"ಕನಸುಗಳಿಗೆ ರೆಕ್ಕೆ ಕಟ್ಟುವ ಆತ್ಮವಿಶ್ವಾಸ"

ಸೋಲು ಅಂತ್ಯವಲ್ಲ, ಹೊಸ ಆರಂಭ; ಆತ್ಮವಿಶ್ವಾಸದೊಂದಿಗೆ ಅಡೆತಡೆಗಳನ್ನು ಮೆಟ್ಟಿಲಾಗಿಸಿಕೊಂಡಾಗಲೇ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುವ ಸತ್ಯ
"ಕನಸುಗಳಿಗೆ ರೆಕ್ಕೆ ಕಟ್ಟುವ ಆತ್ಮವಿಶ್ವಾಸ"
Stuti / Pexels.com
Updated on

ಬರಹ: ಅಂಬಿಕಾ ಕುಮಾರಸ್ವಾಮಿ, ಬಳ್ಳಾರಿ

ಆತ್ಮವಿಶ್ವಾಸ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಜೀವನದ ಅತ್ಯಂತ ದೊಡ್ಡ ಶಕ್ತಿ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಕನಸುಗಳನ್ನು ಕಾಣುತ್ತಾನೆ, ಆದರೆ ಆ ಕನಸುಗಳು ನನಸಾಗಬೇಕಾದರೆ ಕೇವಲ ಅಸೆ ಇದ್ದರೆ ಸಾಲದು ಅದಕ್ಕೆ ಆತ್ಮವಿಶ್ವಾಸ ಎಂಬ ರೆಕ್ಕೆಗಳು ಬೇಕು.

ಕನಸು ಮತ್ತು ಆತ್ಮವಿಶ್ವಾಸ ಎಂಬುವುದು ಒಂದೇ ನಾಣ್ಯದ ಎರಡು ಮುಖಗಳ ಹಾಗೇ ಪರಸ್ಪರ ಸಂಬಂಧವನ್ನು ಹೊಂದಿರುತ್ತವೆ. ಕನಸುಗಳು ನಮ್ಮ ಗುರಿಯನ್ನು ತೋರಿಸಿದರೆ, ಆತ್ಮವಿಶ್ವಾಸವು ಆ ಗುರಿಯನ್ನು ತಲುಪಲು ಬೇಕಾದ ದಾರಿಯನ್ನು ಸೃಷ್ಟಿಸುತ್ತದೆ.

ಆತ್ಮವಿಶ್ವಾಸವಿಲ್ಲದೆ ಕನಸುಗಳು ಕೇವಲ ಹಗಲುಗನಸಾಗಿ ಉಳಿಯುತವೆ. " ನನ್ನಿಂದ ಇದು ಸಾಧ್ಯ " ಎನ್ನುವ ದೃಢ ನಂಬಿಕೆಯೇ ಆತ್ಮವಿಶ್ವಾಸ ಎನ್ನಬಹುದು. ಆತ್ಮವಿಶ್ವಾಸವು ನಮ್ಮ ಕನಸುಗಳಿಗೆ ರೆಕ್ಕೆಗಳನ್ನು ಕಟ್ಟಿ, ಆಕಾಶದಲ್ಲಿ ಎತ್ತರಕ್ಕೆ ಹಾರುವಂತೆ ಮಾಡುತ್ತವೆ.

ಆತ್ಮವಿಶ್ವಾಸದ ಜೊತೆ ಕನಸಿನ ಹಾದಿಯಲ್ಲಿ ಸಾಗುವಾಗ ಸೋಲುಗಳು, ಅಪಹಾಸ್ಯಗಳು ಎದುರಾಗುವುದು ಸಹಜ. ಆದರೆ ಆತ್ಮವಿಶ್ವಾಸ ಜೊತೆಗೆ ಸಾಗುವ ವ್ಯಕ್ತಿಯು ಸೋಲಿಗೆ ಹೆದರುವುದಿಲ್ಲ ಹಾಗೇ ಹಿಂಜರಿಯುವುದು ಇಲ್ಲ ಬದಲಾಗಿ, ಸೋಲನ್ನು ಗೆಲುವಿನ ಮೊದಲ ಮೆಟ್ಟಿಲನ್ನಾಗಿ ಮಾಡಿಕೊಳ್ಳುತ್ತಾನೆ.

ಇತಿಹಾಸದಲ್ಲಿ ಹಲವಾರು ಮಹಾನ್ ವ್ಯಕ್ತಿಗಳು ಯಾವುದು ಸುಳಿವನ್ನು ಕೊಡದೆ ಎಷ್ಟು ಸಾಧನೆಯನ್ನು ಮಾಡಿರುವುದು ಕಾಣಬಹುದು. ಇದರಿಂದ ಎಲ್ಲರಿಗೂ ಅರ್ಥವಾಗುವ ವಿಷಯವೇನೆಂದರೆ ಸಾಧನೆ ಎಂಬುದು ನಾವು ಮಾಡುವ ಕೆಲಸದಲ್ಲಿ ಇರಬೇಕೇ ವಿನಃ ನಾವು ಆಡುವ ಮಾತಿನಲ್ಲಿ ಅಲ್ಲ.

