ಶೋಭಾ ಅಪಾರ್ಟ್‌ಮೆಂಟ್‌ಗೂ ಡಿಕೆಶಿಗೂ ಏನು ಸಂಬಂಧ: ಶಿಶುಪಾಲನ ಕತೆಯಂತಾಯಿತು; ಎಚ್‌.ಡಿ ಕುಮಾರಸ್ವಾಮಿ ವ್ಯಂಗ್ಯ

ನಗರದ ಹೊಸಕೆರೆಹಳ್ಳಿ ಸಮೀಪ ನೈಸ್‌ ರಸ್ತೆಗಾಗಿ ನೀಡಲಾಗಿದ್ದ ಜಮೀನು ಶೋಭಾ ಡೆವಲಪರ್ಸ್‌ ತೆಕ್ಕೆಗೆ ಬಂದಿದ್ದು ಹೇಗೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ನೈಸ್‌ ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರ ಅಹವಾಲನ್ನು ಸ್ವೀಕರಿಸಿದ ನಂತರ ಅವರು ಮಾತನಾಡಿದರು.
HD Kumaraswamy
ಎಚ್.ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: ನೈಸ್‌ ರಸ್ತೆ ಸಂಬಂಧ ಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ನಡುವಿನ ಪರಸ್ಪರ ವಾಗ್ದಾಳಿ ಮುಂದುವರಿದಿದೆ.

ನೈಸ್ ರಸ್ತೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಶನಿವಾರವೂ ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದರು.

ನಗರದ ಹೊಸಕೆರೆಹಳ್ಳಿ ಸಮೀಪ ನೈಸ್‌ ರಸ್ತೆಗಾಗಿ ನೀಡಲಾಗಿದ್ದ ಜಮೀನು ಶೋಭಾ ಡೆವಲಪರ್ಸ್‌ ತೆಕ್ಕೆಗೆ ಬಂದಿದ್ದು ಹೇಗೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ನೈಸ್‌ ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರ ಅಹವಾಲನ್ನು ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ನೈಸ್‌ ಟೋಲ್‌ಗೇಟ್‌ ಬಳಿ ಇರುವ ಶೋಭಾ ಅಪಾರ್ಟ್‌ಮೆಂಟ್‌ ಯಾರದ್ದು? ಆ ಅಪಾರ್ಟ್‌ಮೆಂಟ್‌ಗೂ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕುಟುಂಬ, ಸೋದರ ಡಿ.ಕೆ.ಸುರೇಶ್‌ ಅವರಿಗೂ ಏನು ಸಂಬಂಧ? ಈ ವಿಚಾರ ಯಾರಿಗೂ ಗೊತ್ತಾಗುವುದಿಲ್ಲ ಅಂದುಕೊಂಡರೆ ಹೇಗೆ ಎಂದರು.

HD Kumaraswamy
ಬರದಿಂದ ಕೆಂಗೆಟ್ಟ ಕರ್ನಾಟಕಕ್ಕೆ ಕೇಂದ್ರದ ನೆರವಿನ ನಿರೀಕ್ಷೆ: ಅಕ್ಟೋಬರ್ 3 ರಿಂದ ಕೇಂದ್ರ ತಂಡದ ಸಮೀಕ್ಷೆ- ಎಚ್.ಡಿ ಕುಮಾರಸ್ವಾಮಿ

ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆಂದು ಅಧಿಸೂಚನೆ ಹೊರಡಿಸಲಾದ ಜಮೀನನ್ನು, ಮತ್ತೊಂದು ಖಾಸಗಿ ಕಂಪನಿ ಹೇಗೆ ಖರೀದಿಸಿತು? ಯಾವ ಕಾನೂನಿನಲ್ಲಿ ಇಂತಹ ಖರೀದಿಗೆ ಅವಕಾಶವಿದೆ? ಜಮೀನು ಮಾರಾಟ ಮತ್ತು ವಸತಿ ಉದ್ದೇಶದ ಅಭಿವೃದ್ಧಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ದೊರೆತದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಅವರು (ಡಿ.ಕೆ.ಶಿವಕುಮಾರ್‌) ಉತ್ತರಿಸಬೇಕಾಗುತ್ತದೆ’ ಎಂದರು.

