ಚಿಂತಾಮಣಿಯ ದೊಣ್ಣೆ ನಾಯಕನಿಗೆ... ನಿಮ್ಮ ವಿರುದ್ಧ ಸಮರ ನಿರಂತರ: ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಹಾಕುವವನು ನಾನು!

ಮುನಿಯಪ್ಪ ಅವರ ಕುಟುಂಬದ ವ್ಯಕ್ತಿಗೆ ಟಿಕೆಟ್ ಕೊಡಬಾರದೆಂದು ಹಠಕ್ಕೆ ಬಿದ್ದು ಟಿಕೆಟ್ ತಪ್ಪಿಸಿದ್ದೀರ ಮತ್ತು ಶಿಡ್ಲಘಟ್ಟದ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ರಾಜುಗೌಡರನ್ನ ವಿನಾಕಾರಣ ಟಾರ್ಗೆಟ್ ಮಾಡಿ ಆತನ ರಾಜಕೀಯ ಭವಿಷ್ಯವನ್ನು ಮುಗಿಸಿದ್ದೀರ.
Pradeep Eshwar
ಪ್ರದೀಪ್ ಈಶ್ವರ್
Updated on: 

ಬೆಂಗಳೂರು: ಚಿಂತಾಮಣಿಯ ದೊಣ್ಣೆ ನಾಯಕನಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಕೋಲಾರದ ಮಾಜಿ ಸಂಸದರು ಮತ್ತು ನಮ್ಮ ರಾಜ್ಯ ಸರ್ಕಾರದ ಇಂದಿನ ಸಚಿವರಾದ ಕೆ.ಎಚ್. ಮುನಿಯಪ್ಪನವರನ್ನ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಟಾರ್ಗೆಟ್ ಮಾಡುತ್ತಾ ಬಂದಿದ್ದೀರಾ ಎಂದು ಹೆಸರು ಹೇಳದೆ ಎಂ.ಸಿ ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಹರಿಹಾಯ್ದಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಪ್ರದೀಪ್ ಈಶ್ವರ್ , ಮುನಿಯಪ್ಪ ಅವರ ಕುಟುಂಬದ ವ್ಯಕ್ತಿಗೆ ಟಿಕೆಟ್ ಕೊಡಬಾರದೆಂದು ಹಠಕ್ಕೆ ಬಿದ್ದು ಟಿಕೆಟ್ ತಪ್ಪಿಸಿದ್ದೀರ ಮತ್ತು ಶಿಡ್ಲಘಟ್ಟದ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ರಾಜುಗೌಡರನ್ನ ವಿನಾಕಾರಣ ಟಾರ್ಗೆಟ್ ಮಾಡಿ ಆತನ ರಾಜಕೀಯ ಭವಿಷ್ಯವನ್ನು ಮುಗಿಸಿದ್ದೀರ. ಈಗ ಚಿಕ್ಕಬಳ್ಳಾಪುರಕ್ಕೆ ನೀವು ಪಾದಾರ್ಪಣೆ ಮಾಡುತ್ತಿದ್ದೀರ ಎಂದು ಕಿಡಿಕಾರಿದ್ದಾರೆ.

ದೊಣ್ಣೆ ನಾಯಕನಿಗೆ ಹೇಳಲು ಬಯಸುತ್ತೇನೆ, ಕೆ.ಎಚ್. ಮುನಿಯಪ್ಪನವರಷ್ಟು ಸೌಮ್ಯ ಸ್ವಭಾವದ ವ್ಯಕ್ತಿ ನಾನಲ್ಲ. ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಬಿಸಾಕಿ ಮಾತುಕತೆಗೆ ಬರುವ ವ್ಯಕ್ತಿತ್ವ ನನ್ನದು. ನಿಮ್ಮ ತಾಕತ್ತು ಎಷ್ಟಿದೆಯೋ ಅಷ್ಟು ಬಿಸಾಕಿ. ನಾನು ಹತ್ತರಷ್ಟು ತಿರುಗಿಸಿ ಕೊಡುವುದು ನನಗೆ ಗೊತ್ತಿದೆ. ದೊಣ್ಣೆ ನಾಯಕನಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಿಮ್ಮ ವಿರುದ್ಧ ಸಮರ ನಿರಂತರ ಎಂದಿದ್ದಾರೆ.

ಚಿಂತಾಮಣಿಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಇನ್ನೊಂದು ಸಾಕ್ಷಿ. ಚಿಂತಾಮಣಿ ತಾಲ್ಲೂಕು ಎಂ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿಯ ಕೊಡ್ಲಿಗಾನಹಳ್ಳಿ ಗ್ರಾಮದಲ್ಲಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯಕ್ಕೆ ಅದೇ ಗ್ರಾಮದ SI ವೆಂಕಟರವಣಪ್ಪ ರವರು ಪ್ರವೇಶ ಮಾಡಿದ್ದಕ್ಕೆ ದೇವಸ್ಥಾನವನ್ನು ಕೆಡಿವಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Pradeep Eshwar
ಪ್ರದೀಪ್ ಈಶ್ವರ್ ಟ್ವೀಟ್ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ಎಂ.ಸಿ ಸುಧಾಕರ್ ಬಣದ ತೀವ್ರ ವಿರೋಧ; ಡಿಕೆಶಿ ಅಂಗಳಕ್ಕೆ ಕಾಂಗ್ರೆಸ್ ಕಿತ್ತಾಟ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com