ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!

ಮಾಜಿ ಸಂಸದ ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಂಹ, ಮಾಧ್ಯಮ ವಿರುದ್ಧವೇ ಗರಂ ಆಗಿದ್ದಾರೆ.
Pradeep Eshwar, Pratap Simha
ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ
Updated on

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಂಹ, ಮಾಧ್ಯಮ ವಿರುದ್ಧವೇ ಗರಂ ಆದರು.

ಮಾಧ್ಯಮದವರು ದಿನಾ ಅವನ (ಪ್ರದೀಪ್ ಈಶ್ವರ್) ಹತ್ತಿರ ಯಾಕ್ ಮೈಕ್ ಹಿಡಿದುಕೊಂಡು ಹೋಗ್ತೀರಾ. ಅವನು ನನ್ನ ವಿರುದ್ಧ ಈತರಹದ ಪದ ಪ್ರಯೋಗ ಮಾಡಬಾರದು ಅಂತ ಕೋರ್ಟ್ ಹೇಳಿದೆ. ಆದರೂ ಅವನನ್ನು ಹಿಡಿತೀರಿ. ಅವನೊಬ್ಬ ಹರಿಶ್ಚಂದ್ರ ಗೌಡ ಅಂತ ಇದ್ದ. ಈಗ ಇವನೊಬ್ಬ ಬಂದಿದ್ದಾನೆ. ಮಾಧ್ಯಮಗಳಲ್ಲಿ ನನ್ನ ಕಳಕಳಿಯ ವಿನಂತಿ ಅಂದರೆ, ನನ್ನ ಈ ಹೇಳಿಕೆಯನ್ನು ನೀವು ಮಾಧ್ಯಮಗಳಲ್ಲಿ ಪ್ರಕಟ ಮಾಡಬೇಡಿ ಎಂದು ಪ್ರತಾಪ್ ಸಿಂಹ ಹೇಳಿದರು.

ಸಮಾಜದಲ್ಲಿ ಯಾರಾದರೂ ವಿಚಾರವಂತರು, ಸಜ್ಜನರ ಬಗ್ಗೆ ಪ್ರಶ್ನೆ ಕೇಳಿ, ಆ ಬಗ್ಗೆ ನಾನು ಉತ್ತರ ಕೊಡ್ತೀನಿ. ಟೀಕೆ, ತರ್ಕ ಇವೆಲ್ಲಾ ಇರುತ್ತೇ. ನೀವ್ಯಾರೋ ಮೆಂಟರ್ ಗಿರಾಕಿ ಬಗ್ಗೆ ಕೇಳ್ತೀರಿ. ಈ ಬಗ್ಗೆ ನನಗೆ ಮೊದಲೇ ಗೊತ್ತಿದ್ದರೆ ಮಾಜಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋಗಿದ್ರು. ಅದರ ಬದಲಿಗೆ ಹುಚ್ಚಾಸ್ಪತ್ರೆಯನ್ನು ತೆಗೆದುಕೊಂಡು ಹೋಗಿ ಅಂತ ಹೇಳ್ತಿದ್ದೆ ಎಂದು ಸಿಂಹ ಹೇಳಿದರು.

Pradeep Eshwar, Pratap Simha
'ಪ್ರತಾಪ್ ಸಿಂಹ ಮುಟ್ಟಾಳ, ನಾಲಾಯಕ್, ನಾಮರ್ದ; ದೇಶದ್ರೋಹಿಗಳಿಗೆ ಪಾಸ್ ಕೊಟ್ಟ ಕಬರ್ದಾರ್; ದೇಶ ಕಟ್ಟಿದ್ದು ದಲಿತರು, ಅವರು ದೇವರಷ್ಟೇ ಶ್ರೇಷ್ಠ'

ಪ್ರದೀಪ್ ಈಶ್ವರ್ ಹೇಳಿದ್ದೇನು?

ನೀನು (ಪ್ರತಾಪ್ ಸಿಂಹ) ಯಾವನೋ ದಲಿತರ ನೀಲಿ ಶಾಲಿನ ಬಗ್ಗೆ ಮಾತಾಡೋಕೆ. ನೀನು ಕೇಸರಿ ಶಾಲಿನ ಬಗ್ಗೆ ಮಾತಾಡಿಕೋ. ನೀನು ಒಂದು ಕೇಸರಿ ಸಾಲು ಹಾಕಿಕೊಂಡು ಬಾ, ನಾವು 1 ಸಾವಿರ ನೀಲಿ ಶಾಲು ಹಾಕಿಕೊಂಡು ಬರುತ್ತೇವೆ. ಒಬ್ಬ ಸರ್ಕಲ್ ಇನ್ಸ್ ಪೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತಾಡ್ತೀಯಾ. ಮಸೀದಿ ಮುಂದೆ ನಿಂತು ನಿನ್ನ ಬಾಯಿ ತೆವಲಿಗೆ ಮಾತನಾಡ್ತಿಯಾ, ಇಸ್ಲಾಂ ಧರ್ಮದವರು ನಮ್ಮ ದೇಶ ಎಂದು ಅಡ್ಜಸ್ಟ್ ಮಾಡಿಕೊಂಡು ಹೋಗ್ತಿದ್ದಾರೆ. ದೇಶದ್ರೋಹಿಗಳಿಗೆ ಪಾಸ್ ಕೊಟ್ಟ ಮುಟ್ಟಾಳ, ನೀನು ಕಬರ್ದಾರ್ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com