ಕನ್ಸ್ಯೂಮರ್ ನೋಟಿಸ್. ಕಾಮ್ ಬಗ್ಗೆ ಎಚ್ಚರ

ಹೀಗೊಂದು ತಲೆಬರಹ ದೊಂದಿಗೆ ಕಂಪ್ಯೂಟರ್‍ನಲ್ಲಿ ಪಾಪ್ ಅಪ್ ಬರುತ್ತದೆ. ನಿಮ್ಮ ಕಂಪ್ಯೂಟರ್ ಅಪಾಯದಲ್ಲಿದೆ.
ಕಂಪ್ಯೂಟರ್ ನೋಟಿಸ್. ಕಾಮ್
ಕಂಪ್ಯೂಟರ್ ನೋಟಿಸ್. ಕಾಮ್

'ಕನ್ಸ್ಯೂಮರ್  ನೋಟಿಸ್. ಕಾಮ್'
ಹೀಗೊಂದು ತಲೆಬರಹ ದೊಂದಿಗೆ ಕಂಪ್ಯೂಟರ್‍ನಲ್ಲಿ ಪಾಪ್ ಅಪ್ ಬರುತ್ತದೆ. ನಿಮ್ಮ ಕಂಪ್ಯೂಟರ್ ಅಪಾಯದಲ್ಲಿದೆ.
ಈ ನಂಬರ್‍ಗೆ ಕರೆ ಮಾಡಿ ಅಂತಲೂ ಇರುತ್ತದೆ. ವೈರಸ್ ಮಾಲ್ ವೇರ್ ಕಂಪ್ಯೂಟರನ್ನು ಪೂರ್ತಿ ಕರಪ್ಟ್ ಮಾಡಿದೆ ಎಂದು ಹೇಳುತ್ತದೆ. ಸರಿಪಡಿಸಲು ತಗಲುವ ಶುಲ್ಕವನ್ನೂ ಕೇಳುತ್ತದೆ. ಆದರೆ ದಯವಿಟ್ಟು ನಂಬಬೇಡಿ. ಇದು ಪೂರ್ತಿ ಮೋಸ.
ಆ ಥರ ಅಲರ್ಟ್ ವಿಂಡೋಸ್ ಆಗಲೀ ಮ್ಯಾಕ್ ಆಗಲೀ ನೀಡುವುದಿಲ್ಲ. ಇದು ಮಾಲ್ ವೇರ್ ಒಂದರಿಂದಲೇ ಬರುವ ಅಲರ್ಟ್. ಇದು ಕಂಪ್ಯೂಟರ್‍ನ ಪ್ರೈವೇಸಿಗೆ ಧಕ್ಕೆ ತರುತ್ತದೆ. ಸಿಸ್ಟಮ್ 32 ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿ ನೀವು ಯಾಮಾರದೆಯೇ, ಯಾವುದಾದರೂ ಸ್ಪೈ ಹಂಟರ್ ಅಥವಾ ಫೈರ್ ವಾಲ್ ಇನ್‍ಸ್ಟಾಲ್ ಮಾಡಿ ಅದರಿಂದ ಕ್ಲೀನ್ ಮಾಡುವುದು ಸರಿಯಾದ ಮಾರ್ಗ. ಈ ಅಲರ್ಟ್ ಬಂದಾಗ ತಕ್ಷಣವೇ ನಿಮ್ಮ ಎಲ್ಲ ಆನ್‍ಲೈನ್ ಅಕೌಂಟ್ ಗಳ ಪಾಸ್‍ವರ್ಡ್ ಬದಲಿಸುವುದು ಉತ್ತಮ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com