ಇದೇ ನೈಸ್‌ ಕಂಪನಿ, ಭೂಮಿಯ ಮೂಲ ಮಾಲೀಕರಾದ ರೈತರಿಗೆ ಎನ್‌ಒಸಿ ಕೊಡಲಿಲ್ಲ, ಸಿದ್ದಗಂಗಾ ಮಠಕ್ಕೂ ಎನ್‌ಒಸಿ ನೀಡಲಿಲ್ಲ. ಅಂತಹ ಜಿಗುಟು ಕಂಪನಿ ಯಾವ ಕಾರಣಕ್ಕೆ ಶೋಭಾ ಡೆವಲಪರ್ಸ್‌ಗೆ ಎನ್‌ಒಸಿ ನೀಡಿತು? ರೈತರಿಂದ ಕಸಿದುಕೊಳ್ಳಲಾದ ಜಮೀನಿನಲ್ಲಿ ₹2,000 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿದೆ. ರೈತರ ಜಮೀನಿನಿಂದ ₹2,000 ಕೋಟಿ ಲಾಭ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಮಿತಿ ಮೀರಿದ ದುರಾಸೆ, ಅಂಕೆ ಇಲ್ಲದ ಭೂದಾಹ, ದೇವರು ಕೊಟ್ಟಿದ್ದು ಸಾಲದು.. ಇನ್ನೂ ಬೇಕು ಬೇಕು ಎನ್ನುವ ಹಪಾಹಪಿ.. ಮನುಷ್ಯನನ್ನು ತಪ್ಪುಗಳ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಕಥೆಯೂ ಹಾಗೆ ಆಗಿದೆ. ಶಿಶುಪಾಲನಿಗೆ ನೂರೊಂದು ತಪ್ಪುಗಳನ್ನು ಮಾಡಲು ಶ್ರೀಕೃಷ್ಣ ಪರಮಾತ್ಮನು ಅವಕಾಶ ಕೊಟ್ಟಂತೆಯೇ ರಾಜ್ಯದ ಜನರೂ ಈ ವ್ಯಕ್ತಿಯ ತಪ್ಪುಗಳನ್ನು ಗಮನಿಸುತ್ತಲೇ ಬಂದು ಕೊನೆಯ ಅವಕಾಶ ನೀಡಿದ್ದಾರೆ.

ಅವರ ಭೂದಾಹಕ್ಕೆ ಈಗ ಇಡೀ ನೈಸ್ ರಸ್ತೆ ಯೋಜನೆಯೇ ಸ್ವಾಹಾ ಆಗುವ ಅಪಾಯ ಎದುರಾಗಿದೆ. ಹೈದರಾಬಾದ್ ಉದ್ಯಮಿ ಜತೆ ಶಾಮೀಲಾಗಿ ಇಡೀ ಪ್ರಾಜೆಕ್ಟ್ ಅನ್ನು ಖರೀದಿ ಮಾಡಲು ಹೊರಟಿದ್ದಾರೆ. ಮುಂದಿನ ವರ್ಷಕ್ಕೆ ನೈಸ್ ಒಪ್ಪಂದ ಮುಗಿಯುತ್ತದೆ. ನಂತರ ನೈಸ್ ರಸ್ತೆ ಸಂಪೂರ್ಣವಾಗಿ ಆಸ್ತಿ. ಅದಕ್ಕೂ ಮೊದಲೇ ಅದನ್ನು ನುಂಗಿಬಿಡುವ ದುಸ್ಸಾಹಸಕ್ಕೆ ಮುಖ್ಯಮಂತ್ರಿ ಕೈ ಹಾಕಿದ್ದಾರೆ ಎಂದು ದೂರಿದ್ದಾರೆ.

HD Kumaraswamy
ನನಗೆ ಹಳ್ಳ ತೋಡಲು ಪ್ರತಿಕ್ಷಣ ಕಾಯುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ನೈಸ್ ಯೋಜನೆ ಉಸಾಬರಿ ನಿಮಗೇಕೆ ಬೇಕು? ಈ ವಿಷಯದಲ್ಲಿ ನೀವು ಸುಮ್ಮನೆ ಇದ್ದುಬಿಡಿ. ನಿಮಗೆ ಏನು ಬೇಕೋ ಅದನ್ನು ತೆಗೆದುಕೊಳ್ಳಿ ಎಂದು ಆಮಿಷ ಒಡ್ಡಲು ಪ್ರಯತ್ನ ಮಾಡಿದ್ದರು. ನನ್ನ ಬಳಿ ಬಂದವರನ್ನು ಉಗಿದು ಹೊರಗಟ್ಟಿದ್ದೇನೆ. ಯಾರಿಂದಲೂ ನನ್ನನ್ನು ಖರೀದಿ ಮಾಡುವುದು ಸಾಧ್ಯವಿಲ್ಲ. ನಾನು ಜನರ ಮನುಷ್ಯ. ಜನರಿಗಾಗಿ ಬದುಕುತ್ತೇನೆ ಮತ್ತು ಅವರಿಗಾಗಿಯೇ ಪ್ರಾಣ ಬಿಡಲು ಸಿದ್ಧನಿದ್ದೇನೆ. ನೈಸ್ ಭೂ ಸಂತ್ರಸ್ತರು ಹಾಗೂ ನಾಡಿನ ಜನರೆಲ್ಲರೂ ಒಗ್ಗಟ್ಟಾಗಿದ್ದಾರೆ ನೈಸ್ ರಸ್ತೆಯನ್ನು ರಾಜ್ಯಕ್ಕೇ ಉಳಿಸಿಕೊಡುತ್ತೇನೆ ಎಂದು ಕುಮಾರಸ್ವಾಮಿ ಅವರು ಗುಡುಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com