ಚೆನ್ನೈ ಜಲಪ್ರಳಯದ ಚಿತ್ರ ಸೆರೆ ಹಿಡಿದ ನಾಸಾ

ಚೆನ್ನೈ ಜಲಪ್ರಳಯಕ್ಕೆ ಕಾರಣವಾದ ಮಳೆಯ ವಿವರಗಳನ್ನು ಮತ್ತು ಭೂಪಟಗಳನ್ನು ನಾಸಾ ಬಹಿರಂಗಪಡಿಸಿದೆ. ವಿಶೇಷವಾಗಿ ರಚಿಸಿದ ಅನಿಮೇಷನ್ ಭೂಪಟ...
ನಾಸಾ ಬಹಿರಂಗ ಪಡಿಸಿದ ಚಿತ್ರ
ನಾಸಾ ಬಹಿರಂಗ ಪಡಿಸಿದ ಚಿತ್ರ
ವಾಷಿಂಗ್ಟನ್ :  ಚೆನ್ನೈ ಜಲಪ್ರಳಯಕ್ಕೆ ಕಾರಣವಾದ ಮಳೆಯ ವಿವರಗಳನ್ನು ಮತ್ತು ಭೂಪಟಗಳನ್ನು ನಾಸಾ ಬಹಿರಂಗಪಡಿಸಿದೆ. ವಿಶೇಷವಾಗಿ ರಚಿಸಿದ ಅನಿಮೇಷನ್ ಭೂಪಟವನ್ನು ಕೆಲವು ದಿನಗಳ ಹಿಂದೆ ನಾಸಾ ಅರ್ಥ್ ಅಬ್ಸರ್ವೇಟರಿ  ಬ್ಲಾಗ್‌ನಲ್ಲಿ ಪ್ರಕಟಿಸಿತ್ತು.
ಡಿಸೆಂಬರ್ 1-2 ರಂದು ಸುರಿದ ಮಳೆಯ ತೀವ್ರತೆ ಮತ್ತು ವ್ಯಾಪ್ತಿಯನ್ನು ಈ ಭೂಪಟದಲ್ಲಿ ಕಾಣಬಹುದು. 1901ರ ನಂತರ ಚೆನ್ನೈಯಲ್ಲಿ ಸುರಿದ ಶತಮಾನದ ಮಹಾಮಳೆಯಾಗಿದೆ ಇದು.  ಉಪಗ್ರಹಗಳ ಮೂಲಕ ನಾಸಾ ಕ್ಲಿಕ್ಕಿಸಿದ ಫೋಟೋಗಳನ್ನು ಜೋಡಿಸಿ ಆನಿಮೇಷನ್ ಮ್ಯಾಪ್ ರಚಿಸಲಾಗಿದೆ. 
ಈಶಾನ್ಯ ತೀರಗಳಲ್ಲಿ ಈ ದಿವಸಗಳಲ್ಲಿ 500 ಮಿ.ಮಿ  ಮಳೆ  ಸುರಿದಿತ್ತು ಎಂದು ನಾಸಾ ಹೇಳಿದೆ. ಮಾತ್ರವಲ್ಲದೆ ಹೆಚ್ಚಿನ ಮಳೆ ಸುರಿದು ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡಿತ್ತು. 
ಈ ನಿಟ್ಟಿನಲ್ಲಿ ಚೆನ್ನೈನಲ್ಲಿರುವ ಅಮೆರಿಕದ ಕಂಪನಿಗಳೆಗೆ ಮುನ್ನೆಚ್ಚರಿಕೆನ್ನೂ ನೀಡಲಾಗಿತ್ತು. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಂಪನಿಗಳು ತಮ್ಮ ನೌಕರರನ್ನು ತಾತ್ಕಾಲಿಕವಾಗಿ ಬೆಂಗಳೂರಿಗೆ ವರ್ಗಾವಣೆಯನ್ನೂ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com