ಪ್ರೊ. ಸತೀಶ್. ಎಲ್.ಎ
ಪ್ರೊ. ಸತೀಶ್ ಎಲ್. ಎ. ಅವರು ಭೌತಶಾಸ್ತ್ರ ಕ್ಷೇತ್ರದ ಅಧ್ಯಾಪಕ, ಸಂಶೋಧಕ ಹಾಗೂ ವಿಜ್ಞಾನ ಸಂವಹನಕಾರರಾಗಿದ್ದಾರೆ. ಬೋಧನೆ, ಸಂಶೋಧನೆ ಮತ್ತು ವಿಜ್ಞಾನ ಜನಪ್ರಿಯೀಕರಣ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಅವರು, ಪ್ರಸ್ತುತ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನೃಪತುಂಗ ವಿಶ್ವವಿದ್ಯಾಲಯ (ಪೂರ್ವನಾಮ ಸರ್ಕಾರಿ ವಿಜ್ಞಾನ ಕಾಲೇಜು) ದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ನಿಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಅವರು, ಪುಸ್ತಕಗಳು ಮತ್ತು ಪುಸ್ತಕ ಅಧ್ಯಾಯಗಳ ಮೂಲಕವೂ ವೈಜ್ಞಾನಿಕ ಜ್ಞಾನಕ್ಕೆ ಕೊಡುಗೆ ನೀಡಿದ್ದಾರೆ. ಸಂಕೀರ್ಣ ವೈಜ್ಞಾನಿಕ ಪರಿಕಲ್ಪನೆಗಳನ್ನು ಸರಳ ಹಾಗೂ ಜನಸ್ನೇಹಿ ಭಾಷೆಯಲ್ಲಿ ಕನ್ನಡದಲ್ಲಿ ನಿರೂಪಿಸುವ ಮೂಲಕ ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಇ-ಮೇಲ್: lasgayit@gmail.com