
ವಾಶಿಂಗ್ಟನ್: ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದ ಮೇಲೆ ಸೆಲ್ಫಿ ಕ್ಲಿಕ್ಕಿಸಿದೆ. ಮಂಗಳ ಗ್ರಹದ ಮೌಂಟ್ ಶಾರ್ಪ್ ಪರ್ವತವನ್ನು ಕೊರೆದು ಅಲ್ಲಿನ ಪರಿಸರದ ವಸ್ತುಗಳನ್ನು ಸಂಗ್ರಹಿಸಿ ತನ್ನ ಫೋಟೋವನ್ನೇ ಸೆರೆಹಿಡಿದಿದೆ.
ಐದು ತಿಂಗಳಿನಿಂದ ಮಂಗಳ ಗ್ರಹದ "ಪಹ್ರುಂಪ್ ಬೆಟ್ಟ'ಗಳ ಮೇಲೆ ಕೆಲಸ ಮಾಡುತ್ತಿರುವ ರೋವರ್ ಕಳುಹಿಸಿರುವ ಈ ಸ್ವ-ಚಿತ್ರ ಮನಮೋಹಕ ಪರಿಸರವನ್ನು ಸೆರೆಹಿಡಿದಿದೆ.
ರೋವರ್ ನ ರೋಬೋಟಿಕ್ ಕೈಯ ಮೇಲಿರುವ ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್ (ಎಂ ಎ ಎಚ್ ಎಲ್ ಐ) ಕಳುಹಿಸಿರುವ ಸುಮಾರು ಡಜನ್ ಫೋಟೋಗಳನ್ನು ಒಟ್ಟುಗೂಡಿಸಿ ಈ ಸೆಲ್ಫಿ ಪ್ರಕಟಿಸಲಾಗಿದೆ.
ಈ ಸೆಲ್ಫಿಯನ್ನು 'ಮೊಜಾವ್-೨' ಪ್ರದೇಶದಲ್ಲಿ ಸ್ಯಾಂಪಲ್ ಸಂಗ್ರಹಿಸಲು ಕೊರೆಯುವಾಗ ಜನವರಿ ಕೊನೆಯ ಭಾಗದಲ್ಲಿ ತೆಗೆದಿರುವುದು ಎಂದು ತಿಳಿಸಲಾಗಿದೆ. ಮಂಗಳ ಗ್ರಹದ ಮೇಲೆ ಜೀವ ವೈವಿಧ್ಯತೆ ಸಾಧ್ಯವೇ ಎಂಬುದರ ಸಂಶೋಧನೆಗೆ ಈ ಸ್ಯಾಂಪಲ್ ಗಳು ನೆರವಾಗಲಿವೆ.
Advertisement