ಎಚ್ಚರ, ಸೆಲ್ಫಿ ಜ್ವರದಿಂದ ಜೀವಕ್ಕೇ ಕುತ್ತು!

ಸೆಲ್ಫಿಯಿಂದ ಉಂಟಾಗುವ ಅನಾಹುತಗಳು ಹೆಚ್ಚುತ್ತಿವೆ, ಅದ್ಭುತವಾದ ಸೆಲ್ಫಿಗಳನ್ನು ಕ್ಲಿಕ್ಕಿಸುವುದಕ್ಕಾಗಿ ನಿಮ್ಮ ಜೀವವನ್ನೇ ಕಳೆದುಕೊಳ್ಳಬೇಕಾದೀತು ಎಂದು ರಷ್ಯಾ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಸೆಲ್ಫಿ(ಸಾಂಕೇತಿಕ ಚಿತ್ರ )
ಸೆಲ್ಫಿ(ಸಾಂಕೇತಿಕ ಚಿತ್ರ )

ಮಾಸ್ಕೋ: ಸೆಲ್ಫಿ ಟ್ರೆಂಡ್ ಹೆಚ್ಚಾಗುತ್ತಿರುವಂತೆ, ಅದರಿಂದ ಉಂಟಾಗುವ ಅನಾಹುತಗಳು ಹೆಚ್ಚುತ್ತಿವೆ, ಅದ್ಭುತವಾದ ಸೆಲ್ಫಿಗಳನ್ನು ಕ್ಲಿಕ್ಕಿಸುವುದಕ್ಕಾಗಿ ನಿಮ್ಮ ಜೀವವನ್ನೇ ಕಳೆದುಕೊಳ್ಳಬೇಕಾದೀತು ಎಂದು ರಷ್ಯಾ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಜೀವಕ್ಕೆ ಹಾನಿಯುಂಟಾಗುವ ಸನ್ನಿವೇಶಗಳಲ್ಲಿ ಸೆಲ್ಫಿಗಳನ್ನು ತೆಗೆಯದಂತೆ ರಷ್ಯಾದ ನಾಗರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸ್ಕೈ ಡಾಟ್ ಕಾಂ ವರದಿ ಮಾಡಿದೆ.  ಅತ್ಯುತ್ತಮ ಸೆಲ್ಫಿ ಕ್ಲಿಕ್ಕಿಸುವ ಹಲವರ ಕ್ರೇಜ್ ಸಾವಿನಲ್ಲಿ ಅಂತ್ಯವಾಗಿರುವ ಪರಿಣಾಮ, ಸುರಕ್ಷಿತ ಸೆಲ್ಫಿ ಕ್ಲಿಕ್ಕಿಸುವುದಕ್ಕಾಗಿ ರಷ್ಯಾದ ಪೊಲೀಸರು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.  

ಸೆಲ್ಫಿ ಪ್ರೇಮಿಗಳು ರಸ್ತೆ ಅಪಘಾತಕ್ಕೊಳಗಾಗುವ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದೆ, ಎ ಕೂಲ್ ಸೆಲ್ಫಿ ಕ್ಯಾನ್ ಕಾಸ್ಟ್ ಯುವರ್ ಲೈಫ್( ರಸ್ತೆ ಬದಿಯಲ್ಲಿ ನಿಂತು ಕ್ಲಿಕ್ಕಿಸುವ ಅತ್ಯುತ್ತಮ ಸೆಲ್ಫಿಗಳು ಜಿಮ್ಮ ಜೀವಕ್ಕೆ) ಹಾನಿ ಎಂಬ ಎಚ್ಚರಿಕೆ ಸಂದೇಶವನ್ನು ರಸ್ತೆಗಳಲ್ಲಿ ಹಾಕಲಾಗಿದೆ.    

ಮಾಸ್ಕೋದ ಮಹಿಳೇಯೊಬ್ಬರು ಪಿಸ್ತೂಲ್ ನ್ನು ಹಿಡಿದು ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವೇಳೆ ಅಕಸ್ಕಿಕವಾಗಿ ಟ್ರಿಗರ್ ಒತ್ತಿದ ಪರಿಣಾಮ ಗುಂಡು ಸಿಡಿದು ಸಾವನ್ನಪ್ಪಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಗ್ರೆನೇಡ್ ಹಿಡಿದದ್ದ ಯುವಕರು ಸೆಲ್ಫಿ ಕ್ಲಿಕ್ಕಿಸುವ ವೇಳೆ ಗ್ರೆನೇಡ್ ಪಿನ್ ಹೊರತೆಗೆದ ಪರಿಣಾಮ ಸ್ಫೋಟಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ರೈಲ್ವೆ ಸೇತುವೆ ಏರುತ್ತಿರಬೇಕಾದರೆ ಸೆಲ್ಫಿ ಕ್ಲಿಕ್ಕಿಸಲು ಹೋದ ಯುವಕನೊಬ್ಬ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜೀವಕ್ಕೆ ಹಾನಿಯುಂಟು ಮಾಡುವ ಸನ್ನಿವೇಶಗಳಲ್ಲಿ ಸೆಲ್ಫಿಗಳನ್ನು ತೆಗೆಯದಂತೆ ರಷ್ಯಾದ ನಾಗರಿಗೆ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com