ಮೋಟೋ ಜಿ ಬೆಲೆಯಲ್ಲಿ ರು. 3000 ಕಡಿತ!

ಮೋಟೋ ಜಿ ಮೊಬೈಲ್ ಖರೀದಿ ಮಾಡುವವರಿಗೊಂದು ಶುಭ ಸುದ್ದಿ. ಅದೇನಪ್ಪಾ ಅಂದರೆ ಮೊಟೋರೋಲಾ, ಮೋಟೋ ಜಿ 2 ಮೊಬೈಲ್ ...
ಮೊಟೋ ಜಿ
ಮೊಟೋ ಜಿ

ಮೋಟೋ ಜಿ ಮೊಬೈಲ್ ಖರೀದಿ ಮಾಡುವವರಿಗೊಂದು ಶುಭ ಸುದ್ದಿ. ಅದೇನಪ್ಪಾ ಅಂದರೆ ಮೊಟೋರೋಲಾ, ಮೋಟೋ ಜಿ 2 ಮೊಬೈಲ್ ಬೆಲೆಯಲ್ಲಿ ರು. 3000 ಕಡಿತ ಮಾಡುವ ಮೂಲಕ  ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಈ ಕಡಿತದಿಂದಾಗಿ ರು. 12,999 ಬೆಲೆಯ ಮೊಟೋ ಜಿ (2ನೇ ಜನರೇಷನ್) ಮೊಬೈಲ್ ಈಗ ರು. 9,999ಗೆ ಫ್ಲಿಪ್ ಕಾರ್ಟ್ ಮೂಲಕ ಲಭ್ಯವಾಗುತ್ತಿದೆ. ಬೆಲೆ ಕಡಿತಗೊಳಿಸಿರುವ ಬಗ್ಗೆ ಮೋಟೋರೋಲಾ ಕಂಪನಿ  ತಮ್ಮ ಅಧಿಕೃತ ಫೇಸ್‌ಬುಕ್‌ ಪೇಜ್ ನಲ್ಲಿ  ಮಂಗಳವಾರ ಈ ವಿಷಯ ಬಹಿರಂಗ ಪಡಿಸಿತ್ತು.

ಮೋಟೋ ಜಿ 2ನೇ ಜನರೇಷನ್ ಫೋನ್‌ನಲ್ಲಿ ಕೋರ್ನಿಂಗ್ ಗೊರಿಲ್ಲಾ  ಗ್ಲಾಸ್ ಹೊಂದಿರುವ 5 ಇಂಚು ಹೆಚ್‌ಡಿ ಡಿಸ್‌ಪ್ಲೇ ಇದೆ. ಲಾಲಿಪಾಪ್ ಗೆ ಅಪ್‌ಗ್ರೇಡ್ ಮಾಡಲು ಸಾಧ್ಯತೆಯಿರುವ ಈ ಫೋನ್‌ಗೆ 1 ಜಿ ರಾಮ್, 16 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಮೆಮೊರಿಯನ್ನು ಎಸ್‌ಡಿ  ಕಾರ್ಡ್ ಮೂಲಕ 32 ಜಿಬಿ ವರೆಗೆ ಹೆಚ್ಚಳ ಮಾಡಬಹುದಾಗಿದೆ.

ಈ ಫೋನ್‌ನಲ್ಲಿ  8 ಮೆಗಾ ಪಿಕ್ಸೆಲ್ ಮೇನ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, 2,070mAh  ಬ್ಯಾಟರಿ ಇದೆ. ಆಟೋ ಫೋಕಸ್, ಸ್ಲೋಮೋಷನ್ ವೀಡಿಯೋ ಮೋಡ್,  ಹೆಚ್‌ಡಿ ಆರ್,  ಎಲ್‌ಇಡಿ ಫ್ಲಾಶ್‌ಲೈಟ್ ಇರುವ ಕ್ಯಾಮೆರಾ ಇದರಲ್ಲಿದೆ.

ವೈಫೈ ಹಾಟ್‌ಸ್ಪಾಟ್, ಬ್ಲೂಟೂತ್, ತ್ರೀಜಿ, ಜಿಪಿಎಸ್ GLONASS ಗಳು ಇದರಲ್ಲಿರುವ ಕನೆಕ್ಟಿವಿಟಿ ಸೌಲಭ್ಯಗಳಾಗಿವೆ. ಮೋಟೋ ಜಿಯ ಮೂರನೇ ಜನರೇಷನ್ (ಆವೃತ್ತಿ) ಬಿಡುಗಡೆ ಮಾಡುವ ಸಲುವಾಗಿಯೇ ಹಳೇ ಆವೃತ್ತಿಯ ಫೋನ್ ಬೆಲೆ ಕಡಿಮೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com