ಕುಗ್ಗುತ್ತಿರುವ ಸಿದ್ದರಾಮಯ್ಯ ವರ್ಚಸ್ಸು: ಗಾಯತ್ರಿ ಶಾಂತೇಗೌಡಗೆ ಸಚಿವ ಸ್ಥಾನ ನೀಡದಂತೆ ಮಾಜಿ ಸಿಎಂ ಅಡ್ಡಗಾಲು; ಯತೀಂದ್ರ ರಾಜಿನಾಮೆ ಬೆದರಿಕೆ !

2022 ರ ಎಂಎಲ್‌ಸಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಎಂದು ತಪ್ಪಾಗಿ ಘೋಷಿಸಿದ ನಂತರ, ಅವರು ಸುಮಾರು ನಾಲ್ಕು ವರ್ಷ ವ್ಯರ್ಥವಾಗಿದೆ. ಸ್ಥಾನವನ್ನು ಮರಳಿ ಪಡೆಯಲು ಭಾರಿ ಕಾನೂನು ವೆಚ್ಚಗಳನ್ನು ಭರಿಸಿದರು, ಅ
 Gayatri Shantegowda
ಗಾಯತ್ರಿ ಶಾಂತೇಗೌಡ
Updated on

ಬೆಂಗಳೂರು: ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಅವರು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆಯೇ ಎಂಬ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ. ಜೊತೆಗೆ ಈ ಸಂಬಂಧ ಪ್ರತಿಕ್ರಿಯಿಸಿಲು ಅವರು ನಿರಾಕರಿಸಿದ್ದಾರೆ.

ಆದರೂ ಅವರ ಆಪ್ತರ ಪ್ರಕಾರ ಗಾಯತ್ರಿ ಅವರ ಮೌನವು ಯಾವುದೇ ಹೇಳಿಕೆಗಿಂತ ಜೋರಾಗಿ ಮಾತನಾಡುತ್ತದೆ ಎಂದು ಹೇಳಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಲು ವಿಳಂಬ ಮಾಡುತ್ತಿರುವುದು ಆಕಸ್ಮಿಕವಲ್ಲ, ಕಾಂಗ್ರೆಸ್‌ನಲ್ಲಿರುವ ಒಬ್ಬ ಪ್ರಭಾವಿ ನಾಯಕ ಅವರಿಗೆ ಸಚಿವ ಸ್ಥಾನ ನೀಡಲು ಅಡ್ಡಿಯಾಗಿದ್ದಾರೆ. ಅದು ಬೇರೆ ಯಾರೂ ಅಲ್ಲ. ಹಿರಿಯ ಅಹಿಂದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದ್ದಾರೆ.

ಒಂದು ವೇಳೆ ಗಾಯತ್ರಿ ಶಾಂತೇಗೌಡ ಅವರಿಗೆ ಮಂತ್ರಿ ಸ್ಥಾನ ನೀಡಿದರೇ ಯತೀಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಿಸುತ್ತೇನೆ ಎಂದು ಸಿದ್ದಾರಮಯ್ಯ ಬೆದರಿಕೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಯಾವ ತಪ್ಪಿಗಾಗಿ?" ಎಂದು ಗಾಯತ್ರಿ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿದ್ದು, ಮಾಜಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆಗಳು ನಿರಂತರವಾಗಿ ಕೇಳಿ ಬರುತ್ತಿವೆ.

2022 ರ ಎಂಎಲ್‌ಸಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಎಂದು ತಪ್ಪಾಗಿ ಘೋಷಿಸಿದ ನಂತರ, ಅವರು ಸುಮಾರು ನಾಲ್ಕು ವರ್ಷ ವ್ಯರ್ಥವಾಗಿದೆ. ಸ್ಥಾನವನ್ನು ಮರಳಿ ಪಡೆಯಲು ಭಾರಿ ಕಾನೂನು ವೆಚ್ಚಗಳನ್ನು ಭರಿಸಿದರು, ಅದನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅವರಿಗೆ ಮರುಸ್ಥಾಪಿಸಿತು. ಅವರು ಈಗಾಗಲೇ ಭಾರಿ ಬೆಲೆ ತೆತ್ತಿದ್ದಾರೆ ಎಂದು ಅವರ ಬೆಂಬಲಿಗರು ವಾದಿಸಿದರು.

 Gayatri Shantegowda
ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ: ಕಾಂಗ್ರೆಸ್ ಹೈಕಮಾಂಡ್‌ಗೆ ಸಂದೇಶ!

ಅವರ ಆರು ವರ್ಷಗಳ ಅವಧಿಯಲ್ಲಿ, ಕೇವಲ ಒಂದು ವರ್ಷ ಮತ್ತು ನಾಲ್ಕು ತಿಂಗಳುಗಳು ಮಾತ್ರ ಉಳಿದಿವೆ. "ಈಗ ಸಿದ್ದರಾಮಯ್ಯ ಅವರ ಹಕ್ಕನ್ನು ಕಸಿದುಕೊಳ್ಳಲು ಬಂದಿದ್ದಾರೆ ಎಂದು ಬೆಂಬಲಿಗರೊಬ್ಬರು ನೋವು ತೋಡಿಕೊಂಡಿದ್ದಾರೆ.

