

ಮಂಡ್ಯ: ರಾಜ್ಯದ ಮುಖ್ಯಮಂತ್ರಿಗಳಿಗೆ ತಾಯಿ ಹೃದಯ ಇಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ರಾಜ್ಯದ ಜನರನ್ನ ಇವತ್ತು ಆರ್ಥಿಕ ದಿವಾಳಿಯ ಅಂಚಿನಲ್ಲಿ ನಿಲ್ಲಿಸಿದ್ದಾರೆ. ರೈತರ ಬದುಕು ಬೀದಿಗೆ ಬಿದ್ದಿದೆ, ಕಣ್ಣಲ್ಲಿ ನೀರು ಹಾಕ್ತಿದ್ದಾರೆ ಎಂದು ಹೇಳಿದರು.
ರೈತರ ಪರವಾಗಿ ಮಳವಳ್ಳಿ ಭಾಗದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ರೈತರು ಆರ್ಥಿಕ ಹಾಗೂ ಕೃಷಿ ಚಟುವಟಿಕೆಯಿಂದ ತತ್ತರಿಸಿದ್ದಾರೆ. ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ಘೋಷಣೆ ಮಾಡಬೇಕಿತ್ತು.
ಮಳೆ ಕೈ ಕೊಟ್ಟಿದೆ, KRS ನಲ್ಲಿ 70 ಅಡಿ ಇದ್ದಾಗ ನೀರು ಬಿಟ್ಟ ಇತಿಹಾಸ ಇದೆ. ಈ ಸರ್ಕಾರ 90 ಅಡಿ ನೀರಿದ್ರು ಬಿಟ್ಟಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಬೆಳೆ ಹಾಕಬೇಡಿ ಅಂತಾರೆ. ನಾಲೆ ದುರಸ್ತಿ ಕಾರ್ಯ ಇವಾಗ ಮಾಡ್ತಾರೆ. 35 ಎಕರೆ ಕಬ್ಬು ಬೆಳೆಯುವ ರೈತರ ಕಬ್ಬು ಒಣಗಿದೆ. ಒಂದು ರೈತ ಕುಟುಂಬಕ್ಕೆ 2500 ಪರಿಹಾರ ಅಂತಾರೆ ಮುಖ್ಯಮಂತ್ರಿ ಡಿಕೆಶಿ... ಒಂದು ಬ್ಯಾಗ್ ಯೂರಿಯ ಬರಲ್ಲಾ ಕಣ್ರೀ ಎಂದಿದ್ದಾರೆ.
ನಾವು 37 ಸೀಟ್ ಇಟ್ಕೊಂಡು ಸಾಲಮನ್ನಾ ಮಾಡಿದ್ವಿ. ನಿನಗೆ 136 ಸೀಟ್ ಕೊಟ್ಟಿದ್ದಾರಲ್ಲ ಯಾರು ನಿಮ್ಮನ್ನ ತಡೆದಿದ್ದಾರೆ ರೈತರ ಸಾಲ ಮನ್ನಾ ಮಾಡಲಿಕ್ಕೆ ಎಂದು ಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಗಾಂಧಿ ಕುಟುಂಬದ ಕುಡಿಯ ಕನಸಂತೆ ರೈತರ ಸಾಲಮನ್ನಾ ಮಾಡುತ್ತಾರೆ ಎಂದು ಲೇಡಿ ಮಾಡಿದ್ದಾರೆ.
ಮಾತು ಎತ್ತಿದ್ರೆ ಸಾಕು ಸಿಎಂ ರೈತರ ಬದುಕು ಕಟ್ಟುತ್ತಿನಿ ಅಂತಾರೆ. ರೈತರ ಬದುಕು ಬೀದಿಗೆ ಬಿದ್ದಿದೆ, ಕಣ್ಣಲ್ಲಿ ನೀರು ಹಾಕ್ತಿದ್ದಾರೆ. 97 ರೈತರು ಮಂಡ್ಯದಲ್ಲಿ ಆತ್ಮಹತ್ಯೆ ಆಗಿದೆ. ರೈತರ ಬದುಕು ಕಟ್ಟಿಕೊಡುವ ಕೆಲಸ ಮಾಡ್ತಿಲ್ಲ, 2500 ರೂ ಯಾವುದಕ್ಕೆ ಸಾಕಾಗುತ್ತೆ. ಕನಿಷ್ಠ 25 ಸಾವಿರನಾದ್ರು ಕೊಡಬೇಕು. ರಾಜ್ಯದ ಮುಖ್ಯಮಂತ್ರಿಗಳಿಗೆ ತಾಯಿ ಹೃದಯ ಇಲ್ಲ ಎಂದು ಕಿಡಿಕಾರಿದರು.
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ. ತಮಿಳುನಾಡಿನ ಸಿಎಂ ಜೊತೆ ಫೋಟೊ ವಿಡಿಯೋ ಮಾಡಿಸ್ಕೊಳ್ಳದ್ರಲ್ಲೆ ಸಿಎಂ ಕಾಲ ಕಳೆಯುತ್ತಿದ್ದಾರೆ. ಕಾವೇರಿ ಉಳಿಸುವ ಕೆಲಸ ಮಾಡ್ತಿಲ್ಲ, ಬರಿ ಮೀಟಿಂಗ್ ಮಾಡಿ ಫೋಟೊ, ರೀಲ್ಸ್ ಮಾಡೋ ಅವಶ್ಯಕತೆ ಇಲ್ಲ, ಕಳೆದ ಅಧಿವೇಶನದಲ್ಲಿ ವಾಲ್ಮೀಕಿ ಹಗರಣದ ಲೂಟಿ ಚರ್ಚೆ ಆಯ್ತು. ಅಲ್ಲಿ ಸಮಯ ವ್ಯರ್ಥವಾಯಿತು, ಇವಾಗ ಸ್ಪೆಷಲ್ ಅಧಿವೇಶನ ಕರೆದರು ಏನಾಯ್ತು?