ಗೆಲುವನ್ನು ಸಾದಿಸಲು ಕೆಲವೊಬ್ಬರು ಸಾವಿರಾರು ಬಾರಿ ಸೋಲನ್ನು ಕಂಡರೂ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಮುಂದೆ ನಡೆದರೆ ಮುಂದೊಂದು ದಿನ ಆ ಆತ್ಮವಿಶ್ವಾಸವೇ ಅವರನ್ನು ಜಗತ್ತಿಗೆ ಪರಿಚಯವಾಗುವ ಹಾಗೇ ಮಾಡೇ ಮಾಡುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಕೇವಲ ಓದಿನಲ್ಲಿ ಮಾತ್ರವಲ್ಲದೆ ಸ್ಪರ್ಧೆ, ಭಾಷಣ, ಲೇಖನ ಹೀಗೆ ಹಲವಾರು ಸವಾಲುಗಳನ್ನು ನಿಭಾಯಿಸಬೇಕೆಂದರೆ ಅಲ್ಲಿ ಆತ್ಮವಿಶ್ವಾಸ ಎಂಬುದು ಬಹಳ ಪ್ರಮುಖವಾಗಿರುತ್ತದೆ.

ಎಲ್ಲರ ಕನಸುಗಳು ದೊಡ್ಡದಾಗಿರಲಿ, ಆದರೆ ಅವುಗಳನ್ನು ನನಸಾಗಿಸಲು ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಜೊತೆಯಾಗಿರಬೇಕು. ಈ ಸಂದರ್ಭದಲ್ಲಿ ಇನ್ನೊಂದು ಮಾತನ್ನು ಹೇಳಬಹುದು ಅದು ಏನೆಂದರೆ "ಸೋಲು ಎಂದರೆ ಅಂತ್ಯವಲ್ಲ; ಅದು ಮತ್ತೊಂದು ಹೊಸ ಪ್ರಯತ್ನದ ಆರಂಭ" ಎಂದು ಅರ್ಥ ಮಾಡಿಕೊಳ್ಳಬೇಕು.

ಮೊದಲು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಹೇಗೆಂದರೆ ದಯವಿಟ್ಟು ಕ್ಷಮಿಸಿ ಇದನ್ನು ನಾನು ಮೊದಲೇ ಹೇಳಬೇಕಿತ್ತು ಆತ್ಮವಿಶ್ವಾಸವನ್ನು ಬೆಳಸಿಕೊಳ್ಳಲು ಮೊದಲು ನಮ್ಮನ್ನು ನಾವು ನಂಬಬೇಕು. ಹಾಗೆಯೇ ನಮ್ಮ ಸಾಮರ್ಥ್ಯದ ಮೇಲೆ ನಮಗೆ ಯಾವುದೇ ಸಂಶಯವಿಲ್ಲದೆ ನಮ್ಮ ಮೇಲೆ ನಂಬಿಕೆ ಇಟ್ಟು ಮುಂದೆ ನಡೆಯಬೇಕು ಸ್ವಯಂ ನಂಬಿಕೆ ಎಂಬುದು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದಕ್ಕೆ ಅತೀ ಮುಖ್ಯ.

ಕೆಲವೊಂದು ಬಾರಿ ಆತ್ಮವಿಶ್ವಾಸದ ಜೊತೆ ಸಾಗುವಾಗ ಇದು ನನ್ನಿಂದ ಸಾಧ್ಯವಾಗುವುದಿಲ್ಲ ಎನ್ನುವ ಯೋಚನೆ ಬರಬಹುದು ಆದರೆ ಆ ಯೋಚನೆಯನ್ನು ಬಿಟ್ಟು" ನಾನು ಪ್ರಯತ್ನಿಸುತ್ತೇನೆ" ಎಂಬ ಮನೋಭಾವ ಬೆಳೆಸಿಕೊಂಡರೆ ಯಾವುದೇ ಕಷ್ಟವಾದ ಕೆಲಸಗಳು ಕೂಡ ಸುಲಭವಾಗುತ್ತವೆ

ಕನಸುಗಳು ಸುಂದರ ಆಕಾಶವಿದ್ದಂತೆ ಆ ಆಕಾಶದಲ್ಲಿ ಮುಕ್ತವಾಗಿ ಹಾರಾಡಲು ಆತ್ಮವಿಶ್ವಾಸವೆಂಬ ರೆಕ್ಕೆಗಳು ಅತ್ಯಗತ್ಯ. ನಮ್ಮ ಕನಸು ಎಷ್ಟೇ ದೊಡ್ಡದಿದ್ದರೂ, ನಮ್ಮ ಆತ್ಮವಿಶ್ವಾಸ ಅದಕ್ಕಿಂತ ದೊಡ್ಡದಾಗಿರಲಿ.

ಕೊನೆಯಲ್ಲಿ ಹೇಳಬೇಕಾದರೆ ಕನಸು ಕಾಣುವುದು ಮೊದಲ ಹೆಜ್ಜೆಯಾದರೆ ಆತ್ಮವಿಶ್ವಾಸವೇ ಆ ಕನಸುಗಳಿಗೆ ಶಕ್ತಿ.

ಜೀವನದಲ್ಲಿ ಎಷ್ಟೇ ಅಡೆತಡೆಗಳು ಬಂದರೂ ನಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳದೆ ದೃಢವಾಗಿ ಮುನ್ನಡೆದರೆ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕನಸುಗಳಿಗೆ ಆತ್ಮವಿಶ್ವಾಸದ ರೆಕ್ಕೆಗಳನ್ನು ಕಟ್ಟಿಕೊಂಡು ಧೈರ್ಯದಿಂದ ಹಾರಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com