ಸಾಮಾಜಿಕ ತಾಣದಲ್ಲಿ 'ಫೇಸ್‌ಬುಕ್‌'ಗೇ ಅಗ್ರಸ್ಥಾನ

ಎಲ್ಲ ಸಾಮಾಜಿಕ ತಾಣಗಳ ನಾಯಕ...
ಫೇಸ್‌ಬುಕ್  (ಸಾಂದರ್ಭಿಕ ಚಿತ್ರ)
ಫೇಸ್‌ಬುಕ್ (ಸಾಂದರ್ಭಿಕ ಚಿತ್ರ)

ವಾಷಿಂಗ್ಟನ್: ಎಲ್ಲ ಸಾಮಾಜಿಕ ತಾಣಗಳ ನಾಯಕ ಫೇಸ್‌ಬುಕ್ ಎಂದು ಸಮೀಕ್ಷೆಯೊಂದು ಹೇಳಿದೆ. ಬೇಗನೆ ಪ್ರಸಿದ್ಧಿ ಹೊಂದಲು ಫೇಸ್‌ಬುಕ್ ಸಹಕಾರಿ, ಆದ್ದರಿಂದಲೇ ಹೆಚ್ಚಿನ ಜನರು ಈ ಸಾಮಾಜಿಕ ತಾಣವನ್ನು ಇಷ್ಟಪಡುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಅಮೆರಿಕ ಮೂಲದ ಪ್ಯೂ ರಿಸರ್ಚ್ ಸೆಂಟರ್ 1,597 ಇಂಟರ್ನೆಟ್ ಬಳಕೆದಾರರನ್ನು ಸಮೀಕ್ಷೆಗೊಳಪಡಿಸಿದ್ದು, 2014ರಲ್ಲಿ ಅಮೆರಿಕದ ಶೇ.71 ವಯಸ್ಕರು ಫೇಸ್‌ಬುಕ್ ಬಳಕೆ ಮಾಡುತ್ತಿದರೆ, 2013ರಲ್ಲಿ ಶೇ. 63 ವಯಸ್ಕರು ಫೇಸ್‌ಬುಕ್ ಬಳಕೆದಾರರಾಗಿದ್ದಾರೆ ಎಂದು ಫೋರ್ಬ್ಸ್ ಮ್ಯಾಗಜಿನ್ ವರದಿ ಮಾಡಿದೆ.

ಫೇಸ್‌ಬುಕ್ ಬಳಕೆದಾರರರಲ್ಲಿ ಶೇ. 56 ಮಂದಿಯ ವಯಸ್ಸು 65 ಮತ್ತು ಅದಕ್ಕಿಂತ ಮೇಲ್ಪಟ್ಟದ್ದಾಗಿದೆ.

ಅದೇ ವೇಳೆ ಸಾಮಾಜಿಕ ತಾಣಗಳಾದ ಲಿಂಕ್‌ಡ್ ಇನ್ ಮತ್ತು ಪಿನ್‌ರೆಸ್ಟ್ ನಲ್ಲಿ ಶೇ.28ರಷ್ಟು ವಯಸ್ಕ ಬಳಕೆದಾರರಿದ್ದಾರೆ.

ಮೈಕ್ರೋಬ್ಲಾಗಿಂಗ್ ಸೈಟ್ ಆದ ಟ್ವೀಟರ್‌ನಲ್ಲಿ 2013ರಲ್ಲಿ ಶೇ. 46 ಶೇ ಬಳಕೆದಾರರಿದ್ದರು. ಇದು 2014ರಲ್ಲಿ ಶೇ. 36 ಆಗಿ ಕುಸಿತಗೊಂಡಿದೆ.

ಇಂಟರ್ನೆಟ್ ಬಳಕೆದಾರರಲ್ಲಿ ಶೇ. 53 ಮಂದಿ 18-29ರ ನಡುವಿನ ಪ್ರಾಯದವರಾಗಿದ್ದು, ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಾಗ್ರಾಂ ಬಳಸುತ್ತಿದ್ದಾರೆ.

ಆದಾಗ್ಯೂ, ಶೇ. 45 ಮಂದಿ ದಿನದಲ್ಲಿ ಹಲವಾರು ಬಾರಿ ಫೇಸ್‌ಬುಕ್‌ಗೆ ಲಾಗಿನ್ ಆಗುತ್ತಿರುತ್ತಾರೆ ಎಂದೂ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com