ಮೈಕ್ರೋಮ್ಯಾಕ್ಸ್
ಮೈಕ್ರೋಮ್ಯಾಕ್ಸ್

ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್ ಹಿಂದಿಕ್ಕಿದ ಮೈಕ್ರೋಮ್ಯಾಕ್ಸ್

ಭಾರತ ಮೂಲದ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌ ನಾಲ್ಕನೇ ತ್ರೈಮಾಸಿಕದಲ್ಲಿ ಅತ್ಯಾಧಿಕ ಮಾರಾಟ ಗಳಿಕೆ ಕಂಡಿದ್ದು, ಸೌತ್ ಕೊರಿಯಾ ಮೂಲದ ಸ್ಯಾಮ್‌ಸಂಗನ್ನು ಹಿಂದಿಕ್ಕಿ. ಭಾರತದ ಅತಿ ದೊಡ್ಡ...

ಮುಂಬೈ: ಭಾರತ ಮೂಲದ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌ ನಾಲ್ಕನೇ ತ್ರೈಮಾಸಿಕದಲ್ಲಿ ಅತ್ಯಾಧಿಕ ಮಾರಾಟವಾಗಿದ್ದು, ಸೌತ್ ಕೊರಿಯಾ ಮೂಲದ ಸ್ಯಾಮ್‌ಸಂಗನ್ನು ಹಿಂದಿಕ್ಕಿ. ಭಾರತದ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಮಾರಾಟ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಫೋನ್‌ಗಳಿಗೆ ಹೊಸ ಆಯಾಮ ಸೃಷ್ಠಿಸಿ, ಬೆರಳಿನ ತುದಿಯಲ್ಲೇ ಆಪ್‌ರೇಟ್ ಮಾಡುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ದಾಖಲೆ ನಿರ್ಮಿಸಿದ್ದ ಸೌತ್ ಕೊರಿಯಾ ಮೂಲದ ಸ್ಯಾಮ್‌ಸಂಗ್ ಮೊಬೈಲ್ ಫೋನ್‌ಗಳ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡಿದೆ.

ಭಾರತೀಯರ ಅಗತ್ಯ ಹಾಗೂ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಮಾಡಿದ್ದ ಭಾರತ ಮೂಲದ ಮೈಕ್ರೋಮ್ಯಾಕ್ಸ್ ಇದೀಗ ನಾಲ್ಕನೇ ತ್ರೈಮಾಸಿಕದಲ್ಲಿ ಅತ್ಯಾಧಿಕ ಮಾರಾಟ ಗಳಿಕೆ ಕಂಡಿದ್ದು, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಕೊ. ಲಿಮಿಟೆಡನ್ನು ಹಿಂದಿಕ್ಕಿದೆ ಎಂದು ಕೆನಲ್ಯಾಸ್ ಸಂಶೋಧನ ಸಂಸ್ಥೆ ಹೇಳಿದೆ.

ಅಕ್ಟೋಬರ್ ನಿಂದ ಡಿಸೆಂಬರ್‌ನ ತ್ರೈಮಾಸಿಕದಲ್ಲಿ ನಡೆದ ಫೋನ್ ಮಾರಾಟದಲ್ಲಿ ಮೈಕ್ರೋಮ್ಯಾಕ್ಸ್ ಸಂಸ್ಥೆ ಶೇಕಡ 22ರಷ್ಟು ಗಳಿಕೆ ಸಾಧಿಸಿದ್ದರೆ. ಸ್ಯಾಮ್‌ಸಂಗ್ ಶೇ. 20ರಷ್ಟು ಮಾರಟವಾಗಿದೆ. ಈ ಅವದಿಯಲ್ಲಿ ಭಾರತದಲ್ಲಿ ಒಟ್ಟು 21.6 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವ ರಾಷ್ಟ್ರ ಚೀನಾವಾಗಿದ್ದು, ನಂತರದ ಸ್ಥಾನ ಭಾರತದ್ದು, ಈಗಿರುವಾಗ ವಿಶ್ವದ ಮೂರನೇ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ಭಾರತದಲ್ಲಿ ಪ್ರಸ್ತುತ ಸ್ಮಾರ್ಟ್‌ಫೋನ್‌ಗಳ ಭರಾಟೆ ಜಾಸ್ತಿಯಾಗಿದೆ. ಅತಿ ಕಡಿಮೆ ಮೊತ್ತದ ಸ್ಮಾರ್ಟ್‌ಫೋನ್‌ನಿಂದ ಹಿಡಿದು ಹೆಚ್ಚು ಮೊತ್ತದ ಸ್ಮಾರ್ಟ್‌ಫೋನ್‌ಗಳಿಗೆ ಗ್ರಾಹಕರು ಮಾರುಹೋಗುತ್ತಿದ್ದಾರೆ.

ಮೈಕ್ರೋಮ್ಯಾಕ್ಸ್‌ನ ಕಾರ್ಯ ನಿರ್ವಹಣೆಯಿಂದ ಸ್ಮಾರ್ಟ್‌ಫೋನ್ ಬಳಕೆದಾರರು ಸುಲಭವಾಗಿ ಅಪ್‌ಗ್ರೇಡ್ ಮಾಡಿಕೊಳ್ಳುವ ಅವಕಾಶವಿರುವುದರಿಂದ ಭಾಗಶಃ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಕ್ಕೆ ಕಾರಣವಾಗಿದೆ ಎಂದು ಕೆನ್‌ಲ್ಯಾಸ್ ಹೇಳಿದೆ.

ಮೈಕ್ರೋಮ್ಯಾಕ್ಸ್ ಮತ್ತು ಸ್ಯಾಮ್‌ಸಂಗ್‌ನಂತ ಭಾರತದಲ್ಲಿ ಅತಿ ಕಡಿಮೆ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ತೊಡಗಿರುವ ಕಾರ್ಬನ್ ಮತ್ತು ಲಾವಾ ಆ್ಯಂಡ್‌ಸೆಟ್‌ಗಳು ಸಹ ಉತ್ತಮ ಮಾರಟ ಕಂಡಿವೆ.


Related Stories

No stories found.

Advertisement

X
Kannada Prabha
www.kannadaprabha.com