
ಲಂಡನ್: ಅನ್ಯಗ್ರಹ ಜೀವಿಗಳಿಗೆ ಕಳುಹಿಸಲು ಅತ್ಯುತ್ತಮವಾದ ಸಂದೇಶ ವನ್ನು ಯಾರು ರಚಿಸುತ್ತಾರೋ ಅವರಿಗೆ ಬರೋಬ್ಬರಿ 6 ಕೋಟಿ ಬಹುಮಾನ ಸಿಗಲಿದೆ.
ಆದರೆ, ಒಂದೇ ಒಂದು ಷರತ್ತು. ಅದೇನೆಂದರೆ, ಆ ಸಂದೇಶವು ಮಾನವರು ಬಳಸುವ ಭಾಷೆಯಲ್ಲಿರಬಾರದು! ಏಲಿಯನ್ ಗಳ ಸಂಶೋಧನೆಗಾಗಿ 100 ದಶಲಕ್ಷ ಡಾಲರ್‍ನಷ್ಟು ಹಣಕಾಸು ನೆರವು ನೀಡುತ್ತಿರುವ ರಷ್ಯಾದ ಕೋಟ್ಯಧಿಪತಿ ಯೂರಿ ಮಿಲ್ನರ್ ಅವರು ಈ ಬಹುಮಾನ ಘೋಷಿಸಿದ್ದಾರೆ. ಕಳೆದ ವಾರವಷ್ಟೇ ಖ್ಯಾತ ಬ್ರಿಟೀಷ್ ಭೌತ ಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರು ಲಂಡನ್‍ನ ರಾಯಲ್ ಸೊಸೈಟಿಯಲ್ಲಿ ಅನ್ಯಗ್ರಹ ಜೀವಿಗಳ ಪತ್ತೆ ಯೋಜನೆಗೆ ಚಾಲನೆ ನೀಡಿದ್ದಾರೆ.
ಮೊದಲಿಗೆ ಅನ್ಯಗ್ರಹದ ನಾಗರಿಕರಿಗೆ ಭೂಮಿಯ ವತಿಯಿಂದ ಒಂದು ಉತ್ತಮ ಸಂದೇಶವನ್ನು ಕಳುಹಿಸ ಬೇಕಾಗಿದೆ. ಅದಕ್ಕಾಗಿ ಜನರಿಂದ ಸಂದೇಶವನ್ನು ಆಹ್ವಾನಿಸುತ್ತಿದ್ದೇವೆ. ಸಂದೇಶಗಳು ಅನ್ಯಗ್ರಹಗಳನ್ನು ತಲುಪಲು ಇನ್ನೂ ಸಾವಿರಾರು ವರ್ಷ ತಲುಪಬಹುದು. ಆದರೆ, ಅದರಲ್ಲಿ ಸಾಕಷ್ಟು ಮಾಹಿತಿ, ವಿವರಗಳಿರಬೇಕಾದ್ದು ಕಡ್ಡಾಯ ಎಂದು ಖಗೋಳಶಾಸ್ತ್ರಜ್ಞ ಫ್ರಾಂಕ್ ಡ್ರೇಕ್ ತಿಳಿಸಿದ್ದಾರೆ.
Advertisement