ಆಕೆ ಸಚಿವ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವುದನ್ನು ತಮಗೆ ಏಕೆ ತಿಳಿಸಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಅನ್ಯಾಯದ ಇತಿಹಾಸವನ್ನು ಮರೆತಿದ್ದಾರೆ, ಎಚ್ ಡಿ ದೇವೇಗೌಡರು ಅವರನ್ನು ಜನತಾದಳದಿಂದ ಹೇಗೆ ಹೊರಹಾಕಿದರು ಮತ್ತು ಆ ಅವಧಿಯಲ್ಲಿ ಕುರುಬ ಸಮುದಾಯವು ಅವರ ಬೆಂಬಲಕ್ಕೆ ನಿಂತು ಎರಡು ಬಾರಿ ಮುಖ್ಯಮಂತ್ರಿಯಾಗಲು ಸಹಾಯ ಮಾಡಿತು ಎಂದು ಸಮುದಾಯದ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.

"ಕುರುಬರು ಮತ್ತು ಹಿಂದುಳಿದ ವರ್ಗಗಳು ಅವರ ಬೆಂಬಲಕ್ಕೆ ನಿಲ್ಲದಿದ್ದರೆ, ಅವರು ಎಲ್ಲಿರುತ್ತಿದ್ದರು?" ಎಂದು ಸಮುದಾಯದ ಮುಖಂಡರು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಮಗ ಯತೀಂದ್ರ ಅವರನ್ನು ಸಚಿವರನ್ನಾಗಿ ಮಾಡಿ ತಮ್ಮ ಕಟ್ಟಾ ಕುರುಬ ಬೆಂಬಲಿಗ ಬೈರತಿ ಸುರೇಶ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. "ಆ ಎರಡೂ ನಿರ್ಧಾರಗಳು ಸರಿ, ಆದರೆ ಈಗ ಅವರು ಈ ಮಹಿಳೆಯನ್ನು ತಡೆಯುತ್ತಿದ್ದಾರೆ. ಅದು ನ್ಯಾಯವೇ?" ಎಂಬುದು ಕುರುಬ ಮುಖಂಡರ ವಾದವಾಗಿದೆ.

 Gayatri Shantegowda
MLC ಯಾಗಿ ಗಾಯತ್ರಿ ಶಾಂತೇಗೌಡ ಇಂದು ಪ್ರಮಾಣವಚನ: ಸಂಪುಟಕ್ಕೆ ಸೇರ್ಪಡೆ ಕುರಿತು ನಿರ್ಧಾರ ಎಂದು?

ಗಾಯತ್ರಿ ಶಾಂತೇಗೌಡರು ಹಲವು ಬಾರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಆದರೆ ಅವರಿಗೆ ಭೇಟಿಗೆ ಅವಕಾಶ ನೀಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರು ಶಾಸಕರಾದ ಬಸವರಾಜ ಶಿವಣ್ಣನವರ್ ಅಥವಾ ರಾಘವೇಂದ್ರ ಹಿಟ್ನಾಳ್ ಅವರನ್ನು ಈ ಹುದ್ದೆ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಇದು ಕಾರ್ಯತಂತ್ರದ ಲೆಕ್ಕಾಚಾರ, ಸಮತೋಲನ ಅಥವಾ ವೈಯಕ್ತಿಕವಾದ ಏನಾದರೂ ಕಾರಣವೇ ಎಂಬುದು ಪಕ್ಷದೊಳಗೆ ಊಹಾಪೋಹದ ವಿಷಯವಾಗಿದೆ.

ಹಿಂದುಳಿದ ವರ್ಗಗಳ ಸಮುದಾಯಗಳು ಶಾಂತೇಗೌಡರಿಗೆ ಬೆಂಬಲವನ್ನು ಕ್ರೋಢೀಕರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಕುರುಬ ಕಾಗಿನೆಲೆ ಸ್ವಾಮೀಜಿ ಮತ್ತು ಇತರ ಸಮುದಾಯದ ಮುಖಂಡರು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ, ಆದರೆ ಅವರ ಪ್ರಯತ್ನಗಳು ಇಲ್ಲಿಯವರೆಗೆ ಯಾವುದೇ ಫಲಿತಾಂಶವನ್ನು ನೀಡಿಲ್ಲ.

ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಕೂಡ "ಈ ವಿಷಯದ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ" ಎಂದು ತಿಳಿಸಿದ್ದಾರೆ.

ಆದಾಗ್ಯೂ, ಮಹಿಳೆಯ ಸೇರ್ಪಡೆಯನ್ನು ತಡೆಯುವ ಮೂಲಕ, ಸಿದ್ದರಾಮಯ್ಯ ಅವರು ಸಮುದಾಯದೊಳಗಿನ "ನಿಧಾನವಾಗಿ ತಮ್ಮ ಅಭಿಮಾನವನ್ನು ಕಳೆದುಕೊಳ್ಳುತ್ತಿದ್ದಾರೆ" ಎಂದು ಸಮುದಾಯದ ಮುಖಂಡರು ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com