಾಲ್ವಡಿ ಕೃಷ್ಣರಾಜರ ಇತಿಹಾಸವನ್ನು ಯತೀಂದ್ರ ಓದಬೇಕು. ನನಗೆ ಪ್ರೇರಣೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್. ನಮ್ಮ ಎಲ್ಲ ಸಂಸ್ಥೆಗಳಲ್ಲಿ ಅವರ ಫೋಟೋ ಇಟ್ಟಿದ್ದೇನೆ. ಇದೇ ಜಿಲ್ಲೆಯ ನೀವು ಅವರ ವಿರುದ್ಧ ಮಾತನಾಡೋದು ಸರಿಯಲ್ಲ. ಮೈಸೂರು ಜನರೇ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದಿನ ಮೈಸೂರು ಸಂಸ್ಥಾನದಾದ್ಯಂತ 151 ಕೈಗಾರಿಕೆಗಳನ್ನು ಸ್ಥಾಪಿಸಿದರು ಅಥವಾ ಅವುಗಳ ಸ್ಥಾಪನೆಗೆ ನೆರವಾದರು. ಅಂದು ಜನರು ಬಳಸುತ್ತಿದ್ದ ಬಹುತೇಕ ಎಲ್ಲವನ್ನೂ - ಚಿನ್ನದಿಂದ ಹಿಡಿದು ಬಟ್ಟೆ ತೊಳೆಯುವ ಸಾಬೂನುಗಳವರೆಗೆ; ಉಕ್ಕು, ಸಿಮೆಂಟ್ ಮತ್ತು ಕೃಷಿ ಉಪಕರಣಗಳಿಂದ ಹಿಡಿದು ವಿದ್ಯುತ್ ಶಕ್ತಿಯವರೆಗೆ; ಶಾಯಿ ಮತ್ತು ಕಾಗದದಿಂದ ಹಿಡಿದು ಶ್ರೀಗಂಧದ ಸಾಬೂನುಗಳವರೆಗೆ; ರೇಷ್ಮೆ ಸೀರೆಗಳಿಂದ ಹಿಡಿದು ಟವೆಲ್‌ಗಳವರೆಗೆ - ಎಲ್ಲವನ್ನೂ ಇಲ್ಲಿಯೇ ತಯಾರಿಸಲಾಗುತ್ತಿತ್ತು," ಎಂದು ನಿರಾಣಿ ವಿವರಿಸಿದರು.
ಇನ್ನೂ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಇಲ್ಲ. ಲಾಭಿಯನ್ನು ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಮುರುಗೇಶ್ ಆರ್. ನಿರಾಣಿ ಸ್ಪಷ್ಟಪಡಿಸಿದರು. ಪಕ್ಷ ಗುರುತಿಸಿ ಎಂಎಲ್ಎ, ಮಂತ್ರಿ ಎಲ್ಲ ಸ್ಥಾನವನ್ನು ಕೊಟ್ಟಿದ್ದೆ. ಸದ್ಯಕ್ಕೆ ನಾನು ಆ ಸ್ಥಾನ ಕೇಳುತ್ತಿಲ್ಲ. ಕೊಟ್ಟರೆ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು.
ವಿಜಯೇಂದ್ರ ಒಳ್ಳೆ ಕೆಲಸ ಮಾಡಿದ್ದಾರೆ. ಒಳ್ಳೊಳ್ಳೆ ಹೋರಾಟ ಮಾಡಿದ್ದಾರೆ. ಅವರನ್ನೇ ಮುಂದುವರೆಸಿದರೂ ಸ್ವಾಗತ. ಬದಲಾವಣೆ ಆದರೇ ಯಾರೇ ಅಧ್ಯಕ್ಷರಾದರು ಪಕ್ಷವನ್ನು ಬಲಪಡಿಸಲು ತನು ಮನ ಧನ ಹಾಕಿ ಎನ್ ಡಿಎ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇವೆ. ಪಕ್ಷದಲ್ಲಿ ಅಡ್ಜಸ್ಟ್ಮೆಂಟ್ ರಾಜಕಾರಣ ಇಲ್ಲ. ಹಳದಿ ಕಣ್ಣಿಗೆ ಕಾಣೋದು ಎಲ್ಲ ಹಳದಿ ಅಂತ ಕೆಲವರು ಹೇಳುತ್ತಾರೆ. ಇದರಲ್ಲಿ ಹುರುಳಿಲ್ಲ ಎಂದು ಅವರು ಹೇಳಿದರು.