ಇಮೇಲ್ ಬಂದಿದ್ದು ಯಾವಾಗ?

ಆಕ್ಸಫರ್ಡ್ ನಿಘಂಟು `ಇಮೇಲ್ ಪದದ ಬಳಕೆ ಅಧಿಕೃತವಾಗಿ ಮೊದಲು ಆದದ್ದು ಎಲ್ಲಿ, ಯಾವಾಗ ಎಂಬ ಪ್ರಶ್ನೆಗೆ ಉತ್ತರ ಜಾಲಾಡಲು ಆರಂಭಿಸಿದೆ...
ಇ-ಮೇಲ್ ಮತ್ತು ಆಕ್ಸಫರ್ಡ್ ನಿಘಂಟು
ಇ-ಮೇಲ್ ಮತ್ತು ಆಕ್ಸಫರ್ಡ್ ನಿಘಂಟು

ವಾಷಿಂಗ್ಟನ್: ಆಕ್ಸಫರ್ಡ್ ನಿಘಂಟು `ಇಮೇಲ್ ಪದದ ಬಳಕೆ ಅಧಿಕೃತವಾಗಿ ಮೊದಲು ಆದದ್ದು ಎಲ್ಲಿ, ಯಾವಾಗ ಎಂಬ ಪ್ರಶ್ನೆಗೆ ಉತ್ತರ ಜಾಲಾಡಲು ಆರಂಭಿಸಿದೆ.

1857ರಲ್ಲಿ ಪದಗಳನ್ನು ಹೆಕ್ಕುವ ಮೂಲಕ ಕಾರ್ಯಾರಂಭ ಮಾಡಿದ ಆಕ್ಸಫರ್ಡ್ ಎಲ್ಲ ಪದಗಳ ಮೂಲ ಹಾಗೂ ಅಧಿಕೃತವಾಗಿ ಮೊದಲು ಬಳಕೆಯಾದ ಸಂದರ್ಭಗಳನ್ನು ಹುಡುಕಲಾರಂಭಿಸಿದೆ. ಇಮೇಲ್ ಎಂದು ಕರೆಯುವ ಮೊದಲು ಇಲೆಕ್ಟ್ರಾನಿಕ್ ಮೇಲ್ ಎಂದು ಕರೆಯಲಾ ಗುತ್ತಿತ್ತು. ಎಲ್ಲವನ್ನೂ ಹ್ರಸ್ವಗೊಳಿಸಿ ಬರೆ ಯುವ ಹಾಗೂ ಬಳಸುವ ಪದ್ದತಿ ದಿನೇದಿನೆ ಚಾಲ್ತಿಗೆ ಬಂದ ಕಾರಣ ಅದೀಗ ಇಮೇಲ್ ಆಗಿದೆ.

ಆದರೆ ಅದನ್ನು ಮೊಟ್ಟಮೊದಲು ಬಳಸಿದ್ದು ಯಾವಾಗ ಎಂಬುದರ ಶೋಧ ನಡೆದಿದೆ ಎಂದು ಆಕ್ಸ್ ಫರ್ಡ್ ವರ್ಡ್ ಬ್ಲಾಗ್ ತಿಳಿಸಿದೆ. ಸದ್ಯದ ಮಾಹಿತಿಯ ಪ್ರಕಾರ 1975ರಲ್ಲಿ ಇಲೆಕ್ಟ್ರಾನಿಕ್ ಮೇಲ್ ಎಂದು ಬಳಸಲಾಯ್ತು. ಅದಾಗಿ 4 ವರ್ಷಗಳ ನಂತರ ಅಂದರೆ 1979ರಲ್ಲಿ ಇಮೇಲ್ ಎಂಬ ಪದ ಬಳಕೆಯಾಯ್ತು ಎಂದು ಯುಎಸ್ ಟುಡೇ ವರದಿ ಮಾಡಿದೆ. ಅದೇ ವರ್ಷವನ್ನು ಅಧಿಕೃತವೆಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ಜರ್ನಲ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com