ಸ್ಟಿಂಗ್ ಆಪರೇಷನ್: ಕೃಪಾ ಆಳ್ವರನ್ನು ಪಕ್ಷದಿಂದ ಉಚ್ಚಾಟಿಸಿದ ಕ್ರಮ ಸಮರ್ಥಿಸಿಕೊಂಡ ರಾಜ್ಯಾಧ್ಯಕ್ಷ ಬಿಕೆ ಹರಿಪ್ರಸಾದ್

ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸುವ ಕಾಂಗ್ರೆಸ್‌ನ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.
Siddaramaiah, kripa alva
ಸಿದ್ದರಾಮಯ್ಯ, ಕೃಪಾ ಆಳ್ವಾ
Updated on: 

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸುವ ಕಾಂಗ್ರೆಸ್‌ನ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ. show-cause notice ಜಾರಿಗೊಳಿಸಿದ ನಂತರವೇ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಪಕ್ಷದ ನಾಯಕರಿಗೆ ಮುಜುಗರ ಉಂಟುಮಾಡುವ ಮತ್ತು ಮಾಧ್ಯಮಗಳಲ್ಲಿ ಪ್ರತಿಕೂಲ ವರದಿಗಳು ಬರುವಂತೆ ಮಾಡಿದ ಕೆಲವು ಕೃತ್ಯಗಳ ಕುರಿತು, ಮೂರು ದಿನಗಳ ಒಳಗಾಗಿ ವಿವರಣೆ ನೀಡುವಂತೆ ಪಕ್ಷವು ಆಳ್ವ ಅವರನ್ನು ಕೇಳಿತ್ತು. ಆದರೆ, ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೆ ನೋಟಿಸ್ ತಲುಪದೆ ವಾಪಸ್ ಬಂದಿದೆ ಎಂದು ತಿಳಿಸಿದರು.

Siddaramaiah, kripa alva
ಸ್ಟಿಂಗ್ ಆಪರೇಷನ್: ಕಾಂಗ್ರೆಸ್ ಮೊದಲ ವಿಕೆಟ್ ಪತನ, ಕೃಪಾ ಆಳ್ವಾ ಪಕ್ಷದಿಂದ ಉಚ್ಛಾಟನೆ

ಸಂಬಂಧಪಟ್ಟ ವ್ಯಕ್ತಿಯಿಂದ ವಿವರಣೆ ಪಡೆಯದೆ ನಾವು ಯಾವುದೇ ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಪ್ರತಿಯೊಬ್ಬರಿಗೂ ತಮ್ಮ ಕಡೆಯ ವಾದವನ್ನು ಮಂಡಿಸಲು ಅವಕಾಶವಿರಬೇಕು. ಅವರು ಪ್ರತಿಕ್ರಿಯಿಸದ ಕಾರಣ, ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲು ನಾವು ನಿರ್ಧರಿಸಿದೆವು. ನೋಟಿಸ್ ಆಳ್ವ ಅವರಿಗೆ ತಲುಪಿಲ್ಲವಾದರೂ ಶಿಸ್ತು ಕ್ರಮಕೈಗೊಳ್ಳುವುದನ್ನು ಬಿಟ್ಟು ಪಕ್ಷಕ್ಕೆ ಬೇರೆ ದಾರಿಯಿರಲಿಲ್ಲ ಎಂದರು.

ಆಳ್ವ ಅವರ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಪಕ್ಷದಿಂದ ಯಾವುದೇ ತನಿಖೆ ನಡೆಸುತ್ತಿಲ್ಲ. ಆ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಡಲಾಗಿದೆ. ಕೃಪಾ ಆಳ್ವ ವಿರುದ್ಧ ನೇರ ಸಾಕ್ಷ್ಯಗಳಿವೆ. ಅದಕ್ಕಾಗಿಯೇ ನಾವು ಅವರನ್ನು ಉಚ್ಚಾಟಿಸಿದ್ದೇವೆ ಎಂದರು. ಆಳ್ವ ವಿದೇಶಕ್ಕೆ ಪ್ರಯಾಣಿಸಿದ್ದಾರೆ ಎಂಬ ವಿಚಾರವನ್ನು ಗುಪ್ತಚರ ಇಲಾಖೆ (Intelligence Bureau) ಮತ್ತು ಸಿಬಿಐ (CBI) ಪರಿಶೀಲಿಸುತ್ತದೆ ಎಂದು ಹರಿಪ್ರಸಾದ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X