ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳಯಾನ ನೌಕೆಗೆ ಇಂಧನ ಕೊರತೆ ಇಲ್ಲ

ಇಸ್ರೋ ಮಹತ್ವಾಕಾಂಕ್ಷೆ ಯೋಜನೆಯಾದ `ಮಂಗಳಯಾನ'ದ ನೌಕೆ ಮಂಗಳ ಗ್ರಹದಲ್ಲೇ ಹಲವು ವರ್ಷಗಳವರೆಗೆ ಉಳಿಯಲು ಅಗತ್ಯವಾದ ಇಂಧನ...
Published on

ಬೆಂಗಳೂರು: ಇಸ್ರೋ ಮಹತ್ವಾಕಾಂಕ್ಷೆ ಯೋಜನೆಯಾದ `ಮಂಗಳಯಾನ'ದ ನೌಕೆ ಮಂಗಳ ಗ್ರಹದಲ್ಲೇ ಹಲವು ವರ್ಷಗಳವರೆಗೆ ಉಳಿಯಲು ಅಗತ್ಯವಾದ ಇಂಧನ ಹೊಂದಿದೆ ಎಂದು ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್ ತಿಳಿಸಿದರು.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ `ಸಮಾಜಕ್ಕಾಗಿ ವಿಜ್ಞಾನ' ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, 45ಕೆಜಿ ಇಂಧನ ನೌಕೆಯಲ್ಲಿ ಇನ್ನೂ ಉಳಿದಿದ್ದು, ಇದನ್ನೇಬಳಸಿಕೊಳ್ಳಲಾಗುತ್ತಿದೆ. ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿದ ನಂತರ ಇಂಧನದಲ್ಲಿನ ಸಮಸ್ಯೆಯಿಂದಾಗಿ 6 ತಿಂಗಳಿಗೂ ಹೆಚ್ಚಿನ ಕಾಲ ಉಳಿಯಲು ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು. ಮಾರ್ಚ್ ವೇಳೆಗೆ ಇಂಧನ ಲಭ್ಯತೆಯಿಂದ ಇನ್ನೂ 6 ತಿಂಗಳ ಕಾಲ ನೌಕೆ ಉಳಿಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇಂಧನ ಇನ್ನೂ ಉಳಿದಿರುವುದರಿಂದ ಹಲವು ವರ್ಷಗಳವರೆಗೂ ನೌಕೆ ಉಳಿಯುವ ಸಾಧ್ಯತೆಯಿದೆ ಎಂದರು.

ಉಪಗ್ರಹದ ಉಡಾವಣೆ ವೇಳೆ ನೌಕೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದವು. ಆದರೆ, ಉಡಾವಣೆಯಾಗುವಾಗ ಯಾವುದೇ ದುರಂತ ಅಥವಾ ವಿಫಲತೆ ಸಂಭವಿಸಲಿಲ್ಲ. ಉಡಾವಣೆಯ ವೇಳೆ ಲೋಪಗಳ ಬಗ್ಗೆಯೂ ಗುರುತಿಸಬೇಕಿದ್ದು, ಇಂತಹ ಯಾವುದೇ ಸಮಸ್ಯೆಗಳು ಉಂಟಾಗಲಿಲ್ಲ. ಜೂ.8ರಿಂದ ಆರಂಭವಾಗಿ ಜೂ.22ರವರೆಗೆ ಸಂವನಹನದಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿತ್ತು. ಆದರೆ, ಆ ಅವಧಿ ಪೂರ್ಣಗೊಂಡಿದ್ದು, ಯಾವುದೇ ದುರಂತ ಸಂಭವಿಸಲಿಲ್ಲ. ಎರಡೂವರೆ ವರ್ಷಗಳ ಬಳಿಕ ಮತ್ತೆ ಇದೇ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಉಪಗ್ರಹದ ಜೊತೆ ಸಂವಹನ ಸಾಧಿಸಲು ಈಗ ಸಾಧ್ಯವಾಗಿದ್ದು, ಜೂ.19ರಿಂದ ಮತ್ತೆ ಸಂವಹನ ಆರಂಭವಾಗಿದೆ ಎಂದರು. ಮಂಗಳಯಾನ ನೌಕೆ ಗ್ರಹವನ್ನು 100 ಬಾರಿಸುತ್ತಿದ್ದು, ಅಧ್ಯಯನಗಳಿಗೆ ಅಗತ್ಯವಾದ ಛಾಯಾಚಿತ್ರಗಳನ್ನು ಸಂಗ್ರಹಿಸಲಾಗಿದೆ. 400 ಫ್ರೇಮ್ ಗಳಚಿತ್ರಗಳನ್ನು ಇದುವರೆಗೆ ತೆಗೆದಿದ್ದು, ಪ್ರತಿ ಬಾರಿ ಪ್ರದಕ್ಷಿಣೆ ಪೂರ್ಣಗೊಳಿಸುವಾಗ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com