

ಬೆಂಗಳೂರು: ಮುಂದಿನ ಜನ್ಮದಲ್ಲಿ ದಲಿತರ ಮನೆಯಲ್ಲಿ ಹುಟ್ಟಿ ಮೇಲ್ವರ್ಗದವರನ್ನ ಆಟ ಆಡಿಸ್ತೀನಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೇರೆಯವರಿಗೆ ನೆಕ್ಸ್ಟ್ ಎಲೆಕ್ಷನ್ ಬೇಕಾಗಿದೆ, ಆದರೆ ನನಗೆ ನೆಕ್ಸ್ಟ್ ಜನರೇಷನ್ ಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ನನ್ನ ದೇವ್ರು. ನಾನು ಪ್ರಮಾಣ ವಚನ ತೆಗೆದುಕೊಂಡಿದ್ದು ಅವರ ಹೆಸರಿನಲ್ಲೇ ಎಂದು ಹೇಳಿದರು.
ಮುಂದಿನ ಜನ್ಮ ಎಂಬುದು ಇದ್ದರೆ ನಾನು ದಲಿತರ ಮನೆಯಲ್ಲಿ ಹುಟ್ಟಬೇಕು ಎಂದು ಬೇಡಿಕೊಳ್ಳುತ್ತೇನೆ, ಒಬಿಸಿಯಲ್ಲಿ ಹುಟ್ಟಿ ದಲಿತರ ಪರ ಇಷ್ಟು ಫೈಟ್ ಮಾಡ್ತಿದ್ದೀನಿ. ದಲಿತನಾಗಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸ್ತೀನಿ ಎಂದಿದ್ದಾರೆ.
ನಾನು ಭೈತೀನಿ ಅಷ್ಟೇ ಅವನು ಮತ್ತೆ ಏನು ಭೈದ ಅಂತ ನಾನು ನೋಡಲ್ಲ... ಕಾಮೆಂಟ್ಸ್ ಸೆಕ್ಷನ್ ನೋಡೋದಕ್ಕೆ ಹೋಗ್ಬೇಡ...ನಾನು ಕಾಮೆಂಟ್ಸ್ ನೋಡೋಕೆ ಹೋಗಲ್ಲ, ವಿಡಿಯೋ ಕೂಡ ನೋಡಲ್ಲ. ಅದಕ್ಕೆ ನಾನು ಆರಾಮಾಗಿ ಇದ್ದೀನಿ ಎಂದು ಹೇಳಿದ್ದಾರೆ.