ಮೊಟೊರೋಲಾದ ಮೊಟೊಮ್ಯಾಕ್ಸ್ ಮೊಬೈಲ್ (ಸಂಗ್ರಹ ಚಿತ್ರ)
ಮೊಟೊರೋಲಾದ ಮೊಟೊಮ್ಯಾಕ್ಸ್ ಮೊಬೈಲ್ (ಸಂಗ್ರಹ ಚಿತ್ರ)

ದುಬಾರಿ ಮೊಟೊ ಮ್ಯಾಕ್ಸ್ ಶೀಘ್ರದಲ್ಲೇ ಮಾರುಕಟ್ಟೆಗೆ

ಆ್ಯಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಮ್, 64 ಜಿಬಿ ಮೆಮೋರಿ, 3 ಜಿಬಿ ರ್ಯಾಮ್, 21 ಮೆಗಾ ಪಿಕ್ಸೆಲ್ ಕ್ಯಾಮೆರಾ...

ನವದೆಹಲಿ: ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಮೊಟೊರೋಲಾದ ಉನ್ನತ ಶ್ರೇಣಿಯ ಮತ್ತು ದುಬಾರಿ ಮೊಬೈಲ್ ಎಂದೇ ಬಿಂಬಿತವಾಗಿರುವ ಮೊಟೊ ಮ್ಯಾಕ್ಸ್ ಮೊಬೈಲ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

ಮೊಟೊರೋಲಾದ ಮೊಟೊಮ್ಯಾಕ್ಸ್ ಸ್ಮಾರ್ಟ್‌ಫೋನ್ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಫ್ಲಿಪ್‌ಕಾರ್ಟ್ ಸಂಸ್ಥೆಯ ಮೂಲಕವಾಗಿ ಈ ಮೊಬೈಲ್ ಆನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮೊಟೊರೋಲಾ ಸಂಸ್ಥೆ ಮುಂದಾಗಿದೆ. ವಿಶೇಷವೆಂದರೆ ಮೊಟೊಮ್ಯಾಕ್ಸ್ ಎಂದು ಕರೆಯಲ್ಪಡುತ್ತಿರುವ ಈ ಮೊಬೈಲ್‌ಗೆ ಇನ್ನೂ ನಿರ್ಧಿಷ್ಟ ಹೆಸರನ್ನೇ ಇಟ್ಟಿಲ್ಲವಾದರೂ, ಫ್ಲಿಪ್ ಕಾರ್ಟ್ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಮೊಬೈಲ್ ಕುರಿತ ಜಾಹಿರಾತುಗಳನ್ನು ಪ್ರಕಟಿಸುತ್ತಿದೆ. ಪ್ರಸ್ತುತ ಈ ದುಬಾರಿ ಮೊಬೈಲ್ ಅನ್ನು ಮೊಟೊಮ್ಯಾಕ್ಸ್ ಎಂದು ಕರೆಯಲಾಗುತ್ತಿದೆ.

2014ರ ನವೆಂಬರ್‌ನಲ್ಲಿ ಈ ಮೊಬೈಲ್ ಬ್ರೆಜಿಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿತ್ತು. ಆಗ ಅದರ ಬೆಲೆ ಸುಮಾರು 49 ಸಾವಿರ ರುಪಾಯಿಗಳಷ್ಟಿತ್ತು. ಈಗ ಅದರ ಬೆಲೆ ಇಳಿದಿರಬಹುದು ಎಂದು ಹೇಳಲಾಗುತ್ತಿದೆ.

ಮೊಟೊ ಮ್ಯಾಕ್ಸ್ ನ ತಾಂತ್ರಿಕ ವೈಶಿಷ್ಟ್ಯಗಳೆಂದರೆ
ಆಪರೇಟಿಂಗ್ ಸಿಸ್ಟಮ್: ಆ್ಯಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
ಮೆಮೋರಿ: 64 ಜಿಬಿ ಸಂಗ್ರಾಹ್ಯ ಸಾಮರ್ಥ್ಯ ಮತ್ತು 3 ಜಿಬಿ ರ್ಯಾಮ್
ಕ್ಯಾಮೆರಾ: 21 ಮೆಗಾ ಪಿಕ್ಸೆಲ್
ಬ್ಯಾಟರಿ: 3900ಎಂಎಎಚ್ ಮತ್ತು ಟರ್ಬೋ ಚಾರ್ಜಿಂಗ್ ಫೀಚರ್ (15 ನಿಮಿಷ ಚಾರ್ಜ್ ಮಾಡಿದರೆ 8 ಗಂಟೆಯ ವರೆಗೂ ಬಾಳಿಕೆ ಬರುವ ಸಾಮರ್ಥ್ಯವಿದೆ)

Related Stories

No stories found.

Advertisement

X
Kannada Prabha
www.kannadaprabha.com