'ಹಿಂದೂಗಳಲ್ಲ, ಮುಸ್ಲಿಮರೇ ಕಳ್ಳ​ ವೋಟು ಹಾಕೋದು': ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್-Video

ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ಕುರಿತು ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, 'ನಕಲಿ ಮತದಾನದ ವಿಚಾರದಲ್ಲಿ ಹಿಂದೂ..
Basanagouda Patil Yatnal
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)
Updated on: 

ದಾವಣೆಗೆರೆ: ಚುನಾವಣೆಗಳಲ್ಲಿ ಬೋಗಸ್ ವೋಟು ಹಾಕೋದು ಮುಸ್ಲಿಮರೇ ಹೊರತು ಹಿಂದೂಗಳಲ್ಲ.. ಅವರಿಗೆ ಆ ಧೈರ್ಯವಿಲ್ಲ ಮತ್ತು ಕಾನೂನು ಮೀರುವುದಿಲ್ಲ ಎಂದು ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ಕುರಿತು ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, 'ನಕಲಿ ಮತದಾನದ ವಿಚಾರದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸುವುದು ಸರಿಯಲ್ಲ' ಎಂದರು.

ಅಂತೆಯೇ 'ಬುರ್ಖಾ ಹಾಕೊಂಡು ಒಂದೇ ಹೆಸರಲ್ಲಿ 10 ಜನರ ವೋಟ್ ಇದೆ. ಬೋಗಸ್​ ವೋಟಿಂಗ್​ ಮಾಡುವ ಮೂಲಕ ಈ ದೇಶವನ್ನು ಪಾಕಿಸ್ತಾನ ಮಾಡಬೇಕು ಎನ್ನುವ ಷಡ್ಯಂತರ ಮಾಡಲಾಗುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

'ಮತದಾನ ಮಾಡುವಾಗ ಚುನಾವಣಾ ನಿಯಮದ ಅನ್ವಯ ಮುಖ ಕಾಣಬೇಕು. ಆದರೆ ಅವರು ಬುರ್ಖಾ ಹಾಕೊಂಡರೆ ಯಾರು ಅಂತ ಗೊತ್ತಾಗುವುದಿಲ್ಲ‘’ ಎಂದರು.

Basanagouda Patil Yatnal
‘ನೈಸ್ ಅಕ್ರಮ ಮರೆಮಾಚಲು ಈ ಡ್ರಾಮಾ’: ಚುನಾವಣಾ ಆಯೋಗದ ಮುಂದೆ ಸಿಎಂ, ಸಚಿವರ ಧರಣಿಗೆ ಕುಮಾರಸ್ವಾಮಿ ಕಿಡಿ

2047ಕ್ಕೆ ಭಾರತ ಇಸ್ಲಾಂ ಮಾಡಲು ಸಂಚು

ಇದೇ ವೇಳೆ ‘2047ಕ್ಕೆ ಭಾರತವನ್ನ ಇಸ್ಲಾಂ ಮಾಡಬೇಕು ಅಂತ ಅವರು ಹೊರಟಿದ್ದಾರೆ. ಕಾಂಗ್ರೆಸ್​​ ಕೂಡ ಅವರಿಗೆ ಬೆಂಬಲ ನೀಡುತ್ತಿದೆ’ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದರು. ‘ನಾವು ಬೋಗಸ್ ವೋಟು ಹಾಕಿದ್ದರೆ ತನಿಖೆ ಮಾಡಲಿ. ಬಿಜೆಪಿಯ ಯಾವ ನಾಯಕರು ಹಿಂದೂಗಳ ಪರ ಗಟ್ಟಿಯಾಗಿ ನಿಲ್ಲುತ್ತಾರೆ?’ ಎಂದು ಅವರು ಪ್ರಶ್ನಿಸಿದರು.

ಸಿದ್ದರಾಮಯ್ಯನವರಿಗೆ ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ಬಿಟ್ಟು ಬರಲಿ

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿದ ಅವರು, ‘ಇಷ್ಟು ದಿನ ಮಜಾ ಮಾಡಿ ಈಗ ಸಾಕಷ್ಟು ನೋವು ಆಗಿದೆ ಎಂದು ಹೇಳುತ್ತಿದ್ದಾರೆ. ಮಜಾ ಮಾಡುವಾಗ ಇದು ಅವರಿಗೆ ಅನ್ನಿಸಲಿಲ್ವಾ? ಸಿದ್ಧರಾಮಯ್ಯ ಬಹುದೊಡ್ಡ ಸಮಾಜದಿಂದ ಬಂದು ಮಹಾನ್ ವ್ಯಕ್ತಿ ಆದವರು. ಅವರ ಅರ್ಥಿಕ ನೀತಿ ಎಷ್ಟು ಉತ್ತಮವಾಗಿತ್ತು ಎಂದು ನಾವು ನೋಡಿದ್ದೇವೆ. ಆದರೆ ಅಂತಹ ಸಿದ್ದರಾಮಯ್ಯರ ಮೂರ್ತಿಯನ್ನು ತಿಪ್ಪೆಗೆ ಹಾಕಿದ್ದಾರೆ ಈ ಕಾಂಗ್ರೆಸ್. ಸಿದ್ದರಾಮಯ್ಯನವರಿಗೆ ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ಬಿಟ್ಟು ಹೊರಬರಬೇಕು’ ಎಂದು ಹೇಳಿದ್ದಾರೆ.

ಟಿವಿಕೆ ರೀತಿ ಯತ್ನಾಳ್ ಪಕ್ಷ ಕೂಡ ಹೊರ ಹೊಮ್ಮುತ್ತದೆ

‘ರಾಜ್ಯ ಬಿಜೆಪಿ ಸ್ಥಿತಿ ಹೇಗಿದೆ ಅಂದರೆ ಇವರದ್ದು ಹೊಂದಾಣಿಕೆ ರಾಜಕೀಯ. ದಾವಣಗೆರೆಯಲ್ಲಿ ಒಂದು ಗಿಳಿ ಇದೆ, ‌ಆ ಗಿಳಿಯ ಕುತ್ತಿಗೆ ಹಿಡಿದರೆ ಬೆಂಗಳೂರಿನ ಬಾಗಿಲು ಓಪನ್ ಆಗುತ್ತದೆ. ಬಿಜೆಪಿಯಲ್ಲಿ ಈಗ ಯಾರು ಮತಗಳನ್ನ ಸೆಳೆಯುವ ನಾಯಕರಿದ್ದಾರೆ?. ಬಿಜೆಪಿಯ ವರಿಷ್ಠರು ಇನ್ನೂ 1980ರಲ್ಲಿ ಇದ್ದಾರೆ. ತಮಿಳುನಾಡಿನ ವಿಜಯ್ ರೀತಿಯಲ್ಲಿ ನನ್ನದೂ ಚಮತ್ಕಾರ ಆಗಲಿದೆ. ಈಗಾಗಲೇ ನಾನು ಪ್ರಚಾರ ಆರಂಭಿಸಿದ್ದೇನೆ. ಚುನಾವಣೆ ಬಳಿಕ‌ ನನ್ನ ಶಕ್ತಿ ರಾಜ್ಯದ ಜನರಿಗೆ ಗೊತ್ತಾಗಲಿದೆ’ ಎಂದು ಯತ್ನಾಳ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com