ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ಡಿಸೆಂಬರ್ ವೇಳೆಗೆ 4 ಸಾವಿರ ರು.ಗೆ 4ಜಿ ಸ್ಮಾರ್ಟ್ ಫೋನ್: ಮುಖೇಶ್ ಅಂಬಾನಿ

ದೇಶದ ಖ್ಯಾತ ದೈತ್ಯ ಉಧ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯು 2015 ಡಿಸೆಂಬರ್ ಅಂತ್ಯದ ವೇಳೆಗೆ ಕೇವಲ 4 ಸಾವಿರ ರು.ಗಳ 4ಜಿ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ತರುವುದಾಗಿ ಹೇಳಿದೆ.

ಮುಂಬೈ: ದೇಶದ ಖ್ಯಾತ ದೈತ್ಯ ಉಧ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯು 2015 ಡಿಸೆಂಬರ್ ಅಂತ್ಯದ ವೇಳೆಗೆ ಕೇವಲ 4 ಸಾವಿರ ರು.ಗಳ 4ಜಿ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ತರುವುದಾಗಿ ಹೇಳಿದೆ.

ಮುಂಬೈನಲ್ಲಿ ನಡೆದ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಖೇಶ್ ಅಂಬಾನಿ ಅವರು 2015-16ನೇ ಸಾಲಿನ ತಮ್ಮ ಸಂಸ್ಥೆಯ ಗುರಿಗಳ ಕುರಿತು ಮಾತನಾಡಿದರು. ಈ ವೇಳೆ ಅತಿ ಕಡಿಮೆ ಬೆಲೆಯ 4ಜಿ ಸ್ಮಾರ್ಟ್ ಫೋನ್ ಅನ್ನು ಕೂಡ ಭಾರತೀಯ ಮಾರುಕಟ್ಟೆಗೆ ಜಾರಿ ಮಾಡುವುದಾಗಿ ಹೇಳಿದರು. 4ಜಿ ಸ್ಮಾರ್ಟ್ ಫೋನ್ ಯೋಜನೆ ಕುರಿತಂತೆ ಜಿಯೋ ಅಂತಿಮ ಹಂತವಾಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ರಿಲಯನ್ಸ್ ಸಂಸ್ಥೆ 4ಜಿ ಸೇವೆಯನ್ನು ಆರಂಭಿಸಲಿದೆ ಎಂದು ಅವರು ಹೇಳಿದರು.

ಇನ್ನು ಜಿಯೊ ಸಂಸ್ಥೆಯೊಂದಿಗೆ ಸೇರಿ ರಿಲಾಯನ್ಸ್ ಸಂಸ್ಥೆಯು 4ಜಿ ಸೇವೆಯನ್ನು ಎಲ್ ಟಿಯಿ ತಂತ್ರಜ್ಞಾನದೊಂದಿಗೆ 800 ಮೆಗಾಹರ್ಟ್ಜ್, 1800 ಮೆಗಾಹರ್ಟ್ಜ್, 2300ಮೆಗಾಹರ್ಟ್ಜ್ ಬ್ಯಾಂಡ್ ಗಳಲ್ಲಿ ನೀಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಜೊತೆಗೆ ದೇಶವ್ಯಾಪಿ 2300 ಮೆಗಾಹರ್ಟ್ಜ್ ಕಂಪನಾಂಕಗಳ ಮೂಲಕ ಸೇವೆ ಒದಗಿಸಲಿದ್ದು, ಈ ಪೈಕಿ ರಿಲಯನ್ಸ್ ಸಂಸ್ಥೆ 800 ಮೆಗಾಹರ್ಟ್ಜ್ ಕಂಪನಾಂಕಗಳನ್ನು ಮತ್ತು ಇತರೆ 1800 ಮೆಗಾಹರ್ಟ್ಜ್ ಗಳನ್ನು ದೇಶದ ಇತರೆ 22 ಟೆಲಿಕಾಂ ಸಂಸ್ಥೆಗಳೊಂದಿಗೆ ಸೇರಿ ನೀಡಲಾಗುತ್ತದೆ ಎಂದು ಹೇಳಿದೆ.

ಈ ಯೋಜನೆಗೆ ರಿಲಯನ್ಸ್ ಸಂಸ್ಥೆ ಸುಮಾರು 70 ಸಾವಿರ ಕೋಟಿ ಬಂಡವಾಳ ಹೂಡುತ್ತಿದ್ದು, ಡಿಜಿಟಲ್ ಉದ್ಯಮ ಇತಿಹಾಸದಲ್ಲಿಯೇ ಇದು ದೊಡ್ಡ ಪ್ರಮಾಣದ ಹೂಡಿಕೆಯಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com