ಸ್ಫೋಟವಾಗಲಿದೆ ರಷ್ಯಾ ಬಾಹ್ಯಾಕಾಶ ನೌಕೆ..!

ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡಿದ್ದ ರಷ್ಯಾ ನಿರ್ಮಿತ ಬಾಹ್ಯಾಕಾಶ ನೌಕೆ ಶೀಘ್ರದಲ್ಲಿಯೇ ಸ್ಫೋಟಗೊಳ್ಳಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ...
ರಷ್ಯಾದ ಪ್ರೋಗ್ರೆಸ್ ಎಂ-27ಎಂ ಬಾಹ್ಯಾಕಾಶ ನೌಕೆ (ಸಂಗ್ರಹ ಚಿತ್ರ)
ರಷ್ಯಾದ ಪ್ರೋಗ್ರೆಸ್ ಎಂ-27ಎಂ ಬಾಹ್ಯಾಕಾಶ ನೌಕೆ (ಸಂಗ್ರಹ ಚಿತ್ರ)

ಮಾಸ್ಕೋ: ನಿಯಂತ್ರಣ ಕೇಂದ್ರದ ಸಂಪರ್ಕ ಕಡಿದುಕೊಂಡಿದ್ದ ರಷ್ಯಾ ನಿರ್ಮಿತ ಬಾಹ್ಯಾಕಾಶ ನೌಕೆ ಶೀಘ್ರದಲ್ಲಿಯೇ ಸ್ಫೋಟಗೊಳ್ಳಲ್ಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ರಷ್ಯಾದ ಪ್ರೋಗ್ರೆಸ್ ಎಂ-27ಎಂ ಬಾಹ್ಯಾಕಾಶ ನೌಕೆ ಇನ್ನೆರಡು ವಾರದಲ್ಲಿ ಭೂವಾತಾವರಣವನ್ನು ಪ್ರವೇಶ ಮಾಡಿ ಸ್ಫೋಟಗೊಳ್ಳಲಿದೆ. ಇತ್ತೀಚೆಗಷ್ಟೇ ಉಡಾವಣೆಯಾಗಿದ್ದ ಈ ನೌಕೆ,  ಭೂವಾತಾವರಣ ದಾಟಿ ತಿರುಗುತಿತ್ತು. ಬಳಿಕ ನೌಕೆ ನಾಪತ್ತೆಯಾಗಿತ್ತು. ಇದೀಗ ಮತ್ತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಿಯಂತ್ರಣವ್ಯವಸ್ಥೆ ಈ ನೌಕೆಯನ್ನು ಕಂಡುಹಿಡಿದಿದ್ದು, ಇನ್ನೆರಡು ವಾರದಲ್ಲಿ ಭೂವಾತಾವರಣ ಪ್ರವೇಶಿಸುವ ಕುರಿತು ಮಾಹಿತಿ ನೀಡಿದೆ.

ಭೂಮಿಯ ವಾತಾವರಣವನ್ನು ಪ್ರವೇಶ ಮಾಡುತ್ತಿದ್ದಂತೆಯೇ ಅದರ ಒತ್ತಡಕ್ಕೆ ಸಿಲುಕಿ ನೌಕೆ ಆಗಸದಲ್ಲಿಯೇ ಸ್ಫೋಟವಾಗಲಿದೆ. ರಷ್ಯಾ ವಿಜ್ಞಾನಿಗಳ ಪ್ರಕಾರ ಈ ನೌಕೆಯು ಬಹುಶಃ ಮೇ5 ರಿಂದ ಮೇ7ರ ಅವಧಿಯಲ್ಲಿ ಭೂವಾತಾವರಣವನ್ನು ಪ್ರವೇಶ ಮಾಡುವ ಸಾಧ್ಯತೆ ಇದೆ. ಈಗಾಗಲೇ ನೌಕೆಯು ಅವರೋಹಣ ಮಾದರಿಯಲ್ಲಿ ತಿರುಗಲು ಆರಂಭಿಸಿದ್ದು, ಬೇರೆಡೆ ಹೋಗಲು ಸಾಧ್ಯವೇ ಇಲ್ಲ. ಹಾಗಾಗಿ ನೌಕೆ ಭೂವಾತಾವರಣವನ್ನು ಪ್ರವೇಶಿಸುತ್ತದೆ. ಅಲ್ಲದೆ ಯಾವುದೇ ಕಾರಣಕ್ಕೂ ನೌಕೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೂಡ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ಮಂಗಳವಾರವಷ್ಟೇ ಕಜಕಿಸ್ತಾನದ ಬೈಕನೂರ್ ಉಡಾವಣಾ ನಿಲ್ದಾಣದಿಂದ ರಷ್ಯಾ ಬಾಹ್ಯಾಕಾಶ ಸಂಸ್ಥೆ ರಾಸ್ಕೊಮಾಸ್ (the Russian Federal Space Agency) ಪ್ರೋಗ್ರೆಸ್ ಎಂ-27ಎಂ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಈ ನೌಕೆಯನ್ನು ಉಡಾಯಿಸಲಾಗಿತ್ತು. ಆದರೆ ನೌಕೆ ರಾಕೆಟ್ ನಿಂದ ಬೇರ್ಪಟ್ಟ ಬಳಿಕ ತಾಂತ್ರಿಕ ತೊಂದರೆಗಳಿಂದಾಗಿ ನೌಕೆ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. ವಿಜ್ಞಾನಿಗಳು ಎಷ್ಟೇ ಪ್ರಯತ್ನಿಸಿದರೂ ನೌಕೆಯ ಸಂಪರ್ಕ ಸಾಧ್ಯವಾಗಿರಲಿಲ್ಲ.

ಪ್ರೋಗ್ರೆಸ್ ಎಂ-27ಎಂ ನೌಕೆಯಲ್ಲಿ  1940 ಕೆಜಿ ದ್ರವ ಇಂಧನ, 110 ಪೌಂಡ್ ಆಮ್ಲಜನಕ ಮತ್ತು 926 ಪೌಂಡ್ ನೀರು ಮತ್ತು ವೈಜ್ಞಾನಿಕ ಪ್ರಯೋಗಕ್ಕೆ ಬಳಸಲಾಗುವ 3,128 ಪೌಂಡ್ ತೂಕದ ವಿವಿಧ ಸಲಕರಣೆಗಳು ಇತ್ತು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com