ಜಪಾನಿನಿಂದ ಹವಾಯಿಗೆ ಹೊರಟ ಸೌರಶಕ್ತಿ ಚಾಲಿತ 'ಇಂಪಲ್ಸ್' ವಿಮಾನ

ಯಾವುದೇ ಇಂಧನವಿಲ್ಲದೆ ಸೌರಶಕ್ತಿಯಿಂದಲೇ ಚಲಿಸುವ 'ಇಂಪಲ್ಸ್' ವಿಮಾನ ಸೋಮವಾರ ಬೆಳಗ್ಗೆ ಜಪಾನ್ ನಿಂದ ಹವಾಯಿ ಕಡೆಗೆ ಹೊರಟಿದೆ.
ಸೋಲಾರ್ ಇಂಪಲ್ಸ್ -೨ ವಿಮಾನ
ಸೋಲಾರ್ ಇಂಪಲ್ಸ್ -೨ ವಿಮಾನ

ಟೋಕಿಯೋ: ಯಾವುದೇ ಇಂಧನವಿಲ್ಲದೆ ಸೌರಶಕ್ತಿಯಿಂದಲೇ ಚಲಿಸುವ 'ಇಂಪಲ್ಸ್' ವಿಮಾನ ಸೋಮವಾರ ಬೆಳಗ್ಗೆ ಜಪಾನ್ ನಿಂದ ಹವಾಯಿ ಕಡೆಗೆ ಹೊರಟಿದೆ. ಈ ವಿಮಾನ ನಿಗದಿಯಾಗದೆ ಇದ್ದರೂ ಜಪಾನಿನಲ್ಲಿ ಒಂದು ತಿಂಗಳು ತಂಗಿತ್ತು.

ಸೋಲಾರ್ ಇಂಪಲ್ಸ್ -೨ ಕೇಂದ್ರ ಜಪಾನಿನ ನಗೋಯಾ ವಿಮಾನನಿಲ್ದಾಣದಿಂದ ಸುಮಾರು ಬೆಳಗ್ಗೆ ೩ ಘಂಟೆಗೆ ಹೊರಟಿತು. ವಿಮಾನದ ಚಾಲಕ ಹವಾಯಿಗೆ ೧೨೦ ಘಂಟೆಗಳ ಕಾಲ ಹಾರಾಟ ಮಾಡಲಿದ್ದಾರೆ ಮತ್ತು ಇದು ಈ ವಿಮಾನದ ಅತಿ ದೊಡ್ಡ ಸಮಯದ ಹಾರಾಟವಾಗಲಿದೆ ಎನ್ನಲಾಗಿದೆ.

ಈ ಹಿಂದೆ ಚೈನಾದ ನ್ಯಾಂಜಿಂಗ್ ನಿಂದ ಹವಾಯಿಗೆ ಹೊರಟಿದ್ದ ಇಂಪಲ್ಸ್ ಹಿತಕರ ವಾತಾವರಣದ ಕೊರತೆಯಿಂದಾಗಿ ಜಪಾನ್ ನಲ್ಲಿ ಜೂನ್ ೧ ರಂದು ಇಳಿದಿತ್ತು.

ಪೆಸಿಫಿಕ್ ಸಾಗರದ ಮೇಲೆ ಹವಾಯಿಗೆ ಹಾರುವ ಈ ವಿಮಾನ ಪ್ರವಾಸ ತುಸು ಅಪಾಯಕಾರಿ ಎನ್ನಲಾಗಿದೆ ಏಕೆಂದರೆ ತುರ್ತು ಪರಿಸ್ಥಿತಿಯಲ್ಲಿ ವಿಮಾನ ಇಳಿಸಲು ಯಾವುದೇ ವಾಯುಮಾನ ಅಡ್ಡೆಗಳಿಲ್ಲ.

ತನ್ನ ರೆಕ್ಕೆಯ ಮೇಲೆ ೧೭೦೦೦ ಸೋಲಾರ್ ಸೆಲ್ ಗಳನ್ನು ಹೊಂದಿರುವ ಸೋಲಾರ್ ಇಂಪಲ್ಸ್-೨ ಸಂಪೂರ್ಣವಾಗಿ ಸೌರಶಕ್ತಿಯನ್ನೇ ಬಳಸಿ ಹಾರಾಟ ನಡೆಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com