ಚೈನಾದಲ್ಲಿ ವಿದೇಶಿ ಅಂತರ್ಜಾಲ ತಾಣಗಳ ನಿಷೇಧ ಮುಂದುವರಿಕೆ

ವಿದೇಶಿ ವೆಬ್ ಸೈಟ್ ಗಳಾದ ಫೇಸ್ಬುಕ್, ಟ್ವಿಟ್ಟರ್, ಇಂಸ್ಟಾಗ್ರಾಮ್ ಒಳಗೊಂಡಂತೆ ಹಲವಾರು ನೂತನ ಅಂತರ್ಜಾಲ ತಾಣಗಳ ನಿಷೇಧವನ್ನು
ಫೇಸ್ಬುಕ್ ಸಿ ಇ ಒ ಮಾರ್ಕ್ ಜ್ಯೂಕರ್ ಬರ್ಗ್
ಫೇಸ್ಬುಕ್ ಸಿ ಇ ಒ ಮಾರ್ಕ್ ಜ್ಯೂಕರ್ ಬರ್ಗ್

ವಾಶಿಂಗ್ಟನ್: ವಿದೇಶಿ ವೆಬ್ ಸೈಟ್ ಗಳಾದ ಫೇಸ್ಬುಕ್, ಟ್ವಿಟ್ಟರ್, ಇಂಸ್ಟಾಗ್ರಾಮ್ ಒಳಗೊಂಡಂತೆ ಹಲವಾರು ನೂತನ ಅಂತರ್ಜಾಲ ತಾಣಗಳ ನಿಷೇಧವನ್ನು ಮುಂದುವರೆಸುವುದಾಗಿ ಚೈನಾ ತಿಳಿಸಿದೆ.

ಸಿ ಎನ್ ಎನ್ ಪ್ರಕಾರ ಫೇಸ್ಬುಕ್ ಸಿ ಇ ಒ ಮಾರ್ಕ್ ಜ್ಯೂಕರ್ ಬರ್ಗ್ ಅವರು ತಮ್ಮ ತಾಣದ ನಿಷೇಧವನ್ನು ತೆರವುಗೊಳಿಸುವುದಕ್ಕೆ ಹಲವಾರು ಬಗೆಯ ಮಾತುಕತೆ ನಡೆಸಿದ್ದರೂ ಫಲಪ್ರದವಾಗಿಲ್ಲ ಎಂದು ತಿಳಿದಿದೆ.

ಜ್ಯೂಕರ್ ಬರ್ಗ್ ಅವರು ಚೈನಾ ಭಾಷೆ ಮ್ಯಾಂಡರಿನ್ ಕಲಿಯುತ್ತಿರುವುದಲ್ಲದೆ ಚೈನಾ ಅಧಿಕಾರಿಗಳನ್ನು ಫೇಸ್ಬುಕ್ ಕಚೇರಿಗಳಿಗೆ ಅಧಿಕೃತವಾಗಿ ಸ್ವಾಗತಿಸುತ್ತಿದ್ದಾರೆ ಅಲ್ಲದೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ತಮ್ಮ ಮಗುವುಗಿಗೆ (ಹುಟ್ಟುವುದಕ್ಕಿಂತಲೂ ಮೊದಲು) ಹೆಸರು ಸೂಚಿಸುವಂತೆ ಕೂಡ ಕೋರಿದ್ದರು.

ಚೈನಾ ಸರ್ಕಾರದ ಅಂತರ್ಜಾಲ ನೀತಿಯ ವ್ಯವಸ್ಥಾಪಕರಾದ ಲು ವಿ, ನಮ್ಮ ದೇಶದಲ್ಲಿ ಹಣ ಗಳಿಸಿ ನಮ್ಮ ದೇಶದ ಘನತೆಗೆ ಕುಂದು ತರುವವರಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com