ಭಾಷೆ ಸಮಸ್ಯೆಗೆ ಗೂಗಲ್ ಅಪ್ಲಿಕೇಷನ್

ಅಪರಿಚಿತ ಸ್ಥಳದಲ್ಲಿ ನಮಗೆ ಭಾಷೆ ಗೊತ್ತಿಲ್ಲ ಎಂದು ಇನ್ನು ಅಂಜಬೇಕಿಲ್ಲ. ಏಕೆಂದರೆ, ಗೂಗಲ್ ತಕ್ಷಣವೇ ನೆರವಿಗೆ ಬರಲಿದೆ!...
ಗೂಗಲ್
ಗೂಗಲ್

ಬೆಂಗಳೂರು: ಅಪರಿಚಿತ ಸ್ಥಳದಲ್ಲಿ ನಮಗೆ ಭಾಷೆ ಗೊತ್ತಿಲ್ಲ ಎಂದು ಇನ್ನು ಅಂಜಬೇಕಿಲ್ಲ. ಏಕೆಂದರೆ, ಗೂಗಲ್ ತಕ್ಷಣವೇ ನೆರವಿಗೆ ಬರಲಿದೆ! ನಮಗೆ ಗೊತ್ತಿಲ್ಲದಿರುವ ಭಾಷೆಯ ಮೇಲೆ
ಮೊಬೈಲ್‍ನ ಗೂಗಲ್ ಅಪ್ಲಿಕೇಷನ್ ಮೂಲಕ ಕ್ಯಾಮೆರಾ ಆನ್ ಮಾಡಿದರೆ, ಗೊತ್ತಿಲ್ಲದ ಭಾಷೆಯ ಪದಗಳು ಕೋರಿಕೆಯ ಭಾಷೆಯಲ್ಲಿ ಆ ಕ್ಷಣವೇ ಕಾಣಿಸುತ್ತದೆ. ಉದಾಹರಣೆಗೆ ರಸ್ತೆ ಬಳಿಯ  ಫಲಕದಲ್ಲಿ ಹಿಂದಿ ಭಾಷೆಯಲ್ಲಿ ಬರೆದಿದ್ದರೆ ಮೊಬೈಲ್ ನಲ್ಲಿನ ಗೂಗಲ್ ಭಾಷಾಂತರ ಅಪ್ಲಿಕೇಶನ್‍ನ ಸಹಾಯದಿಂದ ಕ್ಯಾಮೆರಾದಲ್ಲಿ ಸೆರೆ ಹಿಡಿದರೆ ಮರು ಕ್ಷಣವೇ ಆತನ ಕೋರಿಕೆಯ ಭಾಷೆ ಸ್ಕ್ರೀನ್  ನಲ್ಲಿ ಕಾಣಿಸುತ್ತದೆ. ಸದ್ಯಕ್ಕೆ ಹಿಂದಿ  ಭಾಷೆಯಲ್ಲಿ ಬಿಡುಗಡೆ ಮಾಡಲ್ಪಟ್ಟಿರುವ `ತಕ್ಷಣದ ಭಾಷಾಂತರ' ಅಪ್ಲಿಕೇಷನ್ ಮುಂದಿನ ದಿನಗಳಲ್ಲಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಿಗೂ ವಿಸ್ತರಣೆ ಮಾಡಲು ಉದ್ದೇಶಿಸಿದೆ. ಜೊತೆಗೆ ಧ್ವನಿ ಆಧಾರಿತ
ಭಾಷಾಂತರ ಸೇವೆ ನೀಡುವ ಉದ್ದೇಶವನ್ನು ಗೂಗಲ್  ಹೊಂದಿದೆ ಎಂದು ಖಾಸಗಿ ಹೋಟೆಲ್ ನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಗೂಗಲ್ ಹೌಸ್‍ನಲ್ಲಿ ಕಂಪನಿಯ ರಾಷ್ಟ್ರೀಯ ಮಾರುಕಟ್ಟೆ ನಿರ್ದೇಶಕ ಸಂದೀಪ್ ಮೆನನ್ ವಿವರಿಸಿದರು.



ಕಾರ್ಯವಿಧಾನ
ಇದು ಬಳಕೆದಾರರ ಉಪಕರಣಗಳಲ್ಲಿರುವ ಎಲ್ಲ ಫೋಟೋ, ವಿಡಿಯೋಗಳನ್ನುತನ್ನಿಂತಾನೇ ಬ್ಯಾಕ್‍ಅಪ್ಮಾಡುತ್ತದೆ. ಗೂಗಲ್ ಫೋಟೊಆ್ಯಪ್ ಅನಿಯಮಿತ, ಉಚಿತಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಜೊತೆಗೆ ಕೆಟಗರಿ ಹುಡುಕಲು ಸಹಾಯ ಮಾಡುತ್ತದೆ.

 -2ಜಿ ಸಂಪರ್ಕದಲ್ಲೂ ಉಪಯೋಗ ವಾಗುವಂತೆ ಅಳವಡಿಸಲಾದ ಫಾಸ್ಟರ್ ಮತ್ತು ಲೈಟರ್ ಸರ್ಚ್ ರಿಸಲ್ಟ್ ಗಳ ಸೇವೆ ಆರಂಭಿಸಲಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ.

-ಬಳಕೆದಾರ ಅಪೇಕ್ಷಿಸುವ ಮಾಹಿತಿಗಳನ್ನು ಸಿದ್ಧ ಮಾಡಿಟ್ಟು ಕೊಳ್ಳುವ ವ್ಯವಸ್ಥೆ ಇದಾಗಿದೆ. ಟ್ಯಾಕ್ಸಿ, ಹೋಟೆಲ್, ಸ್ಥಳೀಯ ಬಸ್ ಸೇರಿ ಎಲ್ಲ ಮಾಹಿತಿ ಒದಗಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com