
ಸಾಮಾಜಿಕ ಚಾಲತಾಣ ಫೇಸ್ ಬುಕ್ ಸೋಲಾರ್ ವಿಮಾನದ ಮೂಲಕ ಇಂಟರ್ನೆಟ್ ಸೇವೆಯನ್ನು ಒದಗಿಸುವ ವ್ಯವಸ್ಥೆಗೆ ಕೈಹಾಕಿದೆ.
ಈ ಸಂಬಂಧ ಮಾತನಾಡಿರುವ ಫೇಸ್‌ಬುಕ್ ಉಪಾಧ್ಯಕ್ಷ ಚ್ಯಾರಿಸ್ ಡೇನಿಯಲ್, ಸೌರ ವಿಮಾನದ ಮೂಲಕ ಅಂತರ್ಜಾಲ ಸೇವೆಯನ್ನು ಒದಗಿಸುವ ವ್ಯವಸ್ಥೆಗೆ ಚಿಂತನೆ ನಡೆಸಲಾಗಿದ್ದು, ಇದನ್ನು ಭಾರತದಲ್ಲಿ ಪರೀಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಸೋಲಾರ್ ವಿಮಾನ ವೆಚ್ಚ ಕಡಿಮೆ ಇರಲಿದ್ದು, ಎತ್ತರದಲ್ಲಿ ಹಾರಾಡುವ ಕಾರಣ ಗುಣಮಟ್ಟದ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಸೂರ್ಯನಿಂದ ಶಕ್ತಿ ಪಡೆಯುವ ವಿಮಾನಕ್ಕೆ ಭೂಮಿ ಮೇಲೆ ಹೆಚ್ಚಿನ ಮೂಲಸೌಕರ್ಯದ ಅಗತ್ಯವಿಲ್ಲ ಹಾಗೆ, ಅದರ ವ್ಯಾಪ್ತಿಯು ವಿಶಾಲವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಹಲವು ಯೋಜನೆಗಳು ಅನಾವರಣಗೊಳ್ಳಲಿದ್ದು, ಸಂಪರ್ಕ ತಂತ್ರಜ್ಞಾನದ ಪ್ರಯೋಗಾಲಯವನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಸಂಪರ್ಕ ಕ್ಷೇತ್ರ ಅಭಿವೃದ್ಧಿಗೆ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಚ್ಯಾರಿಸ್ ಡೇನಿಯಲ್ ತಿಳಿಸಿದ್ದಾರೆ.
Advertisement